ಮೊಜೊ ಮೇಲೆ ನಿರೀಕ್ಷೆಯನ್ನಿಟ್ಟುಕೊಂಡಿರುವ ಮಹೀಂದ್ರ

By Nagaraja

ಮಹೀಂದ್ರ ಸಂಸ್ಥೆಯ ಭಾಗವಾಗಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್ ಲಿಮಿಟೆಡ್ (ಎಂಟಿಡಬ್ಲ್ಯುಎಲ್), 2014 ಆಗಸ್ಟ್ ತಿಂಗಳಲ್ಲಿ ಒಟ್ಟು 12,598 ಯುನಿಟ್‌ಗಳ ಮಾರಾಟ ಕಂಡುಕೊಂಡಿದೆ. ಈ ಪೈಕಿ ದೇಶಿಯವಾಗಿ 11,178 ಯುನಿಟ್‌ಗಳ ಮಾರಾಟ ದಾಖಲಿಸಿದ್ದರೆ 1,420 ಯುನಿಟ್‌ಗಳ ರಫ್ತು ಸಾಧಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹೀಂದ್ರ ಟು ವೀಲರ್ಸ್ ಕಾರ್ಯನಿರ್ವಾಹಕ ಮುಖ್ಯಸ್ಥ ವಿರೆನ್ ಪೊಪ್ಲಿ, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಸೆಂಚುರೊ ರಾಕ್‌ಸ್ಟಾರ್ ಬೈಕ್ ಮತ್ತು ರೊಡಿಯೊ ಯುಝಡ್‌ಒ 125 ಸ್ಕೂಟರ್ ಮಾದರಿಗಳು ಮಾರಾಟಕ್ಕೆ ಇನ್ನಷ್ಟು ಉತ್ತೇಜನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

mahindra mojo

ಈ ಎರಡು ಮಾದರಿಗಳು ದೇಶದಲ್ಲಿ ಸ್ಥಿತಗೊಂಡಿರುವ ಮಹೀಂದ್ರದ ಎಲ್ಲ 1,400 ಸೇಲ್ಸ್ ಆಂಡ್ ಸರ್ವೀಸ್ ಟಚ್ ಪಾಯಿಂಟ್‌ಗಳನ್ನು ತಲುಪಲಿದೆ. ಅಲ್ಲದೆ ಮುಂಬರುವ ಹಬ್ಬದ ಆವೃತ್ತಿಯಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸುವ ಬಗ್ಗೆ ನಂಬಿಕೆ ವ್ಯಕ್ತಪಡಿಸಿದ್ದಾರೆ.

2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವುದರ ಪೈಕಿ ಬಹು ನಿರೀಕ್ಷಿತ ಬೈಕ್ ಆಗಿರುವ ಮೊಜೊ ಇನ್ನಷ್ಟೇ ಮಾರುಕಟ್ಟೆ ಪ್ರವೇಶಿಸಬೇಕಾಗಿದೆ. ಅದೇ ರೀತಿ ಹೊಸತಾದ 110ಸಿಸಿ ಸ್ಕೂಟರ್ ಅಭಿವೃದ್ಧಿಯಲ್ಲೂ ಸಂಸ್ಥೆ ತೊಡಗಿಸಿಕೊಂಡಿದೆ. ಇದು 'ಜೆಸ್ಟೊ' ಎಂದರಿಯಲ್ಪಡಲಿದ್ದು, ಹೋಂಡಾ ಆಕ್ಟಿವಾ, ಟಿವಿಎಸ್ ಜೂಪಿಟರ್, ಸುಜುಕಿ ಲೆಟ್ಸ್ ಮತ್ತು ಹೀರೊ ಪ್ಲೆಷರ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
Indian automobile giant has revealed their August, 2014 sales report. Mahindra Two Wheelers announced they sold a total of 12,598 vehicles in August, 2014. The manufacturer exported 1,420 vehicles from India. While they sold 11,178 vehicles in India alone.
Story first published: Tuesday, September 2, 2014, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X