ದೆಹಲಿ ಮಹಿಳೆಯರಿಗೆ ಹೆಲ್ಮೆಟ್ ಬಳಕೆ ಕಡ್ಡಾಯ?

By Nagaraja

ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರು ಹೆಲ್ಮೆಟ್ ಕಡ್ಡಾಯವಾಗಿ ಬಳಕೆ ಮಾಡಬೇಕೆಂಬ ನಿಯಮ ಸದ್ಯದಲ್ಲೇ ಜಾರಿಗೆ ಬರಲಿದೆ.

ಸಿಖ್ಖ್ ಮಹಿಳೆಯರ ಪ್ರತಿಭಟನೆಯ ಬಳಿಕ ದೆಹಲಿಯಲ್ಲಿ ಹೆಲ್ಮೆಟ್ ಕಡ್ಡಾಯ ಬಳಕೆ ನಿಯಮವನ್ನು ಹಿಂಪಡೆಯಲಾಗಿತ್ತು. ಆದರೆ ದೆಹಲಿ ರಸ್ತೆಗಳಲ್ಲಿ ಮಹಿಳಾ ದ್ವಿಚಕ್ರ ವಾಹನ ಸವಾರಿಗಳ ಅಪಘಾತಗಳ ಸಂಖ್ಯೆಯಲ್ಲಿ ಮಾತ್ರ ಕುಸಿತವುಂಟಾಗಲಿಲ್ಲ.

bike riding

ತಾಜಾ ಬೆಳವಣಿಗೆಯಂತೆ ದೆಹಲಿ ಮಹಿಳಾ ಆಯೋಗ ಹಾಗೂ ಟ್ರಾಫಿಕ್ ಪೊಲೀಸ್, ಮಹಿಳಾ ದ್ವಿಚಕ್ರ ಸವಾರರ ಹೆಲ್ಮೆಟ್ ಬಳಕೆಯನ್ನು ಕಟ್ಟುನಿಟ್ಟುಗೊಳಿಸಲು ಗಂಭೀರ ಚಿಂತನೆ ನಡೆಸುತ್ತಿದೆ. ಈ ಸಂಬಂಧ 115 ಕಾಯಿದೆ ಪ್ರಕಾರ ಅನಮೋದನೆಗಾಗಿ ಚುನಾವಣಾ ಆಯೋಗಕ್ಕೆ ದೆಹಲಿ ಸಾರಿಗೆ ಇಲಾಖೆಯು ಮನವಿ ಸಲ್ಲಿಸಿದೆ.

ಇದಕ್ಕೆ ಅನುಮತಿ ದೂರೆತಲ್ಲಿ ನಿಯಮ ಸದ್ಯದಲ್ಲೇ ಜಾರಿಗೆ ಬರಲಿದೆ. ವರದಿಗಳ ಪ್ರಕಾರ ದೆಹಲಿಯಲ್ಲಿ 2012ನೇ ಸಾಲಿನಲ್ಲಿ 42 ಮಹಿಳಾ ದ್ವಿಚಕ್ರ ಸವಾರಿಗಳು ಅಪಘಾತಕ್ಕೆ ಬಲಿಯಾಗಿದ್ದರೆ 2013ರಲ್ಲಿ ಈ ಸಂಖ್ಯೆ 63ಕ್ಕೆ ಏರಿಕೆಯಾಗಿತ್ತು.

Most Read Articles

Kannada
English summary
Fresh recommendations by the Delhi Commission for Women and traffic police, however, could see the law being amended that exempts women from the rule that makes helmets compulsory for all.
Story first published: Saturday, April 19, 2014, 14:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X