ಅಗ್ರ 10ರೊಳಗೆ ಪ್ರವೇಶಿಸಿದ ಮಹಿ ರೇಸಿಂಗ್ ತಂಡ

By Nagaraja

ಭಾರತ ಕ್ರಿಕೆಟ್ ತಂಡದ ನಾಯಕ ಮಹೀಂದ್ರ ಸಿಂಗ್ ಧೋನಿ ಒಡೆತನದ ಮಹಿ ರೇಸಿಂಗ್ ತಂಡ ಮೊಟೊ ಗ್ರ್ಯಾನ್ ಪ್ರಿ ವಿಶ್ವ ಬೈಕ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭರ್ಜರಿ ಆರಂಭ ಪಡೆದುಕೊಳ್ಳಲು ಯಶಸ್ವಿಯಾಗಿದೆ. ಈ ಮೂಲಕ ರೇಸಿಂಗ್ ದುನಿಯಾಕ್ಕೆ ಪ್ರವೇಶಿಸಿದ ಮಹಿ ರೇಸಿಂಗ್ ತಂಡ ಮೊದಲ ಅವಧಿಯಲ್ಲಿ ಅದ್ಭುತ ನಿರ್ಹಹಣೆ ನೀಡಿರುವುದು ಆತ್ಮವಿಶ್ವಾಸ ವರ್ಧನೆಗೆ ಕಾರಣವಾಗಿದೆ.

ಇಟಲಿಯಲ್ಲಿ ಸಾಗಿದ ಪ್ರಸಕ್ತ ಸಾಲಿನ ಮೊದಲ ಮೊಟೊ 3 ಕ್ಲಾಸ್ ರೇಸ್‌ನಲ್ಲಿ ಮಹೀಂದ್ರ ರೇಸ್ ತಂಡದ ಚಾಲಕದಾರ ಮಿಗ್ಯುಯೆಲ್ ಒಲಿವೆರಾ ಹಾಗೂ ಇರ್ಫಾನ್ ವಜ್‌ಕ್ವೆಜ್ ಅಗ್ರ ಹತ್ತರೊಳಗೆ ಗುರಿ ತಲುಪುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇವರಿಬ್ಬರು ಅನುಕ್ರಮವಾಗಿ ಐದು ಹಾಗೂ ಎಂಟನೇ ಸ್ಥಾನ ಆಲಂಕರಿಸಿದ್ದು, ತಂಡಕ್ಕೆ ಅಮೂಲ್ಯ 15 ಅಂಕಗಳನ್ನು ಸಂಪಾದಿಸಿದ್ದಾರೆ.

ನಾಲ್ಕು ತಿಂಗಳುಗಳ ಹಿಂದೆಯಷ್ಟೇ ತಯಾರಿಸಿದ್ದ ಎಂಜಿಪಿ3ಒ ಬೈಕ್‌ನಲ್ಲಿ ಮಹಿ ರೇಸಿಂಗ್ ತಂಡದ ಚಾಲಕರು ರೈಡಿಂಗ್ ನಡೆಸಿದ್ದರು. ಇದರಲ್ಲಿ ಪೋರ್ಚುಗಲ್‌ನ ಯುವ ಚಾಲಕ 18ರ ಹರೆಯದ ಒಲಿವೆರಾ ಪ್ರಭಾವಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದೀಗ ಮುಂದಿನ ರೇಸಿಂಗ್‌ಗಾಗಿ ಮಹಿ ರೇಸಿಂಗ್ ಬಳಗ ಅಮೆರಿಕದ ಆಸ್ಟನ್ ಹಾಗೂ ಟೆಕ್ಸಾಸ್‌ಗೆ ಪಯಣ ಬೆಳೆಸಲಿದೆ. ಹೊಸತಾಗಿ ನಿರ್ಮಿಸಲಾದ ಈ ಸರ್ಕ್ಯೂಟ್‌ನಲ್ಲಿ ಎರಡು ವಾರದ ಬಳಿಕ ಸ್ಪರ್ದೆ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ

Most Read Articles

Kannada
English summary
Mahindra Racing achieved encouraging results at the 2013 MotoGP season opener held in Qatar. Both riders managed to complete the race in top ten positions in the Moto3 segment
Story first published: Wednesday, April 10, 2013, 11:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X