ಮಹಿಳೆಯರಿಗಾಗಿ ಸದ್ಯದಲ್ಲೇ ಬರುತ್ತಿದೆ 'ನಿರ್ಭಯಾ' ಸ್ಕೂಟರ್

By Nagaraja

2012ರಲ್ಲಿ ದೆಹಲಿಯಲ್ಲಿ ನಡೆದ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಅತ್ಯಾಚಾರ ಪ್ರಕರಣ ರಾಷ್ಟ್ರ ರಾಜಧಾನಿಯನ್ನು ಅಷ್ಟೇ ಅಲ್ಲದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಖಾಸಗಿ ಬಸ್‌ನೊಳಗೆ ನಿರ್ಭಯಾ ಮೇಲೆ ಬಲತ್ಕಾರ ನಡೆದಿತ್ತು.

ಈ ಘಟನೆ ನಡೆದು ಎರಡು ವರ್ಷಗಳೇ ಸಂದರೂ ಇದರ ಕಹಿ ನೆನಪು ಮಾಸಿಲ್ಲ. ಇದೀಗ ನಿರ್ಭಯಾ ಹೆಸರು ಮತ್ತೆ ಕೇಳಲಾರಂಭಿಸಿದೆ. ಯಾಕೆಂದರೆ ಭಾರತ ಹಾಗೂ ಜಪಾನ್ ತಲಹದಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಜಂಟಿಯಾಗಿ, ನಿರ್ಭಯಾ ಎಲೆಕ್ಟ್ರಿಕ್ ಸ್ಕೂಟರನ್ನು ಹೊರತರುತ್ತಿದೆ. ಇದು ಮುಂದಿನ ಎರಡು ತಿಂಗಳೊಳಗೆ ಅಂದರೆ ಹಬ್ಬದ ಆವೃತ್ತಿ ವೇಳೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

Nirbhaya Electric Scooter

ಜಪಾನ್ ಮೂಲದ ಮೊರೆಲ್ಲೊ ಯಮಸಕಿ ಹಾಗೂ ಭಾರತದ ಆರ್ಯ ಸಂಸ್ಥೆ ಜಂಟಿಯಾಗಿ ಇದನ್ನು ಹೊರತರುತ್ತಿದೆ. ಅಲ್ಲದೆ ಸ್ಮರ್ಧಾತ್ಮಕ 35,000ರು.ಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ತನ್ನ ಆದ ವಿಶಿಷ್ಟ ವಿನ್ಯಾಸ ಹೊಂದಿರುವ ನಿರ್ಭಯಾ ಖರೀದಿ ವೇಳೆ ಮಹಿಳೆಯರಿಗೆ ವಿಶೇಷ ಶೇಕಡಾ 10ರಷ್ಟು ರಿಯಾಯಿತಿ ದರ ಕೂಡಾ ನೀಡಲಾಗುವುದು.

ಅಂದ ಹಾಗೆ ನಿರ್ಭಯಾ ಎಲೆಕ್ಟ್ರಿಕ್ ಸ್ಕೂಟರಲ್ಲಿ ಜಿಪಿಆರ್‌ಎಸ್ ಕನೆಕ್ಟಿವಿಟಿ, ಅಪಾಯದ ವೇಳೆ ತಮ್ಮ ಕುಟುಂಬ ಸದಸ್ಯರಿಗೆ ಒಂದಕ್ಕಿಂತ ಹೆಚ್ಚು ಸಂದೇಶ ರವಾನಿಸಬಹುದಾದ ಎಸ್‌ಒಎಸ್ ಬಟನ್ ಮುಂತಾದ ಆಧುನಿಕ ಸೌಲಭ್ಯಗಳು ಲಭ್ಯವಿರಲಿದೆ. ಈ ಸಂದರ್ಭದಲ್ಲಿ ಸಂದೇಶ ಪಡೆದುಕೊಂಡವರು ವಾಹನದ ಯಥಾರ್ಥವಾದ ಸ್ಥಳವನ್ನು ಟ್ರ್ಯಾಕ್ ಮಾಡಬಹುದಾಗಿದೆ.

ಗರಿಷ್ಠ ವೇಗ 25 ಕೀ.ಮೀ.ಗೆ ಸೀಮಿತಗೊಳಿಸಲಾಗಿರುವ ಈ ಬೈಕ್ ಚಾಲನೆಗೆ ಯಾವುದೇ ರೀತಿಯ ಚಾಲನಾ ಪರವಾನಗಿಯ ಅಗತ್ಯವಿರುವುದಿಲ್ಲ ಎಂಬುದು ಇನ್ನೊಂದು ವಿಶೇಷತೆಯಾಗಿದೆ.

Most Read Articles

Kannada
English summary
In two months time, Indo-Japanese electric two wheeler maker called Morello Yamasaki will come out with an electric scooter for women, called Nirbhaya electric scooters, named after the unfortunate brave girl of the December 2012 Delhi gang-rape incident.
Story first published: Saturday, August 23, 2014, 11:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X