ಬೈಕಿಗೆ ರಿವರ್ಸ್ ಗೇರ್ ಕಂಡುಹಿಡಿದ ವಿದ್ಯಾರ್ಥಿಗಳು

ಹೆಚ್ಚಾಗಿ ಹಿರಿಯರು, ಅಂಗವಿಕಲರು ಬಳಸುವ ಮೂರು ಚಕ್ರದ ಅಥವಾ ನಾಲ್ಕು ಚಕ್ರದ ಮೋಟರ್ ಸೈಕಲುಗಳಿಗಾಗಿ ವಿಶೇಷ ಗೇರ್ ಬಾಕ್ಸೊಂದನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಇದರಿಂದಾಗಿ ಕಾರುಗಳಿರುವಂತೆ ಈ ಬೈಕನ್ನು ಕೂಡ ರಿವರ್ಸ್ ಗೇರ್ ಮೂಲಕ ಹಿಂದಕ್ಕೆ ಚಲಿಸುವಂತೆ ಮಾಡಲು ಸಾಧ್ಯವಾಗಿದೆ.

ಉತ್ತರ ಪ್ರದೇಶದ ಕುರುಕ್ಷೇತ್ರ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮನ್ ದೀಪ್ ದರ್ಶೂಲ್, ದಿಶಾಂತ್ ಛೋಪ್ರಾ, ರೋಹ್ತಾಶ್ ಬುರಾ ಮತ್ತು ಮನೀಶ್ ಧಂಡಾ ಈ ವಿಶೇಷ ಗೇರ್ ಬಾಕ್ಸ್ ಅಭಿವೃದ್ಧಿಪಡಿಸಿದ್ದಾರೆ. ಇದು ಅಗ್ಗದ ಗೇರ್ ಬಾಕ್ಸ್ ಆಗಿದ್ದು, ಸುಲಭವಾಗಿ ನಾಲ್ಕು ಅಥವಾ ಮೂರು ಚಕ್ರದ ಬೈಕುಗಳಿಗೆ ಅಳವಡಿಸಬಹುದಾಗಿದೆ.

ಈ ವಿದ್ಯಾರ್ಥಿಗಳು ಕಾಲೇಜಿನ ಪ್ರಾಜೆಕ್ಟ್ ಉದ್ದೇಶದಿಂದ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಬೈಕಿನ ಎಂಜಿನ್ ಸಮೀಪ ಇದನ್ನು ಅಳವಡಿಸಬಹುದಾಗಿದೆ. ಕೈಯಿಂದ ಲಿವರ್ ಗೇರ್ ನಿರ್ವಹಣೆ ಮಾಡುವ ಮೂಲಕ ಈ ರಿವರ್ಸ್ ಗೇರ್ ಅಪರೇಟ್ ಮಾಡಬಹುದಾಗಿದೆ.

ವಿದ್ಯಾರ್ಥಿಗಳ ಈ ವಿಶೇಷ ಗೇರ್ ಬಾಕ್ಸ್ ತಂತ್ರಜ್ಞಾನವು ಅಂಗವಿಕಲರು ಮತ್ತು ವಯಸ್ಸಾದ ವ್ಯಕ್ತಿಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಈ ತಂತ್ರಜ್ಞಾನಕ್ಕೆ ಕೇವಲ 4,500 ರುಪಾಯಿಂದ 5,500 ರುಪಾಯಿ ವೆಚ್ಚವಾಗಿದೆ ಎಂದು ಈ ವಿದ್ಯಾರ್ಥಿಗಳು ಹೇಳಿದ್ದಾರೆ.

Most Read Articles

Kannada
English summary
Now you can reverse your motorcycle too. A group of four students at Terii Engineering College in Kurukshetra, Uttar Pradesh have developed a reverse gearbox for motor cycles.
Story first published: Tuesday, June 26, 2012, 12:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X