ಡಿ.18ರಂದು ಹೊಸ ಹೋಂಡಾ ಯುನಿಕಾರ್ನ್ ಬಿಡುಗಡೆ

By Nagaraja

ನೀವು ಬೈಕ್ ಪ್ರೇಮಿಯಾಗಿದ್ದಲ್ಲಿ ನಿಮಗಿದೋ ಇಲ್ಲಿದೆ ಶುಭ ಸಮಾಚಾರ. ಎಲ್ಲ ಹೊಸತನದಿಂದ ಕೂಡಿರುವ ಹೊಸ ಹೋಂಡಾ ಯುನಿಕಾರ್ನ್ 160 ಸಿಸಿ ಬೈಕ್ ಇದೇ ಮುಂಬರುವ ಡಿಸೆಂಬರ್ 18 ಗುರುವಾರದಂದು ಭರ್ಜರಿ ಬಿಡುಗಡೆ ಕಾಣಲಿದೆ.

ಹೊಸ ಯುನಿಕಾರ್ನ್ ಬೈಕ್‌ನಲ್ಲಿ ಕೆಲವೊಂದು ಬದಲಾವಣೆ ಕಂಡುಬರಲಿದೆ. ಆದರೆ ಪವರ್ ವಿತರಣೆ ಬಗೆಗಿನ ಮಾಹಿತಿಗಳು ಇನ್ನೂ ಹೊರ ಬಂದಿಲ್ಲ. ಬಲ್ಲ ಮೂಲಗಳ ಪ್ರಕಾರ ಈ ಹಿಂದಿನ 150 ಸಿಸಿ ಬದಲಾಗಿ ಹೊಸ ಯುನಿಕಾರ್ನ್ 160 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳುವಲ್ಲಿ ನೆರವಾಗಲಿದೆ. ಇದರ ಏರ್ ಕೂಲ್ಡ್ ಎಂಜಿನ್ 14 ಅಶ್ವಶಕ್ತಿ ಉತ್ಪಾದಿಸಲಿದೆ.

honda unicorn

ಹೊಸ ಯುನಿಕಾರ್ನ್‌ನಲ್ಲಿ ಹೆಚ್ಚು ಆಧುನಿಕ ವಿನ್ಯಾಸಕ್ಕೆ ಒತ್ತು ಕೊಡಲಾಗಿದ್ದು, ತನ್ನ ಸೋದರ ಸಿಬಿ ಟ್ರಿಗರ್ ಜೊತೆಗೆ ವಿನ್ಯಾಸ ಹಂಚಿಕೊಳ್ಳಲಿದೆ. ಆದರೆ ಸಿಬಿ ಟ್ರಿಗರ್‌ಗಿಂತಲೂ ಪ್ರೀಮಿಯಂ ಎನಿಸಿಕೊಳ್ಳಲಿದ್ದು, 68ರಿಂದ 70,000 ರು.ಗಳ ಎಕ್ಸ್ ಶೋ ರೂಂ ಬೆಲೆಯನ್ನು ಆಗಮನವಾಗಲಿದೆ.

ಇಲ್ಲಿ ಕುತೂಹಲಕಾರಿ ವಿಷಯವೆಂದರೆ ಸಿಬಿ ಟ್ರಿಗರ್ ಬದಲಿಯಾಗಿ ಯುನಿಕಾರ್ನ್ ಪ್ರವೇಶ ಪಡೆಯಲಿದೆಯೇ ಅಥವಾ ಇನ್ನು ಸ್ವಲ್ಪ ಹೆಚ್ಚು ಶಕ್ತಿಶಾಲಿಯೊಂದಿಗೆ ಕಾಣಿಸಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಇದು ಪ್ರಮುಖವಾಗಿಯೂ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಸುಜುಕಿ ಜಿಕ್ಸರ್ ಹಾಗೂ ಟಿವಿಎಸ್ ಅಪಾಚಿ ಆರ್‌ಟಿಆರ್ 160 ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

'ಎಚ್' ವಿನ್ಯಾಸಿತ ಟೈಲ್ ಲ್ಯಾಂಪ್, ಎಲ್‌ಇಡಿ ಯುನಿಟ್ ಹಾಗೂ ಮಸಲರ್ ಟ್ಯಾಂಕ್ ಮೇಲೆ ತ್ರಿಡಿ ಹೋಂಡಾ ಲಾಂಛನ ಪಡೆಯಲಿದೆ. ಅಂತೆಯೇ ಸ್ವಿಚ್ ಗೇರ್, ಹ್ಯಾಂಡಲ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮುಂತಾದ ವೈಶಿಷ್ಟ್ಯಗಳು ಪಡೆಯಲಿದೆ.

Most Read Articles

Kannada
English summary
Honda Motorcycle & Scooters India Pvt. Ltd. (HMSI) is all set to launch the much-awaited Unicorn 160 in the Indian market on December 18, 2014. Stay tuned for latest updates.
Story first published: Monday, December 15, 2014, 17:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X