ಇಂಡಿಯನ್‌ನಿಂದ ಸ್ಕೌಟ್ ಬೈಕ್ ಅನಾವರಣ, ಬುಕ್ಕಿಂಗ್ ಆರಂಭ

By Nagaraja

ಹೇಗೆ ಐಷಾರಾಮಿ ಕಾರು ಬ್ರಾಂಡ್‌ಗಳು ನಿಧಾನವಾಗಿ ಭಾರತ ಮಾರುಕಟ್ಟೆಯಲ್ಲಿ ಪ್ರಗತಿ ಸಾಧಿಸುತ್ತಿದೆಯೋ ಅದೇ ರೀತಿ ಐಷಾರಾಮಿ ದ್ವಿಚಕ್ರ ವಾಹನಗಳು ಸಹ ಕಳೆದ ಕೆಲವು ಸಮಯಗಳಿಂದ ದೇಶದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸುತ್ತಿದೆ.

ಹಾಗಿರುವಾಗ ಭಾರತಕ್ಕೆ ಎಂಟ್ರಿ ಕೊಟ್ಟಿರುವ ಅಮೆರಿಕ ಮೂಲದ ಐಕಾನಿಕ್ ದ್ವಿಚಕ್ರ ಬ್ರಾಂಡ್ ಆಗಿರುವ ಇಂಡಿಯನ್ ಮೋಟಾರ್‌ಸೈಕಲ್ಸ್ ತನ್ನ ಕ್ರೂಸರ್ ರೇಂಜ್ ಬೈಕ್‌ಗಳೊಂದಿಗೆ ಗಮನ ಸೆಳೆದಿದೆ.

Polaris India

ಆಫ್ ರೋಡ್ ದೈತ್ಯ ಪೊಲರಿಸ್ ಸಹಭಾಗಿತ್ವದಲ್ಲಿ ಭಾರತ ಪ್ರವೇಶ ಪಡೆದಿರುವ ಇಂಡಿಯನ್ ಮೋಟಾರ್‌ಸೈಕಲ್ ಹೊಸತಾದ ಸ್ಕೌಟ್ ಬೈಕ್‌ ಅನಾವರಣಗೊಳಿಸಿದ್ದು, ಬುಕ್ಕಿಂಗ್ ಪ್ರಕ್ರಿಯೆ ಸಹ ಆರಂಭಿಸಿದೆ. ಈ ಸಂದರ್ಭದಲ್ಲಿ ಕೆಲವು ತಿಂಗಳುಗಳ ಹಿಂದೆಯಷ್ಟೇ ಚೀಫ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿರುವುದನ್ನು ನೆನಪಿಕೊಳ್ಳಬಹುದು.

ಬರೋಬ್ಬರಿ 1131 ಸಿಸಿ ಲಿಕ್ವಿಡ್ ಕೂಲ್ಡ್ ವಿ ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸ್ಕೌಟ್ ಕ್ರೂಸರ್ ಬೈಕ್ 244 ಕೆ.ಜಿ ತೂಕವನ್ನು ಹೊಂದಿದೆ. ಇದು ಗರಿಷ್ಠ 100 ಅಶ್ವಶಕ್ತಿ (97.7 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂದ ಹಾಗೆ ಸ್ಕೌಟ್ ಬೈಕ್‌ನ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ದರ 11,99,000 ರು.ಗಳಾಗಿರಲಿದೆ. ಅಲ್ಲದೆ ವಿತರಣೆಯು ಸದ್ಯದಲ್ಲೇ ಆರಂಭವಾಗಲಿದೆ.

Most Read Articles

Kannada
English summary
After electrifying India by revealing their 2014 Indian Chief range, Polaris India Pvt. Ltd, a wholly owned subsidiary of Polaris Industries Inc., the world leader in Off-Road and All-Terrain Vehicles has announced the availability of the new Indian Scout through bookings with effect from today.
Story first published: Thursday, August 28, 2014, 14:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X