ಭಾರತದಲ್ಲಿ ಭದ್ರ ನೆಲೆ ಸ್ಥಾಪಿಸಲಿರುವ ಸುಜುಕಿ

ಭಾರತದಲ್ಲಿ ನಾಲ್ಕು ಚಕ್ರಗಳ ವಾಹನ ವಿಭಾಗದಲ್ಲಿ ವಿಸ್ತಾರವಾದ ಮಾರುಕಟ್ಟೆಯನ್ನು ಹೊಂದಿರುವ ಸುಜುಕಿ ದ್ವಿಚಕ್ರ ವಾಹನ ವಿಭಾಗದಲ್ಲಿ ನಿರೀಕ್ಷಿದಷ್ಟು ಬೆಳವಣಿಗೆ ಸಾಧಿಸಿಲ್ಲ.

ಇತ್ತೀಚೆಗಷ್ಟೇ ಜಿಕ್ಸರ್ ಬೈಕ್ ಹಾಗೂ ಲೆಟ್ಸ್ ಸ್ಕೂಟರ್ ಬಿಡುಗಡೆ ಮಾಡಿದ್ದ ಸುಜುಕಿ, ಚುರುಕು ಮೂಡಿಸಿತ್ತು. ಜಾಗತಿಕವಾಗಿ ಹೈ ಎಂಡ್ ಬೈಕ್‌ಗಳಿಗೆ ಹೆಸರುವಾಸಿಯಾಗಿರುವ ಸುಜುಕಿ ಭಾರತದಲ್ಲಿ ಸಮತೋಲನ ಕಾಪಾಡಿಕೊಳ್ಳುವ ಇರಾದೆಯಲ್ಲಿದೆ. ಇದೇ ಕಾರಣಕ್ಕಾಗಿ ಭಾರತದಂತಹ ಬೆಳೆದು ಬರುತ್ತಿರುವ ದೇಶಗಳಲ್ಲಿ ಹೆಚ್ಚು ಆಸಕ್ತಿದಾಯಕ ಮಾದರಿಗಳನ್ನು ಒದಗಿಸುವ ಯೋಜನೆ ಹೊಂದಿದೆ.

Suzuki Motorcycles

ಸದ್ಯ ಭಾರತದಲ್ಲಿ 46,722ರು.ಗಳಿಂದ 15.95 (ಮುಂಬೈ ಎಕ್ಸ್ ಶೋ ರೂಂ) ಲಕ್ಷ ರು.ಗಳ ಬೆಲೆ ರೇಂಜ್‌ನಲ್ಲಿ 11 ಬೈಕ್ ಹಾಗೂ ಮೂರು ಸ್ಕೂಟರ್ ಮಾದರಿಗಳನ್ನು ಸುಜುಕಿ ಪರಿಚಿಯಿಸಿದೆ. ಇದರಲ್ಲಿ ಸೂಪರ್ ಬೈಕ್ ಸಹ ಸೇರಿಕೊಂಡಿದೆ.

ಮಧ್ಯ ಪೂರ್ವ, ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದಲ್ಲಿ ಭದ್ರ ನೆಲೆ ಸ್ಥಾಪಿಸುವುದು ಸುಜುಕಿ ಗುರಿಯಾಗಿದೆ. ಹಾಗೆಯೇ ಭಾರತದಿಂದ ವಾಹನಗಳನ್ನು ರಫ್ತು ಮಾಡುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಅಂದರೆ ಭಾರತ ಸುಜುಕಿ ಪ್ರಮುಖ ನಿರ್ಮಾಣ ನೆಲೆಯಾಗಿ ಅಭಿವೃದ್ಧಿ ಹೊಂದಲಿದೆ.

ಸಮಕಾಲೀನ ಪರಿಸ್ಥಿತಿಯಲ್ಲಿ ಹೀರೊ ಹಾಗೂ ಹೋಂಡಾ ಅಧಿಪತ್ಯ ಸ್ಥಾಪಿಸಿರುವ ಹಿನ್ನಲೆಯಲ್ಲಿ ಇನ್ನಷ್ಟು ಹೂಡಿಕೆ ಮಾಡುವುದು ಸುಜುಕಿ ಗುರಿಯಾಗಿದೆ.

Most Read Articles

Kannada
English summary
Japanese automobile giant Suzuki is a major volume player in the four wheeler segment. However, the same cannot be said in regards to their two wheeler offering. They have recently launched their Gixxer motorcycle and had earlier launched their Let's scooter.
Story first published: Saturday, September 13, 2014, 15:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X