250ಸಿಸಿ ವಿಭಾಗದಲ್ಲಿ ಹ್ಯೊಸಂಗ್ ಶೇ. 100ರಷ್ಟು ಮಾರಾಟ ಏರಿಕೆ

By Nagaraja

ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಡಿಎಸ್‌ಕೆ ಹ್ಯೊಸಂಗ್ ನಿಧಾನವಾಗಿ ತನ್ನ ಛಾಪು ಮೂಡಿಸುತ್ತಿದೆ ಅಂದರೆ ತಪ್ಪಾಗಲಾರದು. ಇದಕ್ಕೆ ಈ ಕೊರಿಯಾ ಮೂಲದ ದೈತ್ಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಇದೀಗಷ್ಟೇ ಬಿಡುಗಡೆ ಮಾಡಿರುವ ಮಾರಾಟ ಅಂಕಿಅಂಶಗಳು ಪುರಾವೆ ನೀಡುತ್ತಿದೆ.

ಭಾರತದಲ್ಲಿ ಪ್ರಮುಖವಾಗಿಯೂ ಯುವ ಗ್ರಾಹಕರು ಕ್ರೀಡಾ ಬೈಕ್‌ಗಳನ್ನು ಹೆಚ್ಚಾಗಿ ಬಯಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ 250 ಸಿಸಿ ವಿಭಾಗದಲ್ಲಿ ಹ್ಯೊಸಂಗ್ ಬರೋಬ್ಬರಿ ಶೇಕಡಾ 100ರಷ್ಟು ವರ್ಧನೆ ದಾಖಲಿಸಿದೆ.

DSK Hyosung

ಭಾರತದಲ್ಲಿ ಡಿಎಸ್‌ಕೆ ಮೊಟೊ ವೀಲ್ಸ್ ಜೊತೆ ಸಹಭಾಗಿತ್ವ ಹೊಂದಿರುವ ಕೊರಿಯಾ ಮೂಲದ ಈ ವಾಹನ ತಯಾರಕ ಸಂಸ್ಥೆಯು 2014 ಜುಲೈನಿಂದ ಆಗಸ್ಟ್ ತಿಂಗಳ ವರೆಗಿನ ಅವಧಿಯಲ್ಲಿ ಒಟ್ಟು 375 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಈ ಪೈಕಿ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿದ್ದ ಅಕ್ವಿಲಾ 250 ಸಿಸಿ ಕ್ರೂಸರ್ ಬೈಕ್‌‍ಗೆ ಅತಿ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗಿದೆ. ವರದಿಗಳ ಪ್ರಕಾರ ಬಿಡುಗಡೆಯಾದ ಮೊದಲ ತಿಂಗಳಲ್ಲೇ 275ರಷ್ಟು ಬುಕ್ಕಿಂಗ್ ದಾಖಲಿಸಿತ್ತು.

ನವೀನ ಶೈಲಿ, ಕ್ರೀಡಾ ಗ್ರಾಫಿಕ್ಸ್, ಆಕ್ರಮಣಕಾರಿ ವಿನ್ಯಾಸ, ಸ್ಟೈಲಿಷ್ ಹೆಡ್ ಲ್ಯಾಂಪ್ ಮತ್ತು ಆಕರ್ಷಕ ಬಣ್ಣಗಳ ಆಯ್ಕೆಯನ್ನು ಹೊಂದಿರುವ ಹೊಸತಾದ ಜಿಟಿ250ಆರ್ ಕೂಡಾ ಹ್ಯೊಸಂಗ್ 250ಸಿಸಿ ವಿಭಾಗದ ಮಾರಾಟದಲ್ಲಿ ಪ್ರಮುಖ ಪಾತ್ರ ವಹಿಸಿದೆ.

Most Read Articles

Kannada
English summary
DSK Hyosung has announced a growth of over 100 percent year-on-year in their 250cc segment. The Korean auto maker has sold a total of 375 units during the period of July to August 2014.
Story first published: Wednesday, September 17, 2014, 11:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X