ಚೆನ್ನೈ ತಲುಪಿದ ರಾಷ್ಟ್ರೀಯ ಸುರಕ್ಷತಾ ಚಾಲನೆ

By Nagaraja

ಇತ್ತೀಚೆಗಷ್ಟೇ ಆರಂಭಗೊಂಡಿರುವ ಬೈಕ್ ಫೇಸ್ಟಿವಲ್ ಆಫ್ ಇಂಡಿಯಾ ಸ್ಪರ್ಧೆಯ ರಾಷ್ಟ್ರೀಯ ಸುರಕ್ಷತಾ ಚಾಲನೆಯು ದೇಶದ ಪ್ರಮುಖ ನಗರಗಳನ್ನು ಸಮೀಪಿಸುತ್ತಿದ್ದು, ಇದರಂತೆ ಚೆನ್ನೈ ನಗರವನ್ನು ತಲುಪಿದೆ.

ಟ್ರಯಂಪ್ ಮೋಟಾರುಸೈಕಲ್‌ನಲ್ಲಿ ಸವಾರಿ ಮಾಡುತ್ತಿರುವ ಸವಾರರು ದೆಹಲಿಯಿಂದ ತಮ್ಮ ಪಯಣ ಆರಂಭಿಸಿದ್ದರು. ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಇದನ್ನು ಉದ್ಘಾಟಿಸಿದ್ದರು.

National Safety Ride

ಈಗಾಗಲೇ ದೆಹಲಿ, ಜೈಪುರ, ಅಜ್ಮೆರ್, ಉದಯ್‌ಪುರ, ಅಹಮಾದಾಬಾದ್, ಸೂರತ್, ಮುಂಬೈ, ಪುಣೆ, ಬೆಂಗಳೂರು, ಊಟಿ, ಮೈಸೂರು, ಕೊಚ್ಚಿ ಮತ್ತು ಚೆನ್ನೈ ನಗರಗಳನ್ನು ಕ್ರಮಿಸಿರುವ ಸವಾರರು ಚೆನ್ನೈಗೆ ಎಂಟ್ರಿ ಕೊಟ್ಟಿದ್ದಾರೆ.

30 ದಿನಗಳ ಈ ದೀರ್ಘ ಪ್ರಯಾಣ ಯಾತ್ರೆಯು ಒಟ್ಟು 8170 ಕೀ.ಮೀ. ದೂರವನ್ನು ಪಯಣಿಸಲಿದ್ದಾರೆ. ಇನ್ನು ಚೆನ್ನೈನಿಂದ ಹೈದರಾಬಾದ್ ಮಾರ್ಗವಾಗಿ, ರಾಜಮುಂಡ್ರೈ, ಬರ್ಹಪುರ, ಭದ್ರಕ್ ನಗರಗಳಾಗಿ ಕೋಲ್ಕತ್ತಾವನ್ನು ತಲುಪಲಿದ್ದಾರೆ. ಅಲ್ಲಿಂದ ಬಳಿಕ ದಾನ್‌ಬಂದ್, ವಾರಣಾಸಿ, ಕಾನ್ಪುರ, ನೋಯ್ಡಾ, ಚಂಡೀಗಡ ಮೂಲಕ ಮತ್ತೆ ರಾಷ್ಟ್ರ ರಾಜಧಾನಿ ನವದೆಹಲಿಯನ್ನು ಸೇರಿಕೊಳ್ಳಲಿದ್ದಾರೆ.

ಮೂರು ಮಹಿಳೆಯರು ಸೇರಿದಂತೆ ಒಟ್ಟು 10 ಮಂದಿ ಸೇರಿಕೊಂಡಿರುವ ಈ ಬೈಕ್ ಯಾತ್ರೆ 2014 ಸೆಪ್ಟೆಂಬರ್ 29ರಂದು ಕೊನೆಗೊಳ್ಳಲಿದೆ. ಅಂದ ಹಾಗೆ ಇಂಡಿಯನ್ ಬೈಕ್ ಫೇಸ್ಟಿವಲ್ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಅಕ್ಟೋಬರ್ 4 ಹಾಗೂ 5ರಂದು ಆಯೋಜನೆಯಾಗಲಿದೆ.

Most Read Articles

Kannada
English summary
The Bike Festival of India has organised a National Safety Ride, which will halt at major cities of India. The riders on Triumph motorcycles have made their way to Chennai. They began their journey from New Delhi, where the event was flagged off by Indian pacer Ishant Sharma.
Story first published: Tuesday, September 16, 2014, 15:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X