ಭವಿಷ್ಯದ ಯೋಜನೆಯನ್ನು ಮುಂದಿಟ್ಟ ಹೀರೊ ಮೊಟೊಕಾರ್ಪ್

By Nagaraja

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನವೆಂಬ ಕೀರ್ತಿಗೆ ಪಾತ್ರವಾಗಿರುವ ಹೀರೊ ಮೊಟೊಕಾರ್ಪ್, ತಮ್ಮ ಭವಿಷ್ಯದ ಯೋಜನೆಯನ್ನು ಮುಂದಿಟ್ಟಿದೆ. ಅಮೆರಿಕದ ಎರಿಕ್ ಬ್ಯುಯೆಲ್ ರೇಸಿಂಗ್ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿರುವ ಹೀರೊ ಪ್ರಯಾಣಿಕ ಬೈಕ್ ಉತ್ಪನ್ನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಕಾಯ್ದುಕೊಂಡಿದೆ.

ಬಹುನಿರೀಕ್ಷಿತ ಹಸ್ಟೂರ್ ಬೈಕ್ ಪರಿಚಯಿಸುವ ಮೂಲಕ ಪ್ರೀಮಿಯೇ ಸೆಗ್ಮೆಂಟ್‌ಗೆ ಲಗ್ಗೆಯಿಡುವುದು ಹೀರೊ ಸದ್ಯದ ಗುರಿಯಾಗಿದೆ. ಈ ನೆಕ್ಡ್ ಸ್ಪೋರ್ಟ್ಸ್ ಬೈಕ್ 620 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿರಲಿದೆ.

Hero MotoCorp

ಇಬಿಆರ್ ಜೊತೆ ಜಂಟಿಯಾಗಿ ನಿರ್ಮಿಸಲಿರುವ ಹಸ್ಟೂರ್ 79 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಕವಾಸಕಿ ಇಆರ್6-ಎಫ್ ಮತ್ತು ಕೆಟಿಎಂ ಡ್ಯೂಕ್ 690 ಮಾದರಿಗಳ ವಿರುದ್ಧ ಪ್ರತಿಸ್ಪರ್ಧಿಯಾಗಿರಲಿದೆ.

ಅದೇ ಹೊತ್ತಿಗೆ ಇಬಿಆರ್ ಜತೆಗೂಡಿ ಮಗದೊಂದು 250 ಸಿಸಿ ಎಕ್ಸ್‌250ಆರ್ ಬೈಕ್ ನಿರ್ಮಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಇದು 249 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದುಕೊಳ್ಳಲಿದೆ. ಪ್ರಸ್ತುತ ಬೈಕ್ ಹೋಂಡಾ ಸಿಬಿಆರ್250ಆರ್, ಕೆಟಿಎಂ ಆರ್‌ಸಿ200, ಬಜಾಜ್ ಎಸ್‌ಎಸ್200 ಮತ್ತು ಯಮಹಾ ಆರ್25 ಮಾದರಿಗಳಿಗೆ ಸವಾಲಾಗಲಿದೆ.

ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ 124 ಸಿಸಿ ಡೇರ್ ಸ್ಕೂಟರ್ ಸಹ ಹೀರೊ ಪರಿಗಣನೆಯಲ್ಲಿದೆ. 9.38 ಅಶ್ವಶಕ್ತಿ (9.8 ಎನ್‌ಎಂ ಟಾರ್ಕ್) ಉತ್ಪಾದಿಸಬಲ್ಲ ಡೇರ್ ಸ್ಕೂಟರ್ ಹೋಂಡಾದ ಜನಪ್ರಿಯ ಆಕ್ಟಿವಾ ಸ್ಕೂಟರ್‌ಗೆ ನೇರ ಪ್ರತಿಸ್ಪರ್ಧಿಯೆನಿಸಲಿದೆ. ಈ ಎಲ್ಲದರ ಮೂಲಕ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವುದು ಹೀರೊ ಗುರಿಯಾಗಿರಲಿದೆ.

Most Read Articles

Kannada
English summary
Hero MotoCorp wants to enter the premium segment by introducing the Hastur. It is a naked street bike and sports a 620cc parallel twin engine.
Story first published: Tuesday, August 19, 2014, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X