ರಾಜ್ಯಕ್ಕೆ ಕೈ ತಪ್ಪಿದ ಹೀರೊ ಘಟಕ ಆಂಧ್ರ ಪಾಲು

By Nagaraja

ಕರ್ನಾಟಕದಲ್ಲಿ ಉದ್ದೇಶಿದ ಹೀರೊ ಮೊಟೊಕಾರ್ಪ್ ಘಟಕ ಸರಕಾರದ ಅವಗಣೆಯಿಂದಾಗಿ ಆಂಧ್ರ ಪ್ರದೇಶದ ಪಾಲಾಗಿದೆ. ಈ ಸಂಬಂಧ ಪ್ರಾಥಮಿಕ ಒಡಂಬಡಿಕೆಗೆ ಹೀರೊ ಮೊಟೊಕಾರ್ಪ್ ಸಂಸ್ಥೆಯು ಆಂಧ್ರ ಪ್ರದೇಶ ರಾಜ್ಯ ಸರಕಾರದೊಂದಿಗೆ ಸಹಿ ಹಾಕಿದೆ.

ಇದರೊಂದಿಗೆ ಧಾರವಾಡದಲ್ಲಿ 20 ಸಾವಿರ ಉದ್ಯೋಗ ಸೃಷ್ಟಿಯ ಕನಸು ನೂಚ್ಚುನೂರಾಗಿದೆ. ರಾಜ್ಯ ಸರಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿಯೇ ಕರ್ನಾಟಕದಲ್ಲಿ ಆರಂಭವಾಗಬೇಕಾಗಿದ್ದ ಹೀರೊ ಆರನೇ ಘಟಕ ಆಂಧ್ರ ಪ್ರದೇಶದ ಪಾಲಾಗಿದೆ.

hero motocorp

ಹೀರೊ ಹೊಸ ಘಟಕ ಸೀಮಾಂಧ್ರದ ಚಿತ್ತೂರಿನಲ್ಲಿ ತೆರೆಯಲಿದೆ. ಒಟ್ಟು 1600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಘಟಕದಲ್ಲಿ 18 ಲಕ್ಷ ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ವರದಿಗಳ ಪ್ರಕಾರ 600 ಎಕರೆ ಜಮೀನನ್ನು ಹೀರೊ ಘಟಕಕ್ಕೆ ಹಸ್ತಾಂತರಿಸಲಾಗುವುದು.

ಕರ್ನಾಟಕ ರಾಜ್ಯ ಕೈಗಾರಿಕಾ ಇಲಾಖೆಯಿಂದ ಸೂಕ್ತ ಬೆಂಬಲ ವ್ಯಕ್ತವಾಗದಿರುವುದೇ ಹೀರೊ ಘಟಕ ಆಂಧ್ರ ಪ್ರದೇಶದತ್ತ ಮುಖ ಮಾಡಲು ಪ್ರಮುಖ ಕಾರಣವಾಗಿದೆ. ಅಲ್ಲದೆ ಸಿಎಂ ಸಿದ್ಧರಾಮಯ್ಯ ಕೂಡಾ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇನ್ನೊಂದೆಡೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೀರೊ ಘಟಕಕ್ಕೆ ನೆರವಾಗುವ ಭರವಸೆ ನೀಡಿದ್ದರು.

Most Read Articles

Kannada
English summary
Karnataka loses out Hero Motocorp plant; Andra Pradesh gets it
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X