ಟ್ರಾಫಿಕ್ ನಿಯಮ ಪಾಲಿಸಿ ಉಚಿತ ಪೆಟ್ರೋಲ್ ಗೆಲ್ಲಿರಿ

By Nagaraja

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರು ಬಾರಿ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿರುವ ಗುಜರಾತ್‌ನ ಅಹಮಾದಾಬಾದ್ ನಗರ ಮತ್ತೊಂದು ಉತ್ತಮ ಕಾರಣಕ್ಕಾಗಿ ಸುದ್ದಿಯಲ್ಲಿದೆ.

ಹೌದು, ಅಹಮಾದಾಬಾದ್‌ನಲ್ಲಿ ವಿಶೇಷ ಅಭಿಯಾನವೊಂದನ್ನು ಹಮ್ಮಿಕೊಳ್ಳಲಾಗಿದ್ದು, ಸರಿಯಾದ ಟ್ರಾಫಿಕ್ ನಿಯಮ ಪಾಲನೆಯ ನಿಟ್ಟಿನಲ್ಲಿ ಉಚಿತ ಪೆಟ್ರೋಲ್ ನೀಡಲಾಗುತ್ತಿದೆ.


ಬೈಕೇ ಆಗಿರಲಿ ಅಥವಾ ಕಾರು ದೇಶದಲ್ಲಿನ ಟ್ರಾಫಿಕ್ ನಿಯಮ ಅತ್ಯಂತ ಕಳಪೆ ಮಟ್ಟದಲ್ಲಿದೆ. ವಾಹನ ಸವಾರರು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳ ಸಂಖ್ಯೆಯಲ್ಲೂ ಹೆಚ್ಚಳವುಂಟಾಗುತ್ತಿದೆ.

ಇದೀಗ ಸುರಕ್ಷಿತ ಚಾಲನೆಯನ್ನು ಪ್ರೋತ್ಸಾಹ ನೀಡುವ ಪ್ರಯತ್ನದಲ್ಲಿರುವ ಅಲ್ಲಿನ ಅಧಿಕಾರಿಗಳು ಉಚಿತ ಪೆಟ್ರೋಲ್ ಕೂಪನ್‌ಗಳನ್ನು ವಿತರಿಸುತ್ತಿದೆ. ಇದಕ್ಕಾಗಿ ಸವಾರರು ಬೈಕ್‌ಗೆ ಸಂಬಂಧಿಸಿದ ಎಲ್ಲ ಕಾಗದವನ್ನು ಸದ್ಯೋಚಿತವಾಗಿ ಇಟ್ಟುಕೊಳ್ಳಬೇಕಾಗಿದೆ.

petrol

ಸದ್ಯ ದ್ವಿಚಕ್ರ ವಾಹನಗಳಿಗೆ ಮಾತ್ರ ಇಂತಹದೊಂದು ಕೊಡುಗೆಯನ್ನು ನೀಡಲಾಗುತ್ತದೆ. ಟ್ರಾಫಿಕ್ ಅಧಿಕಾರಿಗಳು ಈ ಬಗ್ಗೆ ಕಾರ್ಯಮಗ್ನವಾಗಿದ್ದಾರೆ. ಒಟ್ಟಿನಲ್ಲಿ ಅಹಮದಾಬಾದ್‌ನಲ್ಲಿ ಇನ್ನು ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ಹೇರಿಕೆ ಕಡಿಮೆಯಾಗಲಿದೆ. ಇದರ ಬದಲು ಉಚಿತ ಪೆಟ್ರೋಲ್‌ನ ಕೂಪನ್ ವಿತರಣೆಯಾಗಲಿದೆ. ಪ್ರಸ್ತುತ ಯೋಜನೆ ದೇಶದ ಇತರ ನಗರಗಳಿಗೂ ವ್ಯಾಪಿಸಲಿ ಎಂಬುದು ನಮ್ಮ ಆಶಯವಾಗಿದೆ.

ನ್ಯುಲನ್ ಕಾರ್ ಕೇರ್ ಸೆಟ್ - ಶೇಕಡಾ 10ರಷ್ಟು ರಿಯಾಯಿತಿ - ತ್ವರೆ ಮಾಡಿ!

Most Read Articles

Kannada
English summary
The city of Ahmedabad has come up with an enticing method to improve road safety in their city. No, they will not be fining people with heavy charges, instead they will be offering coupons of free petrol. The police officials in Ahmedabad have commenced this drive only for two-wheelers currently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X