ಅರ್ಧ ಕೋಟಿಯ ಸೇರಿದಂತೆ 3 ಹಾರ್ಲೆ ಕ್ರೂಸರ್ ಬೈಕ್ ಲಾಂಚ್

By Nagaraja

ಅಮೆರಿಕ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಭಾರತದಲ್ಲಿ ಹೊಸ ಶ್ರೇಣಿಯ ಮೂರು ಕ್ರೂಸರ್ ಬೈಕ್‌ಗಳನ್ನು ಬಿಡುಗಡೆಗೊಳಿಸಿದೆ. ಇದರೊಂದಿಗೆ ಭಾರತದಲ್ಲಿ ಲಭ್ಯವಿರುವ ಹಾರ್ಲೆ ಕ್ರೂಸರ್ ಬೈಕ್‌ಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಬಿಡುಗಡೆಗೊಂಡ 3 ಹಾರ್ಲೆ ಮಾದರಿಗಳು
ಬ್ರೇಕೌಟ್,
ಸಿವಿಒ ಲಿಮಿಟೆಡ್,
ಸ್ಟ್ರೀಟ್ ಗ್ಲೈಡ್ ಸ್ಪೆಷಲ್


ಬೆಲೆ (ಎಕ್ಸ್ ಶೋ ರೂಂ ದೆಹಲಿ)
ಬ್ರೇಕೌಟ್ - 16,28,000 ರು.
ಸಿವಿಒ ಲಿಮಿಟೆಡ್ - 49,23,793 ರು.
ಸ್ಟ್ರೀಟ್ ಗ್ಲೈಡ್ ಸ್ಪೆಷಲ್ - 29,70,000 ರು.

ಎಂಜಿನ್ - ಹಾರ್ಲೆ ಬ್ರೇಕೌಟ್
ಹಾರ್ಲೆ ಬ್ರೇಕೌಟ್ ಮಾದರಿಯು 1690 ಸಿಸಿ ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು 130 ಎನ್‌ಎಂ ಟಾರ್ಕ್ ನೀಡುತ್ತದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಸಾಫ್ಟೈಲ್ ತಳಹದಿಯ ಈ ಕ್ರೂಸರ್ ಬೈಕ್ ಭಾರತದಲ್ಲೇ ಜೋಡಣೆಯಾಗುತ್ತಿದೆ.

ಸ್ಟ್ರೀಟ್ ಗ್ಲೈಡ್ ಸ್ಪೆಷಲ್
ಅದೇ ರೀತಿ ಹಾರ್ಲೆಯ ಎರಡನೇ ಉತ್ಪನ್ನವಾಗಿರುವ ಸ್ಟ್ರೀಟ್ ಗ್ಲೈಡ್ ಸ್ಪೆಷಲ್ ಏರ್ ಕೂಲ್ಡ್ ಟ್ವಿನ್ ಕ್ಯಾಮ್ 103 ಎಂಜಿನ್ ಪಡೆದುಕೊಂಡಿದೆ. ಇದರ 1690 ಸಿಸಿ ಎಂಜಿನ್ 138 ಎನ್‌ಎಂ ಪೀಕ್ ಟಾರ್ಕ್ ನೀಡುತ್ತದೆ. ಹಾಗೆಯೇ 6.5 ಜಿಟಿ ಮಾಹಿತಿ ಮರಂಜನಾ ವ್ಯವಸ್ಥೆಯು ಇದರಲ್ಲಿರಲಿದ್ದು, ಬ್ಲೂಟೂತ್ ಮತ್ತು ಯುಎಸ್‌ಬಿ ಸ್ಟಾಡಂರ್ಡ್ ಆಗಿ ಲಭ್ಯವಾಗಲಿದೆ. ಸಂಸ್ಥೆಯು ರಿಫ್ಲೆಕ್ಸ್ ಲಿಮಿಟೆಡ್ ಬ್ರೇಕ್ ಜೊತೆ ಎಬಿಎಸ್ ಸಹ ನೀಡುತ್ತದೆ.

Harley Davidson

ಸಿವಿಒ ಲಿಮೆಟೆಡ್
ಸಿವಿಒ ಲಿಮಿಟೆಡ್ ಟ್ವಿನ್ ಕೂಲ್ಡ್ ಕ್ಯಾಮ್ 110 ಎಂಜಿನ್ ಪಡೆದುಕೊಂಡಿದೆ. ಇದರ 1801 ಸಿಸಿ ಎಂಜಿನ್ 156 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಕೈಯಿಂದ ನಿರ್ಮಿತವಾಗಿರುವ ಈ ಬೈಕ್ ಸೀಮಿತ ಮಾದರಿಗಳಲ್ಲಿ ಮಾತ್ರ ಲಭ್ಯವಾಗಲಿದೆ.

ವಿಶಿಷ್ಟತೆಗಳು
ಈ ಎಲ್ಲ ಮೂರು ಕ್ರೂಸರ್ ಬೈಕ್‌ಗಳು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ಪೈಕಿ ಅತಿ ದುಬಾರಿಯ ಸಿವಿಒ ಅತ್ಯಂತ ಹೆಚ್ಚು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದು ಹೊಂದಾಣಿಸಬಹುದಾದ ಬ್ಯಾಕ್ ರೆಸ್ಟ್, ಆರ್ಮ್ ರೆಸ್ಟ್, ಎಲ್‌ಇಡಿ ಹೆಡ್ ಲೈಟ್, ಫಾಗ್ ಲ್ಯಾಂಪ್, ಬುಲೆಟ್ ಟರ್ನ್ ಇಂಡಿಕೇಟರ್, 6.5 ಮಾಹಿತಿ ಮನರಂಜನಾ ವ್ಯವಸ್ಥೆ, 75 ವ್ಯಾಟ್ ಹರ್ಮಾನ್ ಕರ್ಡಾನ್ ಸ್ಪೀಕರ್ ಮುಂತಾದ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

Most Read Articles

Kannada
English summary
American cruiser bike manufacturer Harley-Davidson has launched three new motorcycles in India on 30th October, 2014. New to their range of products is the Breakout, CVO Limited and Street Glide Special. 
Story first published: Friday, October 31, 2014, 16:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X