ಪ್ರಖ್ಯಾತ ವಾಚ್ ಸಂಸ್ಥೆ ಟೈಟಾನ್‌ನಿಂದ ಬರುತ್ತಿದೆ ಸ್ಟೈಲಿಷ್ ಹೆಲ್ಮೆಟ್

By Nagaraja

ದೇಶದ ಮುಂಚೂಣಿಯ ಕೈ ಗಡಿಯಾರ, ಕನ್ನಡಕ ಹಾಗೂ ಆಭರಣ ಸಂಸ್ಥೆಯಾಗಿರುವ ಟೈಟಾನ್, ಸದ್ಯದಲ್ಲೇ ವಾಹನ ಮಾರುಕಟ್ಟೆಗೂ ಲಗ್ಗೆಯಿಡುತ್ತಿದ್ದು, ಅತ್ಯಾಕರ್ಷಕ ಹೆಲ್ಮೆಟ್‌ಗಳನ್ನು ತಯಾರಿಸಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಕಡಿಮೆ ದರದಿಂದ ಹಿಡಿದು ದುಬಾರಿ ದರಗಳಿಗೆ ವಿಭಿನ್ನ ರೀತಿಯ ಹೆಲ್ಮೆಟ್‌ಗಳು ಲಭ್ಯವಿದೆ. ಗ್ರಾಹಕರಿಗೆ ಅವುಗಳ ಗುಟಮಟ್ಟ ಅಳೆಯುವುದು ಸ್ವಲ್ಪ ಕಷ್ಟಕರ. ಆದರೆ ಇದೀಗ ಆಗಮನವಾಗಲಿರುವ ಟೈಟಾನ್ ತನ್ನೆಲ್ಲ ಹೆಲ್ಮೆಟ್ ಉತ್ಪಾದನೆಗಳಲ್ಲಿ ಲೊಗೊ ಲಗತ್ತಿಸಲಿದೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಟೈಟಾನ್ ಹೆಲ್ಮೆಟ್ 2014ರ ಆರಂಭದಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.


ದ್ವಿಚಕ್ರ ಸವಾರರಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಹೆಲ್ಮೆಟ್ ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಟೈಟಾನ್ ಮಹಾನಿರ್ದೇಶಕ ಬಾಸ್ಕರ್ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಪರಿಸರ ಸ್ನೇಹಿ ಹೆಲ್ಮೆಟ್‌ಗಳ ಕೊರತೆಯಿದೆ. ಇದು ಅತಿಯಾದ ತಾಪಮಾನದಲ್ಲಿ ದ್ವಿಚಕ್ರ ಸವಾರರಿಗೆ ಉತ್ತಮ ಅನುಭವ ನೀಡುವಂತಾಗಿರಬೇಕು. ಈ ಎಲ್ಲ ಬೇಡಿಕೆಗಳನ್ನು ಟೈಟಾನ್‌ನ ಹೊಸ ಹೆಲ್ಮೆಟ್ ಪೂರೈಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
India's leading watch, jewellery and eyewear maker Titan is set to make helmets in its new avatar as a Company instead of Industry with the star logo as its new identity.
Story first published: Thursday, August 29, 2013, 14:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X