ಯಮಹಾ 'ಮಿಷನ್ 10000 ಕೀ.ಮೀ.' ರೈಡಿಂಗ್‌ಗೆ ಚಾಲನೆ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಯಮಹಾ 'ಮಿಷನ್ 10000 ಕೀ.ಮೀ.' ಎಂಬ ರೈಡಿಂಗ್‌ ಕೂಟಕ್ಕೆ ಚಾಲನೆ ನೀಡಿದೆ.

ಸ್ವಯಂ ಶೋಧನೆಯ ಈ ಪಯಣವನ್ನು ಯಮಹಾದ ಪ್ರಮುಖ ಅಂಬಾಸಿಡರ್ ಮತ್ತು ಬಾಲಿವುಡ್ ನಟರಾಗಿರುವ ಜಾನ್ ಅಬ್ರಹಾಂ ಉದ್ಘಾಟಿಸಿದ್ದಾರೆ.


ಸೆಪ್ಟೆಂಬರ್ 14ರಂದು ನವದೆಹಲಿಯ ನ್ಯಾಷನಲ್ ಸ್ಟೇಡಿಯಂನಿಂದ ಮಿಷನ್ 10000 ಕೀ.ಮೀ. ಆರಂಭವಾಗಿದೆ. ಹಾಗೆಯೇ 20ರಷ್ಟು ಮೋಟಾರು ಸೈಕಲ್ ಚಾಲಕರು ಇಡೀ ದೇಶವನ್ನೇ ಸುತ್ತಾಡಲಿದ್ದಾರೆ.

ಇದರಲ್ಲಿ ಭಾಗವಹಿಸುವವರಿಗೆ ಯಮಹಾ ಇತ್ತೀಚೆಗಷ್ಟೇ ಎಫ್‌ಝಡ್‌ಎಸ್ ಎಫ್1 ವರ್ಷನ್ 2.0 ಮೋಟಾರುಸೈಕಲ್ ಒದಗಿಸಿತ್ತು. ಸುರಕ್ಷಿತ ಹಾಗೂ ಸರಿಯಾದ ಚಾಲನೆಯನ್ನು ಪ್ರೋತ್ಸಾಹಿಸುವದರ ನಿಟ್ಟಿನಲ್ಲಿ ಯಮಹಾ ಇದನ್ನು ಹಮ್ಮಿಕೊಂಡಿದೆ.

yamaha

ಈ ಚಾಲನಾ ಕಾರ್ಯಕ್ರಮಕ್ಕೆ ಅಧಿಕೃತ ಬೈಕ್ ರೂಪದಲ್ಲಿ ಯಮಹಾ ಎಫ್‌ಝಡ್ ವರ್ಷನ್ 2.0 ಆರಿಸಲಾಗಿದೆ. ಇದು ಮಿಷನ್ 10000 ಕೀ.ಮೀ. ಉದ್ದಕ್ಕೂ ವಾಹನ ಪ್ರೇಮಿಗಳನ್ನು ಸಂಪರ್ಕಿಸಲಿದೆ.
Most Read Articles

Kannada
English summary
Yamaha India has commenced its 'Mission 10000 Km', which is a journey of self-discoveration. The ride was flagged off by John Abraham, Yamaha brand ambassador and Bollywood star. Also present at the ceremony was Koyal Rana, Miss India 2014.
Story first published: Monday, September 15, 2014, 14:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X