ದೆಹಲಿಯಲ್ಲಿ 2ನೇ ಟ್ರಾಫಿಕ್ ಪಾರ್ಕ್‌ಗೆ ಹೋಂಡಾ ಚಾಲನೆ

By Nagaraja

ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ ಪ್ರೈವೇಟ್ ಲಿಮಿಟೆಡ್ (ಎಚ್‌ಎಂಎಸ್‌ಐ) ಸಂಸ್ಥೆಯು ಬೈಕ್ ಸವಾರರ ಸುರಕ್ಷಿತ ಚಾಲನೆಗೆ ಹೆಚ್ಚು ಆದ್ಯತೆ ಕೊಡುತ್ತಿದ್ದು, ಇದರಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎರಡನೇ ಟ್ರಾಫಿಕ್ ಪಾರ್ಕ್ ತೆರೆದುಕೊಂಡಿದೆ.

ಜಪಾನ್ ಮೂಲದ ಹೋಂಡಾ ಸಂಸ್ಥೆಯು ಹಮ್ಮಿಕೊಂಡಿರುವ ರಾಷ್ಟ್ರೀಯ ರಸ್ತೆ ಸುರಕ್ಷೆಯ ಅಭಿಯಾನದ ಅಂಗವಾಗಿ ಎರಡನೇ ಟ್ರಾಫಿಕ್ ಪಾರ್ಕ್ ರಾಷ್ಟ್ರ ರಾಜಧಾನಿ ದೆಹಲಿ ಬಾಬಾ ಖರಕ್ ಸಿಂಗ್ ಮಾರ್ಗ್‌ನಲ್ಲಿ ತೆರೆದುಕೊಂಡಿದೆ.

Traffic Park

ಈ ಸಂದರ್ಭದಲ್ಲಿ ದೆಹಲಿ ಪೊಲೀಸ್ ಐಪಿಎಸ್ ಸ್ಪೆಷಲ್ ಕಮಿಷನರ್ ವಿಮಲ ಮೆಹ್ರಾ, ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಅಧ್ಯಕ್ಷ ಹಾಗೂ ಸಿಇಒ ಆಗಿರುವ ಕಿಟಾ ಮುರಮಟ್ಸು ಮತ್ತು ಎಚ್‌ಎಂಎಸ್‌ಐ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಉಪಾಧ್ಯಕ್ಷರಾಗಿರುವ ವೈ ಎಸ್ ಗುಲೆರಿಯಾ ಉಪಸ್ಥಿತರಿದ್ದರು.

1172 ಚದರ ಅಡಿ ವಿಸ್ತಾರದಲ್ಲಿ ಹರಡಿರುವ ಬಾಬಾ ಖರಕ್ ಸಿಂಗ್ ಮಾರ್ಗ್ ಟ್ರಾಫಿಕ್ ತರಬೇಕಿ ಪಾರ್ಕ್‌ನಲ್ಲಿ ಹೋಂಡಾ ಮಹತ್ವದ ಬದಲಾವಣೆ ತಂದಿದೆ. ಇಲ್ಲಿ ಐದು ವರ್ಷದಿಂದ ಮಕ್ಕಳಿಂದ ಆರಂಭವಾಗಿ ಎಲ್ಲ ಪ್ರಾಯದ ಸವಾರರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಪಾಠ ಹೇಳಿಕೊಡಲಾಗುವುದು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಕಿಟಾ ಮುರಮಟ್ಸು, ಜೈಪುರ, ದೆಹಲಿ, ಭುವನೇಶ್ವರ, ಕಟಕ್ ಮತ್ತು ನಾಶಿಕ್‌ನಲ್ಲಿರುವ ಐದು ಟ್ರಾಫಿಕ್ ಟ್ರೈನಿಂಗ್ ಪಾರ್ಕ್‌ಗಳಲ್ಲಿ ಇದುವರೆಗೆ 85,000 ಮಂದಿಗೆ ತರಬೇತಿ ನೀಡಲಾಗಿದೆ ಎಂದಿದೆ.

ರು. 340ರಿಂದ ಬೈಕನರ್ ಬೈಕರ್ ಬೈಕಿಂಗ್ ಗ್ಲೋವ್ಸ್ - ತ್ವರೆ ಮಾಡಿ

Most Read Articles

Kannada
English summary
Honda Motorcycle & Scooter India Pvt. Ltd. (HMSI), to promote road safety awareness as a responsible corporate, inaugurated its second traffic training park in Delhi at Baba Kharak Singh Marg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X