ಪುಣೆಯಲ್ಲಿ ಬೆನೆಲ್ಲಿ, ಹ್ಯೊಸಂಗ್ ಸೂಪರ್ ಬೈಕ್ ನಿರ್ಮಾಣ

By Nagaraja

ಪುಣೆಯಲ್ಲಿ ಹೊಸ ಘಟಕವೊಂದಕ್ಕೆ ಬರೋಬ್ಬರಿ 400 ಕೋಟಿ ರುಪಾಯಿಗಳ ಬೃಹತ್ ಹೂಡಿಕಾ ಯೋಜನೆ ಹೊಂದಿರುವ ಡಿಎಸ್‌ಕೆ ಸಂಸ್ಥೆಯ ಭಾಗವಾಗಿರುವ ಡಿಎಸ್‌ಕೆ ಮೊಟೊವೀಲ್ಸ್, ಐಕಾನಿಕ್ ಹ್ಯೊಸಂಗ್ ಹಾಗೂ ಬೆನೆಲ್ಲಿ ಸೂಪರ್ ಬೈಕ್‌ಗಳ ನಿರ್ಮಾಣ ಪ್ರಕ್ರಿಯೆಯನ್ನು ಇದೇ ಘಟಕದಲ್ಲಿ ಆರಂಭಿಸುವ ಯೋಜನೆ ಹೊಂದಿದೆ.

ಇವನ್ನೂ ಓದಿ: ಬೆನೆಲ್ಲಿ ಸೂಪರ್ ಬೈಕ್ ಭಾರತ ಪ್ರವೇಶ; ಎಕ್ಸ್ ಕ್ಲೂಸಿವ್ ರಿವ್ಯೂ

ವರದಿಗಳ ಪ್ರಕಾರ ಮಹಾರಾಷ್ಟ್ರದ ಪುಣೆಯಲ್ಲಿ ಪ್ರಸ್ತುತ ಸ್ಥಿತಗೊಂಡಿರುವ ಘಟಕದ ಸಮೀಪದಲ್ಲೇ ಹೊಸ ಘಟಕ ತಲೆಯೆತ್ತಲಿದೆ. ಅಲ್ಲದೆ ಮುಂದಿನ ಒಂದೆರಡು ವರ್ಷಗಳಲ್ಲಿ ಹೊಸ ಘಟಕದ ಕಾರ್ಯಾರಂಭಗೊಳ್ಳಲಿದೆ.

ಒಂದು ಶಿಫ್ಟ್‌ನಲ್ಲಿ 1,20,000 ಯುನಿಟ್‌ಗಳಷ್ಟು ಸೂಪರ್ ಬೈಕ್‌ಗಳನ್ನು ನಿರ್ಮಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಈಗಿರುವ ಘಟಕದಲ್ಲಿ ವರ್ಷಕ್ಕೆ 3,000ದಷ್ಟು ಹ್ಯೊಸಂಗ್ ಬೈಕ್‌ಗಳು ಜೋಡಣೆಯಾಗುತ್ತಿದೆ. ಇನ್ನೊಂದು ಸರದಿ ಕೆಲಸ ಪ್ರಕ್ರಿಯೆ ಆರಂಭಿಸುವ ಮೂಲಕ ಜೋಡಣಾ ಸಾಮರ್ಥ್ಯ 5,000ಕ್ಕೆ ಏರಿಕೆಯಾಗಲಿದೆ.

ನಿಮ್ಮ ಮಾಹಿತಿಗಾಗಿ ಹೊಸ ವರ್ಷದಲ್ಲಿ ಇಟಲಿ ಮೂಲದ ಐಕಾನಿಕ್ ಬೆನೆಲ್ಲಿ ಸೂಪರ್ ಬೈಕ್ ಅನ್ನು ದೇಶಕ್ಕೆ ಪರಿಚಯಿಸುವ ಯೋಜನೆಯನ್ನು ಡಿಎಸ್‌ಕೆ ಹೊಂದಿದೆ. ಅಲ್ಲದೆ ನಿಕಟ ಭವಿಷ್ಯದಲ್ಲೇ ಟಿಎನ್‌ಟಿ 600ಐ ಸೇರಿದಂತೆ, ಟಿಎನ್‌ಟಿ 302, ಟೊರ್ನಡೊ ನೆಕ್ಡ್ ಟ್ರೇ, ಟಿಎನ್‌ಟಿ 899 ಹಾಗೂ ಟಿಎನ್‌ಟಿ 1130ಆರ್ ಸೇರಿದಂತೆ 12 ಹೊಸ ಮಾದರಿಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.

Most Read Articles

Kannada
English summary
DSK Motowheels, a part of DSK Group, plans to invest INR 400 crore to build a new factory near Pune to manufacture Benelli and Hyosung motorcycles.
Story first published: Wednesday, December 17, 2014, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X