ಬೆಂಗಳೂರಿನಲ್ಲಿ ಮಹೀಂದ್ರ ಮೊಜೊ ಟೆಸ್ಟಿಂಗ್; ಶೀಘ್ರದಲ್ಲೇ ಬಿಡುಗಡೆ

By Nagaraja

ಭಾರತದಲ್ಲಿ ನಿಧಾನವಾಗಿ ನಿರ್ವಹಣಾ ವಿಭಾಗದ ಮೋಟಾರ್‌ಸೈಕಲ್‌ಗಳು ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಳ್ಳುತ್ತಿದೆ. ದೇಶದ ಯುವ ಜನಾಂಗ ಎಂಟ್ರಿ ಲೆವೆಲ್ ನಿರ್ವಹಣಾ ಬೈಕ್‌ಗಳನ್ನು ಅತಿ ಹೆಚ್ಚು ಇಷ್ಟಪಡುವುದೇ ಇದರ ಹಿಂದಿರುವ ರಹಸ್ಯವಾಗಿದೆ.

ಗ್ರಾಹಕರಿಗೆ ಕೈಗೆಟುಕುವ ದರಗಳಲ್ಲಿ ಹೋಂಡಾ ಸಿಬಿಆರ್250 ಹಾಗೂ ಕೆಟಿಎಂ ಡ್ಯೂಕ್‌ಗಳಂತಹ ಬೈಕ್‌ಗಳು ತಲುಪುತ್ತಿರುವುದು ಅತಿ ಹೆಚ್ಚು ಜನಪ್ರಿಯತೆಗೆ ಸಾಕ್ಷಿಯಾಗಿದೆ.


ಇದಕ್ಕೆ ದೇಶದ ಮಾರುಕಟ್ಟೆಯಲ್ಲಿ ಪುನಶ್ಚೇತನದ ನಿರೀಕ್ಷೆಯಲ್ಲಿರುವ ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಮಹೀಂದ್ರ ಟು ವೀಲರ್ಸ್, ಮೊಜೊ ಬೈಕ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಇದರಂತೆ ಬೆಂಗಳೂರಿನಲ್ಲಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಮೊಜೊ ಸೆರೆ ಸಿಕ್ಕಿರುತ್ತದೆ. ಕಳೆದ ಅನೇಕ ಸಮಯಗಳಿಂದ ವಿಳಂಬವಾಗಿರುವ ಮೊಜೊ ಅತಿ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.


ಎಂಜಿನ್
ಮಹೀಂದ್ರ ಮೊಜೊದಲ್ಲಿ 292 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಎಂಜಿನ್ ಆಳವಡಿಸಲಾಗಿದ್ದು, 25 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದರಲ್ಲಿ ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಸಹ ಕಾಣಸಿಗುವುದು.

ರಾಷ್ಟ್ರೀಯ ಹೆದ್ದಾರಿ 47ರಲ್ಲಿ ಗಂಟೆಗೆ 140 ಕೀ.ಮೀ.ಗಳ ವೇಗವನ್ನು ತಲುಪಿರುವ ಮೊಜೊ, ಗಂಟೆಗೆ ಪ್ರಭಾವಿ 150ರಿಂದ 160 ಕೀ.ಮೀ.ಗಳ ವೇಗ ಗಿಟ್ಟಿಸಿಕೊಳ್ಳಲಿದೆ.

mahindra mojo

ಸಿಂಗಲ್ ಸಿಲಿಂಡರ್ ಎಂಜಿನ್ ಹೊರತಾಗಿಯೂ ಇದರ ಟ್ವಿನ್ ಎಕ್ಸಾಸ್ಟ್ ಕೊಳವೆಗಳು ಬೈಕ್‌ಗೆ ಹೆಚ್ಚು ಕ್ರೀಡಾತ್ಮಕ ವಿನ್ಯಾಸ ಪ್ರದಾನ ಮಾಡುತ್ತಿದೆ. ಅಂತೆಯೇ ಇದರ ಹೆಡ್‌ಲೈಟ್‌ಗಳು ವಿಶಿಷ್ಟತೆ ಕಾಪಾಡಲು ಸಹಕಾರಿಯಾಗಿದೆ.
Most Read Articles

Kannada
English summary
The Mojo was seen in Ooty, a few months ago, and early this November, two were seen being tested on the Salem-Coimbatore highway. Not after long, the motorcycle was seen entering Bangalore, via NH 4.
Story first published: Monday, November 24, 2014, 14:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X