ಎರಿಕ್ ಬ್ಯುಯೆಲ್‌ನಿಂದ ನೂತನ ಸ್ಪೋರ್ಟ್ಸ್ ಬೈಕ್

By Nagaraja

ಕ್ರೀಡಾ ಉತ್ಪಾದಕ ಸ್ಟ್ರೀಟ್ ಹಾಗೂ ರೇಸಿಂಗ್ ಮೋಟಾರ್ ಸೈಕಲ್ ತಯಾರಕ ಸಂಸ್ಥೆಯಾಗಿರುವ ಎರಿಕ್ ಬ್ಯುಯೆಲ್ ರೇಸಿಂಗ್ (ಇಬಿಆರ್) ಮುಂಬರುವ ಪ್ರತಿಷ್ಠಿತ ಅಮೆರಿಕನ್ ಅಂತರಾಷ್ಟ್ರೀಯ ಮೋಟಾರ್ ಸೈಕಲ್ ಪ್ರದರ್ಶನ (AIMExpo) ಮೇಳದಲ್ಲಿ ಅನಾವರಣಗೊಳಿಸಲಿದೆ.

ಈ ನೂತನ ಅಮೆರಿಕನ್ ಸ್ಪೋರ್ಟ್ಸ್ ಬೈಕ್ ಅಕ್ಟೋಬರ್ 16ರಂದು ಅನಾವರಣಗೊಳ್ಳಲಿದೆ. ನೂತನ ಸ್ಟ್ರೀಟ್ ಲಿಗಲ್ ಗರಿಷ್ಠ ನಿರ್ವಹಣೆಯ 1190ಆರ್‌ಎಕ್ಸ್ ಬೈಕ್, 1190ಆರ್‌ಎಸ್ ಸೂಪರ್ ಬೈಕ್‌ನ ಮುಂದುವರಿದ ಭಾಗವಾಗಿದೆ. ಇದು 1190 ಸಿಸಿ ವಿಟ್ವಿನ್ ರೊಟಕ್ಸ್ ಎಂಜಿನ್ ಹೊಂದಿರಲಿದ್ದು, ಅದ್ಭುತ ನಿರ್ವಹಣೆ ಜತೆ ಉತ್ತಮ ಹ್ಯಾಡ್ಲಿಂಗ್ ಅನುಭವ ನೀಡಲಿದೆ. ಇದು 170 ಅಶ್ವಶಕ್ತಿ (9750 ಆರ್‌ಪಿಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.


ಹಾಗಿದ್ದರೂ 1190ಆರ್‌ಎಸ್ ಸೂಪರ್ ಬೈಕ್‌ನಲ್ಲಿರುವ ವೈಶಿಷ್ಟ್ಯಗಳನ್ನು 1190ಆರ್‌ಎಕ್ಸ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಮಾತನಾಡಿದ ಎರಿಕ್ ಬ್ಯುಲೆಯ್ ಸಂಸ್ಥಾಪಕ ಎರಿಕ್ ಬ್ಯುಯೆಲ್, ಇದು ಸಮರ್ಪಣೆಯ, ನಾವೀನ್ಯತೆಯ ಹಾಗೂ ದಶಕಗಳ ಕಾಲ ಒಟ್ಟಾಗಿ ಕೆಲಸ ಮಾಡಿರುವುದರ ಫಲವಾಗಿದೆ ಎಂದಿದ್ದಾರೆ.

ನಿಮ್ಮ ಮಾಹಿತಿಗಾಗಿ ಎರಿಕ್ ಬ್ಯುಯೆಲ್ ಜತೆ ತಂತ್ರಗಾರಿಕೆ ಹಂಚಿಕೊಂಡಿರುವ ಭಾರತದ ಅತಿದೊಡ್ಡ ದ್ವಿಚಕ್ರ ಉತ್ಪಾದಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, 2013 ಜುಲೈ 1ರಂದು, ಬರೋಬ್ಬರಿ 25 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಎರಿಕ್ ಬ್ಯುಯೆಲ್‌ನ ಶೇಕಡಾ 49.2ರಷ್ಟು ಶೇರನ್ನು ತನ್ನದಾಗಿಸಿಕೊಂಡಿತ್ತು.

Most Read Articles

Kannada
English summary
Erik Buell racing has announced that it will unveil its brand new sports bike - 1190RX - at the AIMExpo next month. The liter class bike will be a toned down version of EBR's 1190RS high-end race spec machine, which competes in the AMA Championship.
Story first published: Monday, September 23, 2013, 13:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X