ಮಾರಾಟ ಏರಿಕೆ ಗುರಿಯಿರಿಸಿಕೊಂಡಿರುವ ಕವಾಸಕಿ

By Nagaraja

ಉನ್ನತ ತಂತ್ರಜ್ಞಾನ ಒದಗಿಸುವುದರಲ್ಲಿ ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಕವಾಸಕಿ ಸದಾ ಒಂದು ಹೆಜ್ಜೆ ಮುಂದೆ ಇದೆ. ಸದ್ಯ ಅನೇಕ ಕವಾಸಕಿ ಬೈಕ್‌ಗಳು ದೇಶದ ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿದೆ.

ಪ್ರಸಕ್ತ ಸಾಲಿನಲ್ಲೇ ಕವಾಸಕಿಯ ಪ್ರಮುಖ ಮಾದರಿಗಳು ದೇಶದಲ್ಲಿ ಬಿಡುಗಡೆ ಕಂಡಿದ್ದವು. ಇದೀಗ ಗ್ರಾಹಕರ ಉತ್ತಮ ಪ್ರತಿಕ್ರಿಯೆಯಿಂದ ಪುಳಕಿತಗೊಂಡಿರುವ ಸಂಸ್ಥೆಯು ಇನ್ನಷ್ಟು ಆಕ್ರಮಣಕಾರಿ ತಂತ್ರಗಾರಿಕೆಯನ್ನು ಹೊಂದುವ ಇರಾದೆ ಹೊಂದಿದೆ.

Kawasaki Motor India

2014-2015 ಸಾಲಿನಲ್ಲಿ ಕವಾಸಕಿ ಸ್ಪಷ್ಟ ಯೋಜನೆಯನ್ನು ಹೊಂದಿದೆ. ಈ ಪ್ರತಿಕ್ರಿಯಿಸಿರುವ ಕವಾಸಕಿ ಮೋಟಾರು ಇಂಡಿಯಾ ಉಪ ನಿರ್ದೇಶಕರಾಗಿರುವ ಶಿಗೆಟೊ ನಿಶಿಕವಾ, ಹಿಂದಿನ ವರ್ಷಗಿಂತಲೂ ಶೇಕಡಾ 30ರಿಂದ 40ರಷ್ಟು ಹೆಚ್ಚಳ ಗುರಿಯಿರಿಸಿಕೊಂಡಿರುವುದಾಗಿ ತಿಳಿಸಿದೆ.

ಸದ್ಯ ಭಾರತದ ಸೂಪರ್ ಬೈಕ್ ಮಾರುಕಟ್ಟೆಯನ್ನು ಹರ್ಲಿ ಡೇವಿಡ್ಸ್, ಟ್ರಯಂಪ್ ಮತ್ತು ಕವಾಸಕಿ ಆವರಿಸಿಕೊಂಡಿದೆ. ಆದರೂ ನಿಂಜಾ ಮತ್ತು ಝಡ್ ಶ್ರೇಣಿಯ ಮೋಟಾರ್ ಸೈಕಲ್‌ಗಳನ್ನು ಒದಗಿಸುತ್ತಿರುವ ಕವಾಸಕಿ ಸ್ಥಿರ ಏರುಗತಿಯನ್ನು ಗುರಿಯಿರಿಸಿಕೊಂಡಿದೆ.

Most Read Articles

Kannada
English summary
India Kawasaki Motors has launched several bikes in India this year. They plan to sell more bikes in the country than they did previously. The Japanese manufacturer is confident it will do good numbers in 2014-2015 fiscal year.
Story first published: Tuesday, October 14, 2014, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X