ಅಮೆರಿಕದಲ್ಲಿ ಹೀರೊ ಜಲಕ್ ಯಶಸ್ಸು ಕಂಡಿತೇ?

By Nagaraja

ಭಾರತದಲ್ಲಿ ಸುಭದ್ರ ನೆಲೆ ಸ್ಥಾಪಿಸಿರುವ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೊ ಮೊಟೊಕಾರ್ಪ್, ಇದೀಗ ತನ್ನ ದೃಷ್ಟಿಯನ್ನು ವಿದೇಶದತ್ತ ಹಾಯಿಸಿದೆ.

ಗ್ವಾಂಟಿಮಾಲಾ, ಇಐ ಸಾಲ್ವಾಡೋರ್ ಹಾಗೂ ಹೊಂಡುರಾಸ್‌ಗಳಂತಹ ಕೇಂದ್ರ ಅಮೆರಿಕಾ ಪ್ರಾಂತ್ಯಗಳಲ್ಲಿ ಹೀರೊ ಹೋಂಡಾ ನೆಲೆ ಸ್ಥಾಪಿಸಿದೆ. ಇದಕ್ಕಾಗಿ ಅಲ್ಲಿನ ಸ್ಥಳೀಯ ಇಂಡಿ ಮೋಟಾಸ್ ಜತೆ ಪಾಲುದಾರಿಕೆ ಹೊಂದಿದೆ.

ಈ ಮೂಲಕ ತನ್ನ ಬ್ರಾಂಡ್ ಆವೃತ್ತಿಗಳಾದ ಎಚ್‌ಎಫ್ ಡಾನ್, ಸ್ಲ್ಪೆಂಡರ್ ಎನ್‌ಎಕ್ಸ್‌ಜಿ, ಸೂಪರ್ ಸ್ಲ್ಪೆಂಡರ್, ಗ್ಲಾಮರ್, ಆರ್ಚಿವರ್ ಜತೆಗೆ ಹಂಕ್ ಹಾಗೂ ಕರಿಷ್ಮಾಗಳಂತಹ ಪ್ರೀಮಿಯಂ ಆವೃತ್ತಿಗಳನ್ನು ಅಮೆರಿಕದಲ್ಲಿ ಪರಿಚಯಿಸಲಿದೆ.

ಸದ್ಯ ಆರಂಭಿಸಿರುವ ಔಟ್ ಲೆಟ್ ಮೂಖಾಂತರ ಬೈಕ್ ವಿತರಣೆ ನಡೆಯಲಿರುವುದು. ಹೆಚ್ಚಿನ ಪ್ರಾಬಲ್ಯ ಹೊಂದಿದಂತೆ ಡೀಲರ್‌ಗಳ ಸಂಖ್ಯೆಯಲ್ಲೂ ವರ್ಧನೆ ಕಂಡುಬರಲಿದೆ. ದಕ್ಷಿಣ ಅಮೆರಿಕಾ ಹಾಗೂ ಆಫ್ರಿಕಾದಲ್ಲಿ ತನ್ನ ವ್ಯಾಪಾರ ಕುದುರಿಸುವ ಇರಾದೆಯನ್ನು ಹೀರೊ ಹೊಂದಿದೆ. ಭಾರತ ಹೊರತುಪಡಿಸಿ ಹೀರೊ ಈಗಾಗಲೇ ಬಾಂಗ್ಲಾದೇಶ, ಕೊಲಂಬಿಯಾ, ನೇಪಾಳ ಹಾಗೂ ಶ್ರೀಲಂಕಾದಲ್ಲಿ ವಹಿವಾಟು ಹೊಂದಿದೆ.

Most Read Articles

Kannada
English summary
Hero MotoCorp has started its operations in the Central American countries of Guatemala, El Salvador and Honduras.
Story first published: Wednesday, May 15, 2013, 11:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X