ಇದೇನಾ ವಿಶ್ವದ ಅತ್ಯಂತ ವೇಗದ ಮೋಟಾರ್‌ಸೈಕಲ್?

ಅಮೆರಿಕ ಕ್ಯಾಲಿಫೋರ್ನಿಯಾದ ಸ್ಯಾನ್ ಕಾರ್ಲೊಸ್ ತಳಹದಿಯ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ನಿರ್ಮಾಣ ಸಂಸ್ಥೆಯಾಗಿರುವ ಲೈಟಿಂಗ್ ಮೋಟಾರ್ ಸೈಕಲ್, ಹೊಸತಾದ ಬೈಕ್‌ವೊಂದನ್ನು ಅಭಿವೃದ್ಧಿಪಡಿಸಿದ್ದು, ಜಗತ್ತಿನಲ್ಲೇ ಅತ್ಯಂತ ವೇಗವನ್ನು ಕಾಯ್ದುಕೊಂಡಿರುವುದಾಗಿ ತಿಳಿಸಿದೆ.

ವಿದ್ಯುತ್ ಚಾಲಿತ ಮೋಟಾರುನಿಂದ ನಿಯಂತ್ರಿಸಲ್ಪಡುವ ಎಲ್‌ಎಸ್-218 ಮೋಟಾರುಸೈಕಲ್ ಬರೋಬ್ಬರಿ 200 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಗಂಟೆಗೆ ಗರಿಷ್ಠ 350.8 ವೇಗವನ್ನು (218 ಮೈಲ್) ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿರುವುದಾಗಿ ಸಂಸ್ಥೆ ತಿಳಿಸಿದೆ.

Lightning LS 218

ಸಹಜವಾಗಿಯೇ ಎಲೆಕ್ಟ್ರಿಕ್ ಬೈಕ್ ಆಗಿರುವುದರಿಂದ ಇದರಲ್ಲಿ ಯಾವುದೇ ಇಂಧನ ಟ್ಯಾಂಕ್ ಅಥವಾ ಎಕ್ಸಾಸ್ಟ್ ಕೊಳವೆ ರಂಧ್ರಗಳಿರುವುದಿಲ್ಲ. ಅಲ್ಲದೆ ಸಾಂಪ್ರದಾಯಿಕ ವಿನ್ಯಾಸ ನೀತಿಯನ್ನು ಕಾಯ್ದುಕೊಂಡು ಭವಿಷ್ಯತ್ತಿನ ಈ ಬೈಕನ್ನು ಅಭಿವೃದ್ಧಿಪಡಿಸಲಾಗಿದೆ.

ಮರು ತುಂಬಬಹುದಾಗಿರುವ ಬ್ಯಾಟರಿ ನಿಯಂತ್ರಿತ ಈ ಬೈಕ್‌ನಲ್ಲಿ ಒಮ್ಮೆ ಚಾರ್ಜ್ ಮಾಡಿಸಿದರೆ 100 ಮೈಲ್ ವರೆಗೆ ಚಲಿಸಬಹುದಾಗಿದೆ. ಆದರೆ ಈ ಪ್ರಮಾಣವು ಚಾಲನಾ ವಿಧವನ್ನು ಅವಲಂಬಿಸಿರಲಿದೆ. ಅಂದ ಹಾಗೆ ಇದು 38,000 ಅಮೆರಿಕನ್ ಡಾಲರ್‌ಗಳಷ್ಟು ದುಬಾರಿಯೆನಿಸಿದೆ ಎಂದು ಸಂಸ್ಥೆಯು ತಿಳಿಸಿದೆ.

Most Read Articles

Kannada
English summary
Lightning Motorcycles, a small start-up electric motorcycle manufacturer based in San Carlos, have claimed to made the fastest motorcycle in the world, the LS-281.
Story first published: Saturday, November 22, 2014, 12:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X