ದಾರಿಬಿಡಿ, ಬರುತ್ತಿದೆ ಹ್ಯೊಸಂಗ್ ಕ್ರೂಸರ್ ಬೈಕ್

By Nagaraja

ಈ ಹಿಂದೆ ದೇಶದಲ್ಲಿ ಕೈನಾಟಿಕ್ ಜತೆ ಕೈಜೋಡಿಸಿಕೊಂಡಿದ್ದ ಹ್ಯೊಸಂಗ್ ಕ್ರೂಸರ್ ಬೈಕ್‌ಗಳನ್ನು ಬಿಡುಗಡೆಗೊಳಿಸಿತ್ತು. ಆದರೆ ಹ್ಯೊಸಂಗ್ ಮತ್ತು ಕೈನಾಟಿಕ್ ನಡುವಣ ಜತೆಗಾರಿಕೆ ಹೆಚ್ಚು ವರ್ಷಗಳ ಕಾಲ ಸಾಗಲಿಲ್ಲ.

ಇದೀಗ ಬಂದಿರುವ ಮಾಹಿತಿಯಂತೆ ದ್ವಿಚಕ್ರ ವಾಹನದಲ್ಲಿ ಆಗಾಧ ಇತಿಹಾಸ ಹೊಂದಿರುವ ಆಟೋ ದೈತ್ಯ ಹ್ಯೊಸಂಗ್ ದೇಶದಲ್ಲಿ ಅಕ್ಯೂಲಾ ಕ್ರೂಸರ್ ಬೈಕ್ ಅನ್ನು ಮರು ಲಾಂಚ್ ಮಾಡಲಿದೆ. ಇದು 650 ಸಿಸಿ ಬೈಕ್ ಎನಿಸಿಕೊಳ್ಳಲಿದೆ. ಹಾಗಾಗಿ ಅಕ್ಯೂಲಾ ಜಿವಿ650 ಎಂದು ಹೆಸರಿಸಲ್ಪಡಲಿದೆ.

 Hyosung

ಪ್ರಸ್ತುತ ಎಸ್‌ಟಿ7 ಕ್ರೂಸರ್ ಬೈಕ್‌ಗಳನ್ನು ಹ್ಯೊಸಂಗ್ ಆಫರ್ ಮಾಡುತ್ತಿದೆ. ಎಸ್‌ಟಿ7 ಕ್ರೂಸರ್ ಬೈಕ್‌ಗಳು ಕ್ಲಾಸಿಕ್ ಶೈಲಿಯನ್ನು ಹೊಂದಿದೆ. ಇದೀಗ ಆಗಮಿಸಲಿರುವ ಜಿವಿ650 ಹೆಚ್ಚು ಸ್ಫೋರ್ಟಿ ಕ್ರೂಸರ್ ಲುಕ್ ಹೊಂದಿರಲಿದೆ.

ಇನ್ನು ತಾಂತ್ರಿಕತೆ ಬಗ್ಗೆ ಮಾತನಾಡುವುದಾದರೆ ಹೊಸ ಕ್ರೂಸರ್ ಬೈಕ್ 647ಸಿಸಿ, ಲಿಕ್ವಿಡ್ ಕೂಲ್ಡ್, ಫ್ಯೂಯಲ್ ಇಂಜೆಕ್ಟಡ್ 90 ಡಿಗ್ರಿ ವಿ-ಟ್ವಿನ್ ಎಂಜಿನ್ ಹೊಂದಿರಲಿದೆ. ಡಿಜಿಟಲ್ ಡಿಪ್ಲೇ, ರಿಯರ್ ಡಿಸ್ಕ್, ಲೈಟ್ ವೇಟ್ ಅಲಾಯ್ ವೀಲ್ಸ್ ಈ ಬೈಕ್‌ನ ಕೆಲವೊಂದು ಆಕರ್ಷಕ ಫೀಚರ್ ಆಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ ಪ್ರಸ್ತುತ ಬೈಕ್ 5.5 ಲಕ್ಷ ಅಸುಪಾಸಿನಲ್ಲಿ ಗ್ರಾಹಕರ ಕೈಸೇರುವ ನಿರೀಕ್ಷೆಯಿದೆ.

Most Read Articles

Kannada
English summary
We have received reports that Hyosung is now planning to re-launch the Aquila brand in India. The Aquila now will be offered in a 650cc form and it is being discussed that it would carry the Aquila GV650 label
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X