ಬರುತ್ತಿದೆ ಹೊಸ ಹೋಂಡಾ ಯುನಿಕಾರ್ನ್160 ಸಿಸಿ ಬೈಕ್

By Nagaraja

ದೇಶದ ಬೈಕ್ ಪ್ರೇಮಿಗಳಿಗೆ ಮಗದೊಂದು ಖುಷಿ ಸುದ್ದಿ ಬಂದಿದ್ದು, ಭಾರತದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಜಪಾನ್ ಮೂಲದ ಹೋಂಡಾ ಟು ವೀಲರ್ಸ್ ಸಂಸ್ಥೆಯು ತನ್ನ ಜನಪ್ರಿಯ ಯುನಿಕಾರ್ನ್ ಮಾದರಿಯ ಹೊಸ ಮಾಡೆಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಬಲ್ಲ ಮೂಲಗಳ ಪ್ರಕಾರ ಈ ಹಿಂದಿನ 150 ಸಿಸಿ ಬದಲಾಗಿ ಹೊಸ ಯುನಿಕಾರ್ನ್ 160 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳುವಲ್ಲಿ ನೆರವಾಗಲಿದೆ. ಇದರ ಏರ್ ಕೂಲ್ಡ್ ಎಂಜಿನ್ 14 ಅಶ್ವಶಕ್ತಿ ಉತ್ಪಾದಿಸಲಿದೆ.

Honda Unicorn

ಹೊಸ ಯುನಿಕಾರ್ನ್ ಈಗಾಗಲೇ ಹೋಂಡಾ ವಿತರಕ ಜಾಲವನ್ನು ತಲುಪಿದ್ದು, ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 63,695 ರು.ಗಳಾಗಿರಲಿದೆ. ಅಂದರೆ ರಾಷ್ಟ್ರ ರಾಜಧಾನಿಯಲ್ಲಿ ಅಂದಾಜು 70,000 ರು.ಗಳ ಆನ್ ರೋಡ್ ಬೆಲೆ ಹೊಂದಿರಲಿದೆ.

ಹೊಸ ಯುನಿಕಾರ್ನ್‌ನಲ್ಲಿ ಹೆಚ್ಚು ಆಧುನಿಕ ವಿನ್ಯಾಸಕ್ಕೆ ಒತ್ತು ಕೊಡಲಾಗಿದ್ದು, ತನ್ನ ಸೋದರ ಸಿಬಿ ಟ್ರಿಗರ್ ಜೊತೆಗೆ ವಿನ್ಯಾಸ ಹಂಚಿಕೊಳ್ಳಲಿದೆ. ಇದರ ಮಸಲರ್ ಟ್ಯಾಂಕ್ ಅನ್ನು 3-ಡಿ ಹೋಂಡಾ ಲೊಗೊ ಸುತ್ತುವರಿಯಲ್ಪಡಲಿದೆ. ಅಂತೆಯೇ ಹಿಂಬದಿ ಪ್ರಯಾಣಿಕರ ಫೂಟ್ ರೆಸ್ಟ್ ಸಹ ಟ್ರಿಗರ್‌ನಿಂದ ಆಮದು ಮಾಡಿಕೊಳ್ಳಲಾಗಿದೆ.

ಬೈಕ್ ಹಿಂದುಗಡೆಯೂ ಸಂಪೂರ್ಣವಾಗಿಯೂ ಪರಿಷ್ಕೃತಗೊಳಿಸಲಾಗಿದ್ದು, 'ಎಚ್' ವಿನ್ಯಾಸದ ಟೈಲ್ ಲೈಟ್ ಮತ್ತು ಎಲ್‌ಇಡಿ ಯುನಿಟ್ ಪಡೆದುಕೊಂಡಿದೆ. ಇನ್ನು ಸಿಬಿ ಟ್ರಿಗರ್‌ಗೆ ಸಮಾನವಾದ ಸ್ವಿಚ್ ಗೇರ್, ಹ್ಯಾಂಡಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ನಿತರ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ಕಾರ್ ಕೇರ್ ಸೆಟ್ - ಶೇ.10ರಷ್ಟು ರಿಯಾಯಿತಿ - ತ್ವರೆ ಮಾಡಿ

Most Read Articles

Kannada
English summary
Japanese bikemaker Honda Motorcycle and Scooter India is all set to roll out the new Unicorn 160. According to the sources, the bike has already reached Honda dealerships across the nation and bookings have also been commenced for the bike. Stay tuned for latest updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X