ಹೀರೊದಿಂದ 2020ರ ವೇಳೆಗೆ 12 ದಶಲಕ್ಷ ಮಾರಾಟ ಗುರಿ

By Nagaraja

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಪ್ರಸಕ್ತ ಸಾಲಿನ ಆರಂಭದಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಅನೇಕ ಹೊಸ ಮಾದರಿಗಳನ್ನು ಪ್ರದರ್ಶಿಸಿತ್ತು.

ಅಷ್ಟೇ ಅಲ್ಲದೆ ಜಾಗತಿಕವಾಗಿಯೂ ತನ್ನ ವಹಿವಾಟು ಕುದುರಿಸಿಕೊಳ್ಳುವ ಇರಾದೆ ವ್ಯಕ್ತಪಡಿಸಿತ್ತು. ಜಪಾನ್ ಮೂಲದ ಹೋಂಡಾ ಟು ವೀಲರ್ಸ್ ಜೊತೆಗಿನ ಬಾಂಧವ್ಯ ಕಡಿದುಕೊಂಡ ಬಳಿಕ ಅಮೆರಿಕದ ಎರಿಕ್ ಬ್ಯುಯೆಲ್ ರೇಸಿಂಗ್ ಜೊತೆ ತಾಂತ್ರಿಕ ಜೊತೆಗಾರಿಕೆ ಹೊಂದಿರುವ ಹೀರೊ ಜಾಗತಿಕ ವಹಿವಾಟು ವಿಸ್ತರಣೆಯ ಭಾಗವಾಗಿ ಬ್ರೆಜಿಲ್ ಹಾಗೂ ಕೊಲಂಬಿಯಾ ರಾಷ್ಟ್ರಗಳಿಗೆ ಕಾಲಿಡುತ್ತಿದೆ.

 Hero

ಪ್ರಸ್ತುತ ಹೀರೊ ಸಂಸ್ಥೆಯು ಮುಂದಿನ ಆರು ವರ್ಷಗಳಲ್ಲಿ ಅಂದರೆ 2020ರ ವೇಳೆಗೆ 12 ದಶಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಬೃಹತ್ ಯೋಜನೆ ಹೊಂದಿದೆ. ಈ ನಿಟ್ಟಿನಲ್ಲಿ ಹೀರೊದಿಂದ ಆಗಮನವಾಗಲಿರುವ ಎಚ್‌ಎಕ್ಸ್‌250ಆರ್, ಹಸ್ಟೂರ್ 620 ಮತ್ತು ಆರ್‌ಎನ್‌ಟಿ ಮಾದರಿಗಳು ನೆರವಾಗುವ ನಿರೀಕ್ಷೆಯಿದೆ.

ತನ್ನ ಗುರಿ ಮುಟ್ಟುವ ನಿಟ್ಟಿನಲ್ಲಿ ಸ್ಥಳೀಯವಾಗಿ ಹೊಸ ಘಟಕ ತೆರೆಯುವ ಯೋಜನೆಯನ್ನು ಹೀರೊ ಹೊಂದಿದೆ. ಸದ್ಯ ಗುಜರಾತ್‌ನಲ್ಲಿ ಘಟಕ ತೆರೆಯುತ್ತಿರುವ ಹೀರೊ ತನ್ನ ಆರನೇ ಘಟಕವನ್ನು ದಕ್ಷಿಣ ಭಾರತದಲ್ಲಿ ತರೆಯಲಿದೆ.

Most Read Articles

Kannada
English summary
Now the Indian two wheeler giant believes it can achieve selling 12 million vehicles in the next six years.
Story first published: Thursday, August 28, 2014, 12:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X