ಗುಜರಾತ್‌ನಲ್ಲಿ ತಲೆಯೆತ್ತಲಿರುವ ವಿಶ್ವದ ಅತಿ ದೊಡ್ಡ ಸ್ಕೂಟರ್ ಘಟಕ

By Nagaraja

ನಿಮಗೆ ಹೋಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‌ಎಂಎಸ್‌ಐ) ಸಂಸ್ಥೆಯ ಬಗ್ಗೆ ಗೊತ್ತೇ ಇದೆ. ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೀರೊಗೆ ನಿಕಟ ಪ್ರತಿಸ್ಪರ್ಧಿಯಾಗಿರುವ ಹೋಂಡಾ ಸಂಸ್ಥೆಯೀಗ, 1,100 ಕೋಟಿ ರು.ಗಳ ಹೂಡಿಕೆಯೊಂದಿಗೆ ಜಗತ್ತಿನ ಅತಿ ದೊಡ್ಡ ಸ್ಕೂಟರ್ ಘಟಕವನ್ನು ಗುಜರಾತ್‌ನಲ್ಲಿ ತೆರೆದುಕೊಳ್ಳಲಿದೆ.

ವಿಶೇಷವೆಂದರೆ ಈ ಘಟಕ ಸ್ಕೂಟರ್ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರಲಿದೆ. ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳಿಗೂ ಭಾರಿ ಬೇಡಿಕೆಯಿದೆ. ಇದನ್ನು ಪರಿಗಣಿಸಿರುವ ಸಂಸ್ಥೆಯು ಪ್ರತ್ಯೇಕ ನಿರ್ಮಾಣ ವಲಯ ಆರಂಭಿಸಲು ನಿರ್ಧರಿಸಿದೆ.

honda scooter

ಹೋಂಡಾದ ನಾಲ್ಕನೇ ಘಟಕ ಗುಜರಾತ್‌ನ ಅಹಮಾದಾಬಾದ್ ಜಿಲ್ಲೆಯ ವಿಠಲಪುರದಲ್ಲಿ ತೆರೆದುಕೊಳ್ಳಲಿದೆ. 250 ಎಕ್ರೆ ಜಾಗದಲ್ಲಿ ನಿರ್ಮಾಣವಾಗಲಿರುವ ಈ ಘಟಕ ಅಹಮಾಬಾದ್‌ನಿಂದ ಸರಿ ಸುಮಾರು 80 ಕೀ.ಮೀ. ದೂರದಲ್ಲಿದೆ. ಅಲ್ಲದೆ 2015 ಅಂತ್ಯದ ವೇಳೆ ಕಾರ್ಯಾಚರಣೆಗೆ ಸಿದ್ಧವಾಗಲಿರುವ ಈ ವಿಶ್ವದ ಅತಿ ದೊಡ್ಡ ಸ್ಕೂಟರ್ ಘಟಕದಲ್ಲಿ ವಾರ್ಷಿಕವಾಗಿ 1.2 ದಶಲಕ್ಷ ಯುನಿಟ್‌ಗಳನ್ನು ನಿರ್ಮಾಣ ಮಾಡುವ ಸಾಮರ್ಥ್ಯ ಹೊಂದಿದೆ.

ಹೋಂಡಾ ಹೊಸ ಘಟಕದ ಶಿಲಾಸ್ಥಾಪನೆಯನ್ನು ಗುಜುರಾತ್ ಮುಖ್ಯಮಂತ್ರಿ ಶ್ರೀಮತಿ ಆನಂದಿಬೆನ್ ಪಟೇಲ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಹೋಂಡಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಎಲ್ಲದರ ಮೂಲಕ ದೇಶದ್ಯಾಂತ ಒಟ್ಟು ನಾಲ್ಕು ಘಟಕಗಳನ್ನು ಹೊಂದಿರುವ ಹೋಂಡಾ, ವಾರ್ಷಿಕವಾಗಿ 5.8 ದಶಲಕ್ಷ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಉಳಿದ ಘಟಕಗಳು ಹರಿಯಾಣ (1.6 ಮಿಲಿಯನ್), ರಾಜಸ್ತಾನ (1.2 ಮಿಲಿಯನ್) ಮತ್ತು ಕರ್ನಾಟಕದಲ್ಲಿ (1.8 ಮಿಲಿಯನ್) ಸ್ಥಿತಗೊಂಡಿದೆ.

Most Read Articles

Kannada
English summary
Honda’s fourth plant in India; will become operational by end of 2015
Story first published: Friday, October 17, 2014, 11:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X