ಹೀರೊ ಸ್ಪ್ಲೆಂಡರ್‌ಗೆ ಹೋಂಡಾ ಪ್ರತಿಸ್ಪರ್ಧಿ ಸಿದ್ಧ

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೊ ಮೊಟೊಕಾರ್ಪ್ ಜತೆಗಿನ ಬಾಂಧವ್ಯ ಕಡಿದುಕೊಂಡ ಬಳಿಕ ತನ್ನದೇ ಆದ ಸ್ವತಂತ್ರ ಮಾರುಕಟ್ಟೆ ಗಟ್ಟಿ ಮಾಡುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ಸ್ ಇಂಡಿಯಾ ಸದ್ಯದಲ್ಲೇ 100 ಹಾಗೂ 110ಸಿಸಿ ವಿಭಾಗದ ಬೈಕ್‌ಗಳನ್ನು ಲಾಂಚ್ ಮಾಡಲಿವೆ.

ದೇಶದಲ್ಲಿ ದ್ವಿಚಕ್ರ ಮಾರುಕಟ್ಟೆಯಲ್ಲಿ ನಂ.1 ಸ್ಥಾನ ವಶಪಡಿಸಿಕೊಳ್ಳುವುದು ಹೋಂಡಾ ಗುರಿಯಾಗಿದೆ. ಇದರಂತೆ ದೇಶದ ಅತ್ಯಂತ ಜನಪ್ರಿಯ ಸ್ಪ್ಲೆಂಡರ್ ಮಾದರಿಗೆ ಪ್ರತಿಸ್ಪರ್ಧಿ ಲಾಂಚ್ ಮಾಡಲಿದೆ.

ಮುಂದಿನ ಒಂದೆರಡು ತಿಂಗಳೊಳಗೆ ಈ ಬೆಳವಣಿಗೆ ಕಂಡುಬರಲಿದೆ. ಇದು ದೇಶದ ಬೈಕ್ ಪ್ರಿಯರಿಗೆ ಇನ್ನಷ್ಟು ಖುಷಿ ತರುವಂತಾಗಿದೆ. ಡ್ರೀಮ್ ಸಿರೀಸ್ ತಲಹದಿಯಲ್ಲಿ ಬೈಕ್ ಅಭಿವೃದ್ಧಿಗೊಳ್ಳಲಿದ್ದು, 'ಕೆ23' ಎಂಬ ಕೋಡ್ ಪಡೆದುಕೊಂಡಿದೆ.

ಇನ್ನು ಸ್ಮರ್ದಾತ್ಮಕ ದರದಲ್ಲಿ ಗ್ರಾಹಕರನ್ನು ತಲುಪಲಿರುವುದು ಹೆಚ್ಚಿನ ಮಾರಾಟ ಕಾಯ್ದುಕೊಳ್ಳಲು ನೆರವಾಗಲಿದೆ. ಅಂದ ಹಾಗೆ 2014ರ ಆರ್ಥಿಕ ಸಾಲಿನ ವೇಳೆಗೆ ಆರು ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡುವ ಬೃಹತ್ ಯೋಜನೆಯನ್ನು ಹೋಂಡಾ ಹೊಂದಿದೆ.

Most Read Articles

Kannada
English summary
Honda Motorcycle & Scooters India is set to launch a bike against Splendor, in the mass-market 100-110cc category.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X