ಸದ್ಯದಲ್ಲೇ ಪಲ್ಸರ್‌ ಪ್ರತಿಸ್ಪರ್ಧಿ ರಸ್ತೆಗಿಳಿಸಲಿರುವ ಹೋಂಡಾ

By Nagaraja

ಭಾರತದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಟು ವೀಲರ್ಸ್ ಸಂಸ್ಥೆಯು ದೇಶೀಯ ಮಾರುಕಟ್ಟೆಗೆ ನಿರಂತರ ಅಂತರಾಳದಲ್ಲಿ ತನ್ನ ಹೊಸ ಮಾದರಿಗಳನ್ನು ಪರಿಚಯಿಸುತ್ತಲೇ ಬಂದಿದೆ.

ಅಲ್ಲದೆ ಜಾಗತಿಕವಾಗಿ ಪರಿಗಣಿಸಿದರೆ ಭಾರತದಲ್ಲಿ ತನ್ನ ಅತಿ ದೊಡ್ಡ ಮಾರಾಟ ಜಾಲವನ್ನು ಹೊಂದಿರುವುದಾಗಿ ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಅಧ್ಯಕ್ಷ ಮತ್ತು ಸಿಇಒ ಆಗಿರುವ ಕಿಟಾ ಮುರಮಸು ತಿಳಿಸಿದ್ದಾರೆ.

honda

ಮುರಮಸು ಪ್ರಕಾರ ಭಾರತದಲ್ಲಿ ಹೋಂಡಾ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಕ್ಷಿಪ್ರ ಗತಿಯಲ್ಲಿ ಏರಿಕೆಯಾಗುತ್ತಿದ್ದು, ಹೋಂಡಾ ನಿರ್ಮಾಣಗಿಂತಲೂ ಬೇಡಿಕೆ ಹೆಚ್ಚಿರುವುದಾಗಿ ತಿಳಿಸಿದ್ದಾರೆ.

ನಾಲ್ಕನೇ ಸ್ಥಾನದಲ್ಲಿದ್ದ ಹೋಂಡಾ ಟು ವೀಲರ್ಸ್ ಕೆಲವೇ ವರ್ಷಗಳ ನಡುವೆ ದ್ವಿತೀಯ ಸ್ಥಾನಕ್ಕೆ ನೆಗೆತ ಕಂಡಿದೆ. ಅಲ್ಲದೆ ಪ್ರತಿ ಮೂರು ತಿಂಗಳಿಗೊಂದು ಹೊಸ ಮಾದರಿಯನ್ನು ಪರಿಚಯಿಸುವುದಾಗಿ ತಿಳಿಸಿದ್ದಾರೆ.

ಅಷ್ಟೇ ಯಾಕೆ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ 160ಸಿಸಿ ಬೈಕ್ ಪರಿಚಯಿಸುವ ಯೋಜನೆಯನ್ನು ಹೋಂಡಾ ಹೊಂದಿದೆ. ಇದು ಬಜಾಜ್ ಪಲ್ಸರ್ ಮತ್ತು ಟಿವಿಎಸ್ ಅಪಾಚಿ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ಪ್ರಸ್ತುತ ಕರ್ನಾಟಕ, ಹರಿಯಾಣ ಮತ್ತು ರಾಜಸ್ತಾನಗಳಲ್ಲಾಗಿ ಮೂರು ಘಟಕಗಳನ್ನು ಹೊಂದಿರುವ ಹೋಂಡಾ, ವಾರ್ಷಿಕವಾಗಿ 4.5 ದಶಲಕ್ಷ ಯುನಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಗುಜರಾತ್‌ನಲ್ಲಿ ಆರಂಭವಾಗಲಿರುವ ನಾಲ್ಕನೇ ಘಟಕದಲ್ಲಿ 2017ರಲ್ಲಿ ಕೆಲಸ ಆರಂಭವಾಗಲಿದೆ. ಇದು ಹೆಚ್ಚುವರಿ 1.2 ದಶಲಕ್ಷ ಯುನಿಟ್ ನಿರ್ಮಿಸುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ ಐದನೇ ಘಟಕ ತೆರೆಯುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

Most Read Articles

Kannada
Read in English: India Key To Honda Sales
English summary
Honda, one of the world's biggest two wheeler manufacturer has its biggest market in India says President & CEO of Honda Motorcycle & Scooter India (HMSI) Keita Muramatsu.
Story first published: Tuesday, September 16, 2014, 13:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X