ಮಿನಿ ಸಿಟಿಸರ್ಫರ್ ಎಲೆಕ್ಟ್ರಿಕ್ ಸ್ಕೂಟರ್ ಕಾನ್ಸೆಪ್ಟ್ ಅನಾವರಣ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆ ಬಿಎಂಡಬ್ಲ್ಯು ಅಧೀನತೆಯಲ್ಲಿರುವ ಮಿನಿ ಸಂಸ್ಥೆಯು ಇದೀಗಷ್ಟೇ ಭಾರತೀಯ ಮಾರುಕಟ್ಟೆಗೆ ಮಿನಿ ಕೂಪರ್ ಎಸ್ ತ್ರಿ ಹಾಗೂ ಫೈವ್ ಡೋರ್ ಮಾದರಿಗಳನ್ನು ಬಿಡುಗಡೆಗೊಳಿಸಿತ್ತು.

ಪ್ರಸ್ತುತ ಬ್ರಿಟನ್ ಮೂಲದ ಈ ಐಕಾನಿಕ್ ಸಂಸ್ಥೆಯು ಹೊಸತಾದ ಸಿಟಿಸರ್ಫರ್ ಕಾನ್ಸೆಪ್ಟ್ (Citysurfer) ಮಾದರಿಯನ್ನು ಅನಾವರಣಗೊಳಿಸಿದೆ.


ನಿಮ್ಮ ಮಾಹಿತಿಗಾಗಿ ಇದು ಎಲೆಕ್ಟ್ರಿಕ್ ಸ್ಕೂಟರ್ ಆಗಿರಲಿದ್ದು, ಸಿಟಿಸರ್ಫರ್ ಎಂದು ಹೆಸರಿಸಿಕೊಂಡಿದೆ. ಇದು ಭವಿಷ್ಯದ ಸಂಚಾರ ವಾಹಕ ಎನಿಸಿಕೊಳ್ಳಲಿದೆ.

ಸುಸ್ಥಿರ ಪರಿಸರದ ನಿಟ್ಟಿನಲ್ಲಿ ವಿದ್ಯುತ್ ವಾಹನದ ನಿರ್ಮಾಣವು ಅತ್ಯಾವಶ್ಯಕವೆನಿಸಿದೆ. ಹಾಗೆಯೇ ಇದು ವ್ಯಕ್ತಿಗತ ಸಂಚಾರ ಸಮಸ್ಯೆಗೆ ಪರಿಹಾರವಾಗಲಿದೆ.


ಇದರಲ್ಲಿ ಲಿಥಿಯಂ ಇಯಾನ್ ಬ್ಯಾಟರಿ ಲಗ್ಗತ್ತಿಸಲಾಗಿದ್ದು, ಮನೆಯಲ್ಲಿರುವ 12 ವಾಟ್ ಸಾಕೆಟ್‌ನಿಂದಲೂ ಚಾರ್ಜ್ ಮಾಡಿಸಬಹುದಾಗಿದೆ. ಅಂತೆಯೇ 15ರಿಂದ 25 ಕೀ.ಮೀ. ವರೆಗೆ ಚಲಿಸಬಹುದಾಗಿದೆ.
mini citysurfer

ಇನ್ನು ಸಿಟಿಸರ್ಫರ್ ಕಾನ್ಸೆಪ್ಟ್ ಗಂಟೆಗೆ ಗರಿಷ್ಠ 25 ಕೀ.ಮೀ. ವೇಗದಲ್ಲಿ ಚಲಿಸಲಿದೆ. ಇನ್ನು ವಿಶೇಷವೆಂದರೆ ಇದನ್ನು ಮಡಚಬಹುದಾದ ರೀತಿಯಲ್ಲಿ ಮಿನಿ ವಿನ್ಯಾಸಗೊಳಿಸಿದೆ. ಅಲ್ಲದೆ ಕೇವಲ 18 ಕೆ.ಜಿ ತೂಕವನ್ನಷ್ಟೇ ಹೊಂದಿರುತ್ತದೆ. ಇದರಿಂದ ವಾಹನ ನಿಲುಗಡೆ ಸಮಸ್ಯೆ ನಿವಾರಣೆಯಾಗಲಿದ್ದು, ಕಾರುಗಳ ಢಿಕ್ಕಿಯಾಗಿ ಸುಲಭವಾಗಿ ಸಾಗಿಸಬಹುದಾಗಿದೆ.
Most Read Articles

Kannada
English summary
MINI is currently owned by German luxury automobile manufacturer BMW. The iconic British manufacturer has just launched its new 3-door and 5-door MINI in India. BMW themselves are going to launch two new products on 26th of November, 2014 in India, the M3 and M4.
Story first published: Friday, November 21, 2014, 15:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X