ದಂತೆರಾಸ್ ಮ್ಯಾಜಿಕ್; ಒಂದೇ ದಿನದಲ್ಲಿ ಹೀರೊ, ಹೋಂಡಾ ಮಾರಾಟ ದಾಖಲೆ

By Nagaraja

ದೀಪಾವಳಿ ಹಬ್ಬದ ಮೊದಲ ದಿನವಾದ 'ದಂತೆರಾಸ್'ರಂದು (ಅ. 22) ಮೋಡಿ ಮಾಡಿರುವ ದೇಶದ ಅಗ್ರಮಾನ್ಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಾದ ಹೀರೊ ಮೊಟೊಕಾರ್ಪ್ ಮತ್ತು ಹೋಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು ದಾಖಲೆ ಸಂಖ್ಯೆಯ ಮಾರಾಟ ದಾಖಲಿಸಿದೆ.

ಐದು ದಿನಗಳ ಪರ್ಯಂತ ಸಾಗುವ ದೀಪಾವಳಿ ಹಬ್ಬದ ಮೊದಲ ದಿನವನ್ನು ದಂತೆರಾಸ್ ಹಬ್ಬವಾಗಿ ಆಚರಿಸಲಾಗುತ್ತಿದೆ. ಇಲ್ಲಿ 'ಧನ್' ಎಂದರೆ ಹಣ ಹಾಗೂ 'ತೆರಾಸ್' ಎಂಬುದು ಹಿಂದೂ ಕ್ಯಾಲೆಂಡರ್ ಪ್ರಕಾರ 13ನೇ ದಿನ ಎಂಬುದನ್ನು ಸೂಚಿಸಲಾಗುತ್ತದೆ.

honda

ದಂತೆರಾಸ್ ದಿನದಂದು ಸಮೃದ್ಧಿ ಹಾಗೂ ಯೋಗಕ್ಷೇಮಕ್ಕಾಗಿ ದೇವತೆ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ದೇಶದ ಉದ್ಯಮಿಗಳಿಗಂತೂ ಈ ದಿನ ಅತ್ಯಂತ ವಿಶೇಷವಾಗಿರುತ್ತದೆ. ಅಂದೇ ಸ್ವತ್ತು ಹಾಗೂ ಸಂಪತ್ತಿನ ದೇವರು ಕುಬೇರರನ್ನು ಸಹ ಪೂಜಿಸಲಾಗುತ್ತದೆ.

ಇದೇ ಕಾರಣಕ್ಕಾಗಿ ದಂತೆರಾಸ್ ದಿನದಂದು ವಾಹನ ಖರೀದಿಗೂ ಉತ್ತಮ ಕಾಲ ಎಂಬುದು ವಾಡಿಕೆಯಾಗಿದೆ. ಇದರಂತೆ ದೇಶದ ಬಹುತೇಕ ವಾಹನ ತಯಾರಿಕ ಸಂಸ್ಥೆಗಳು ಈ ನಿರ್ದಿಷ್ಠ ದಿನದಂದು ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ.

hero

ವರದಿಗಳ ಪ್ರಕಾರ ಪ್ರತಿ ವರ್ಷದಂತೆ ಹೀರೊ ಮೊಟೊಕಾರ್ಪ್ ಮತ್ತು ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು ಗರಿಷ್ಠ ಸಂಖ್ಯೆಯ ದ್ವಿಚಕ್ರ ವಾಹನಗಳ ಮಾರಾಟವನ್ನು ಕಂಡುಕೊಂಡಿದೆ.

ಈ ಬಾರಿ ಹೋಂಡಾ ಸಂಸ್ಥೆಯು ದಂತೆರಾಸ್ ದಿನದಂದು ಒಟ್ಟು 1.65 ಲಕ್ಷ ಯುನಿಟ್‌ಗಳ ಮಾರಾಟ ದಾಖಲಿಸಿದೆ. ಈ ಮೂಲಕ ಶೇಕಡಾ 110ರಷ್ಟು ಭರ್ಜರಿ ಏರಿಕೆ ಕಂಡಿದೆ. ಕಳೆದ ವರ್ಷ 78,500 ಯುನಿಟ್‌ಗಳ ಮಾರಾಟ ಕಂಡುಕೊಂಡಿತ್ತು.

ಇನ್ನೊಂದೆಡೆ ದೇಶ ಅಗ್ರಮಾನ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯ ಹೀರೊ ಮೊಟೊಕಾರ್ಪ್ 2,00,000 ಯುನಿಟ್‌ಗಳ ಮಾರಾಟವನ್ನು ದಾಟಿದೆ. ಇದು ಕಳೆದ ಬಾರಿಗಿಂತ ಶೇಕಡಾ 80ರಷ್ಟು ಹೆಚ್ಚಾಗಿದೆ. ಇವೆಲ್ಲದರ ಮೂಲಕ ಅಕ್ಟೋಬರ್ ತಿಂಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಯುನಿಟ್‌ಗಳ ಮಾರಾಟ ಗುರಿಯಿರಿಸಿಕೊಂಡಿದೆ.

Most Read Articles

Kannada
English summary
Two-wheeler majors Hero MotoCorp and Honda Motorcycle & Scooter India (HMSI) records massive sales on Dhanteras which is the first day of the five-day Diwali Festival as celebrated in India. 
Story first published: Thursday, October 23, 2014, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X