ಎಕ್ಸ್‌ಕ್ಲೂಸಿವ್; ಹ್ಯೊಸಂಗ್‌ನಿಂದ ಬರಲಿದೆ 150ಸಿಸಿ ಬೈಕ್

By Nagaraja

ಡ್ರೈವ್ ಸ್ಪಾರ್ಕ್ ಎಕ್ಸ್‌ಕ್ಲೂಸಿವ್ ವರದಿಯೊಂದನ್ನು ಓದುಗರಿಗಾಗಿ ಹಂಚಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಭಾರತೀಯ ರಂಗ ಪ್ರವೇಶ ಪಡೆದುಕೊಂಡಿದ್ದ ಡಿಎಸ್‌ಕೆ ಹ್ಯೊಸಂಗ್ ಭವಿಷ್ಯದಲ್ಲಿ 150-200 ಸಿಸಿ ಬೈಕ್‌ಗಳನ್ನು ದೇಶಕ್ಕೆ ಪರಿಚಯಿಸಲಿದೆ.

ಎಂಟ್ರಿ ಲೆವೆಲ್ ನಿರ್ವಹಣಾ ಬೈಕ್‌ಗಳಲ್ಲಿ ತನ್ನದ ಸಾನಿಧ್ಯ ವ್ಯಕ್ತಪಡಿಸಿರುವ ಹ್ಯೊಸಂಗ್ ಇತ್ತೀಚೆಗಷ್ಟೇ ಜಿಟಿ250ಆರ್ ಪರಿಷ್ಕೃತಗೊಳಿಸಿತ್ತು. ಅಲ್ಲದೆ ಅಕ್ಯೂಲಾ 250 ಕ್ರೂಸರ್ ಸಹ ಉತ್ತಮ ಬೇಡಿಕೆ ಗಿಟ್ಟಿಸಿಕೊಂಡಿತ್ತು.

DSK Hyosung

ಸಂಸ್ಥೆಯ ಎರಡನೇ ತಯಾರಿ ಘಟಕ 2015ರ ವೇಳೆಗೆ ನಿರ್ಮಾಣವಾಗಲಿದೆ. ಇಲ್ಲಿ 2016ರ ವೇಳೆಯಾಗುವಾಗ 150 ಸಿಸಿಯಿಂದ 200 ಸಿಸಿ ಬೈಕ್‌ಗಳು ಉತ್ಪಾದನೆಯಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಇದು ಪ್ರಮುಖವಾಗಿಯೂ ಹೋಂಡಾ ಸಿಬಿಆರ್150ಆರ್, ಯಮಹಾ ಆರ್15 ಮತ್ತು ಬಜಾಜ್ ಪಲ್ಸರ್ 200ಎನ್‌ಎಸ್ ಆವೃತ್ತಿಗಳಿಗೆ ಸ್ಪರ್ಧೆ ಒಡ್ಡಲಿದೆ.

ಹ್ಯೊಸಂಗ್ ಜಿಡಿ250ಎನ್
ಇದೇ ವೇಳೆ ಮುಂಬರುವ ಹಬ್ಬದ ಆವೃತ್ತಿ ವೇಳೆ ನೂತನ ಜಿಡಿ250ಎನ್ ಬೈಕ್ ಆಗಮನವಾಗಲಿದೆ. ಈಗಾಗಲೇ ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿರುವ ಬೈಕ್ ಹೆಚ್ಚು ಪ್ರತಿಕ್ರಿಯೆ ಗಿಟ್ಟಿಸಿಕೊಂಡಿತ್ತು. ಇದು 246 ಸಿಸಿ, ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟಡ್ ಎಂಜಿನ್ ಪಡೆದುಕೊಳ್ಳಲಿದ್ದು, 28 ಅಶ್ವಶಕ್ತಿ (25 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

Most Read Articles

Kannada
English summary
In the coming years we will see Hyosung grow from being a small time player to one that will compete in the high volume segment, with 150cc and 200cc models.
Story first published: Saturday, May 10, 2014, 14:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X