ಸದ್ಯದಲ್ಲೇ ಬಜಾಜ್ ಪಲ್ಸರ್ 200ಎಸ್‌ಎಸ್ ಲಾಂಚ್

By Nagaraja

ಎರಡು ತಿಂಗಳ ಹಿಂದೆ ಫೆಬ್ರವರಿಯಲ್ಲಿ ನಡೆದ 2014ನೇ ಆಟೋ ಎಕ್ಸ್ ಪೋದಲ್ಲಿ ನೂತನ 400ಎಸ್‌ಎಸ್ ಹಾಗೂ 400 ಸಿಎಸ್ ಮಾದರಿಗಳನ್ನು ಪ್ರದರ್ಶಿಸಿದ್ದ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಬಜಾಜ್ ಆಟೋ, ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿತ್ತು. ಇದರಲ್ಲಿ 375 ಸಿಸಿ ಎಂಜಿನ್‌ ಆಳವಡಿಸಲಾಗಿತ್ತು.

ಬಹುತೇಕರಂತೆ ನಾವು ಸಹ 400 ಎಸ್‌ಎಸ್ ಮೊದಲಾಗಿ 200 ಎಸ್‌ಎಸ್ ಹಾಗೂ 200 ಸಿಎಸ್ ಮಾದರಿಗಳು ಪ್ರದರ್ಶನಗೊಳ್ಳುವ ಬಗ್ಗೆ ಉತ್ಸುಕರಾಗಿದ್ದೇವೆ. ಕೊನೆಗೂ ನಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದು, ಬಜಾಜ್ ಪಲ್ಸರ್ 200ಎಸ್‌ಎಸ್ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ.

Bajaj Pulsar 200SS

400 ಎಸ್‌ಎಸ್ ಆವೃತ್ತಿಗೆ ಸಾದೃಶ ಹೊಂದಿರುವ 200 ಎಸ್‌ಎಸ್ ನಿರ್ಮಾಣ ಸಿದ್ಧವಾಗುತ್ತಿದೆ. ಇವೆರಡು ಆವೃತ್ತಿಗಳ ವ್ಯತ್ಯಾಸವೆಂದರೆ 200 ಎಸ್‌ಎಸ್ ಗಾತ್ರದಲ್ಲಿ ಮಾತ್ರ ಸ್ವಲ್ಪ ಸಣ್ಣದಾಗಿರುತ್ತದೆ. ವಾಹನೋದ್ಯಮದ ಬಲ್ಲ ಮೂಲಗಳ ಪ್ರಕಾರ ಬಜಾಜ್ 200 ಎಸ್‌ಎಸ್ ಪ್ರಸಕ್ತ ತಿಂಗಳಲ್ಲೇ ಲಾಂಚ್ ಆಗಲಿದೆ. ಆಗಿದ್ದರೂ ಕಂಪನಿಯಿಂದ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಅಲ್ಲದೆ ಕಳೆದ ಆಟೋ ಎಕ್ಸ್ ಪೋದಲ್ಲೂ ಈ ಬಗ್ಗೆ ಯಾವುದೇ ಮಾಹಿತಿ ಕೂಡಾ ಲಭಿಸಿರಲಿಲ್ಲ.

ಸಮಕಾಲೀನ ಪರಿಸ್ಥಿತಿಯಲ್ಲಿ ನೂತನ ಮಾದರಿ ಲಾಂಚ್ ಮಾಡುವ ಮೂಲಕ ಗ್ರಾಹಕರನ್ನು ಅಚ್ಚರಿಗೊಳಿಸುವ ಪರಿ ಆಟೋ ವಲಯದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದೆ. ಇದೀಗ ಬಜಾಜ್ ಕೂಡಾ ಇದೇ ನೀತಿಯನ್ನು ಅನುಸರಿಸಿದರೆ ಅಚ್ಚರಿಪಡಬೇಕಾಗಿಲ್ಲ.

ಬಜಾಜ್ 200 ಎಸ್‌ಎಸ್ ದರ 1.20ರಿಂದ 1.30 ಲಕ್ಷ ರು.ಗಳ ವರೆಗೆ ನಿಗದಿಯಾಗುವ ಸಾಧ್ಯತೆಯಿದೆ. ಅಂದರೆ ಯಮಹಾ ವೈಝಡ್‌ಎಫ್-ಆರ್15 ಹಾಗೂ ಹೋಂಡಾ ಸಿಬಿಆರ್ 150ಆರ್ ಮಾರಾಟವನ್ನು ಕೊಳ್ಳೆ ಹೊಡೆಯುವ ಎಲ್ಲ ಸಾಧ್ಯತೆಗಳಿವೆ.

ಒಟ್ಟಿನಲ್ಲಿ ಬಜಾಜ್‌ನ ಮುಂಬರುವ 150, 180 ಎನ್‌ಎಸ್, 200 ಎಸ್‌ಎಸ್, 100 ಎನ್‌ಎಸ್ ಹಾಗೂ 400 ಎಸ್‌ಎಸ್ ಮತ್ತು 400 ಸಿಎಸ್ ಮಾದರಿಗಳು ದೇಶದ ನಂ.1 ಸ್ಪೋರ್ಟ್ಸ್ ಬೈಕ್ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

Most Read Articles

Kannada
English summary
At the recent Auto Expo Show in Delhi, which was held in February 2014. Bajaj surprised everyone by showcasing their 400SS and 400CS models. These aren't 400cc bikes; however, they are 375cc engines.
Story first published: Wednesday, April 9, 2014, 11:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X