ಹೀರೊ ಮ್ಯಾಸ್ಟ್ರೊ: ತರುಣರ ನಲ್ಮೆಯ ಸ್ಕೂಟರ್

ಕಾಲೇಜು ತರುಣರಿಗೆ, ಯುವಕರಿಗೆ ಮ್ಯಾಸ್ಟ್ರೊ ಅಚ್ಚುಮೆಚ್ಚಿನ ಸ್ಕೂಟರ್. ಹಾಗಂತ ಇದನ್ನು ತರುಣಿಯರು ಇಷ್ಟಪಡುತ್ತಿಲ್ಲವೆಂದಲ್ಲ. ಆದರೆ ಯುವಕರು ಹೆಚ್ಚು ಈ ಸ್ಕೂಟರ್ ಇಷ್ಟಪಡುತ್ತಾರೆ. ಹೀರೊ ಪ್ಲೆಷರ್ ಸ್ಕೂಟರಿಗೆ ಹೋಲಿಸಿದರೆ ಇದರ ಗಾತ್ರ ಹಿರಿದು. ಪ್ಲೆಷರ್ ಸ್ಕೂಟರಿಗಿಂತ ಮ್ಯಾಸ್ಟ್ರೊ ಹೆಚ್ಚು ಆಕರ್ಷಕವೂ ಹೌದು.

ಮೊದಲ ನೋಟಕ್ಕೆ ಹೀರೊ ಮ್ಯಾಸ್ಟ್ರೊ ಗಾತ್ರ ದೊಡ್ಡದೆಂದು ಅನಿಸುತ್ತದೆ. ಪುರುಷರು ಸಹಜವಾಗಿ ದೊಡ್ಡದನ್ನು ಇಷ್ಟಪಡುತ್ತಾರೆ. ಅದಕ್ಕೆ ತರುಣರು ಮ್ಯಾಸ್ಟ್ರೊ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಸಣ್ಣ, ಹಗುರ ಸ್ಕೂಟಿ ಪ್ರಿಯ ಮಹಿಳಾಮಣಿಯರಿಗೆ ಮ್ಯಾಸ್ಟ್ರೊ ಅಂದರೆ ಅಷ್ಟಕಷ್ಟೇ!

ಹೋಂಡಾ ಕಂಪನಿಯಿಂದ ಕಳಚಿಕೊಂಡ ನಂತರದ ಹೀರೊ ಮೊಟೊಕಾರ್ಪ್ ಎರಡನೇ ಉತ್ಪನ್ನವೆಂದರೆ ಮ್ಯಾಸ್ಟ್ರೊ ಸ್ಕೂಟರ್. ಇದರ ಸ್ಟೈಲಿಶ್ ಲುಕ್ ನೋಡಿದ್ರೆ ಇದರಲ್ಲಿ ಹೋಂಡಾ ಹಾರ್ಡ್ ವೇರ್ ಇರುವುದು ಖಚಿತ. ಹೋಂಡಾ ಆಕ್ಟಿವಾದಲ್ಲಿದ್ದ 109 ಸಿಸಿಯ ಎಂಜಿನನ್ನೇ ಪರಿಷ್ಕರಿಸಿ ಮ್ಯಾಸ್ಟ್ರೊ ಸ್ಕೂಟರಿಗೆ ಬಳಸಲಾಗಿದೆ. ಸಿವಿಟಿ ಗೇರ್ ಕೂಡ ಆಕ್ಟಿವಾದ್ದೇ.

ಹೋಂಡಾ ಆಕ್ಟಿವಾದ ಚಾಸೀಸ್, ಸಸ್ಪೆನ್ಷನ್ ಹೀರೊ ಮ್ಯಾಸ್ಟ್ರೊದಲ್ಲಿದೆ. ಆದರೆ ಮ್ಯಾಸ್ಟ್ರೋ ವೀಲ್ ಬೇಸ್ ಮಾತ್ರ ಕೊಂಚ ವಿಶಾಲವಾಗಿದೆ. ಮ್ಯಾಸ್ಟ್ರೊ ಸ್ಕೂಟರ್ ತೂಕ 110 ಕೆ.ಜಿ ಇದೆ. ಇಷ್ಟು ತೂಕದ ಸ್ಕೂಟರ್ ಕೆಲವು ತರುಣಿಯರು ಇಷ್ಟಪಡುವುದಿಲ್ಲ.

ಇನ್ಸುಟ್ರುಮೆಂಟ್ ವಿನ್ಯಾಸ ಅಂದವಾಗಿದೆ. ಡಿಜಿಟಲ್ ಟ್ರಿಪ್ ಮತ್ತು ಫ್ಯೂಯಲ್ ಗೇಜ್ ಆಕರ್ಷಕ. ಸೀಟಿನಡಿ ಸ್ಥಳಾವಕಾಶವೂ ವಿಶಾಲವಾಗಿದೆ. ಬ್ರೇಕಿಂಗ್ ಕ್ಷಮತೆ ಆಕ್ಟಿವಾದಂತೆ ಇದೆ. ನೀವು ಆಕ್ಟಿವಾ ಸ್ಕೂಟರನ್ನು ಇಷ್ಟಪಟ್ಟರೆ ಖಂಡಿತವಾಗಿಯೂ ಮ್ಯಾಸ್ಟ್ರೊ ಸ್ಕೂಟರ್ ಇಷ್ಟಪಡುತ್ತಿರಿ.

ಹೀರೊ ಮ್ಯಾಸ್ಟ್ರೊ ಟೆಕ್ ಮಾಹಿತಿ
* ಎಂಜಿನ್: ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್
* 109 ಸಿಸಿ
* ಗರಿಷ್ಠ ಶಕ್ತಿ: 7,500 ಆವರ್ತನಕ್ಕೆ 8.2 ಅಶ್ವಶಕ್ತಿ
* ಗರಿಷ್ಠ ಟಾರ್ಕ್: 5,500 ಆವರ್ತನಕ್ಕೆ 9.1 ಎನ್ಎಂ
* ಗೇರ್ ಬಾಕ್ಸ್: ಸಿವಿಟಿ
* ವೀಲ್ ಬೇಸ್(ಮಿ.ಮೀ): 1,240
* ತೂಕ: 110 ಕೆಜಿ
* ಇಂಧನ ಟ್ಯಾಂಕ್ ಸಾಮರ್ಥ್ಯ: 5.3 ಲೀಟರ್

ಹೀರೊ ಮ್ಯಾಸ್ಟ್ರೊ ಬೆಂಗಳೂರು ಎಕ್ಸ್ ಶೋರೂಂ ದರ 47,500 ರುಪಾಯಿ
ಆನ್ ರೋಡ್ ದರ: 55,565 ರುಪಾಯಿ.

ಇದು ತರುಣರ ಅಚ್ಚುಮೆಚ್ಚಿನ ಸ್ಕೂಟರೆಂದು ಕಂಪನಿ ಬೊಬ್ಬೆ ಹೊಡೆಯುತ್ತಿದೆ. ಆದರೆ ಕಂಪನಿ ಹೇಳುವಷ್ಟು ಪೌರುಷದ ಸ್ಕೂಟರ್ ಇದೆಂದು ಅನಿಸುತ್ತಿಲ್ಲ. ನೀವು ಇದನ್ನು ಒಪ್ತಿರಾ?

Most Read Articles

Kannada
English summary
All New Hero Maestro Scooter Review. Hero Maestro Best Scooter for College-Students, Maestro Mens Scooter. Read Hero Maestro Price, technical specification, Review. Hero Maestro Bangalore Price. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X