ದೇಶದಲ್ಲಿ 125 ಸಿಸಿ ಬೈಕ್‌ಗಳಿಗೂ ಎಬಿಎಸ್ ಕಡ್ಡಾಯ?

By Nagaraja

ವಾಹನ ಜಗತ್ತಿನ ಕ್ರಾಂತಿಕಾರಿ ಬೆಳವಣಿಗೆಯೊಂದರಲ್ಲಿ ದೇಶದಲ್ಲೂ 1225 ಸಿಸಿ ಹಾಗೂ ಮೇಲ್ಪಟ್ಟ ಬೈಕ್‌ಗಳಿಗೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಬಳಕೆ ಕಡ್ಡಾಯವಾಗಲಿದೆ. ದೇಶದಲ್ಲಿ ರಸ್ತೆ ಅಪಘಾತದಿಂದಾಗಿ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಇಂತಹದೊಂದು ಗಮನಾರ್ಹ ಬೆಳವಣೆಗೆ ಕಂಡುಬಂದಿದೆ.

ಸಾರಿಗೆ ಇಲಾಖೆಯು ನಿಧಾನವಾಗಿ ಎಬಿಎಸ್ ಕಡ್ಡಾಯ ಬಳಕೆಯನ್ನು ಜಾರಿಗೆ ತರಲಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ಭಾರತೀಯ ಮಧ್ಯಮ ವರ್ಗದ ಜನರು ಮೋಟಾರುಸೈಕಲ್‌ಗಳನ್ನೇ ಅತಿ ಹೆಚ್ಚು ನೆಚ್ಚಿಕೊಂಡಿದ್ದಾರೆ. ಇದರಿಂದಲೇ ಮೋಟಾರುಸೈಕಲ್ ಮಾರುಕಟ್ಟೆ ಆಗಾಧವಾಗಿ ಬೆಳೆದು ನಿಂತಿದೆ.

abs

ಇನ್ನೊಂದೆಡೆ ಸುರಕ್ಷತೆಯತ್ತ ಗಮನ ಹಾಯಿಸಿದಾಗ ಅತ್ಯಂತ ಕಳಮೆ ಮಟ್ಟದಲ್ಲಿದೆ. ಸಾರಿಗೆ ಸಚಿವಾಲಯದ 2013ರ ಪ್ರಕಾರ ದೇಶದಲ್ಲಿ ರಸ್ತೆ ಅಪಘಾತದಲ್ಲೇ 39,353 ದ್ವಿಚಕ್ರ ವಾಹನ ಸವಾರರು ಸಾವೀಗೀಡಾಗಿದ್ದರು.

ಅಂದರೆ ದೇಶದ ರಸ್ತೆಯಲ್ಲಿ ನಡೆಯುವ ಒಟ್ಟು ಅಪಘಾತದ ಶೇಕಡಾ 70ರಷ್ಟರಲ್ಲಿ ದ್ವಿಚಕ್ರ ಸವಾರರು ಭಾಗಿಯಾಗಿರುತ್ತಾರೆ. ಇನ್ನು ಇಂತಹ ಬಹುತೇಕ ಪ್ರಕರಣಗಳಲ್ಲಿ ಸವಾರರು ಕನಿಷ್ಠ ಹೆಲ್ಮೆಟ್ ಕೂಡಾ ಧರಿಸುವುದಿಲ್ಲವೆಂಬುದು ಕಂಡುಬಂದಿದೆ. ಇದರಿಂದ ಪ್ರಯಾಣಿಕ ಅಪಾಯದಿಂದ ಪಾರಾಗುವ ಎಲ್ಲ ಸಾಧ್ಯತೆಗಳು ಕ್ಷೀಣಿಸುತ್ತದೆ.

ಈಗ ಯುರೋಪ್ ರಸ್ತೆ ಕಾನೂನಿಂದ ಪ್ರೇರಣೆ ಪಡೆದಿರುವ ಭಾರತದ ಸಾರಿಗೆ ಅಧಿಕಾರಿಗಳು ದೇಶದಲ್ಲೂ 125 ಸಿಸಿ ಹಾಗೂ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಎಬಿಎಸ್ ಬಳಕೆ ಕಡ್ಡಾಯಗೊಳಿಸಲು ನಿರ್ಧರಿಸಿದೆ. ಇದನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು.

ಬೈಕ್ ಬೆಲೆ ಹೆಚ್ಚಳ?
ಭಾರತದಲ್ಲಿ ಪ್ರಯಾಣಿಕ ಬೈಕ್‌ಗಳಿಗೆ ಅತಿ ಹೆಚ್ಚು ಬೇಡಿಕೆಯಿದೆ. ಹಾಗಿರುವಾಗ ಎಬಿಎಸ್‌ಗಳಂತಹ ಸುರಕ್ಷಾ ಮಾನದಂಡವನ್ನು ಅನುಸರಿಸಿದರೆ ಇದು ಬೈಕ್ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ. ಆದರೆ ಇದರಿಂದ ಅವಘಡಗಳ ಸಂಖ್ಯೆ ಕಡಿಮೆಯಾಗಲಿದೆ ಎಂಬುದನ್ನು ನಾವು ಮರೆಯಬಾರದು.

ಅಷ್ಟಕ್ಕೂ ಎಬಿಎಸ್ ಎಂದರೇನು? ಹೇಗೆ ಕೆಲಸ ಮಾಡುತ್ತದೆ?
ಎಬಿಎಸ್ ಪೂರ್ಣ ರೂಪ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್). ಸಾಮಾನ್ಯವಾಗಿ ಹಠತ್ ಆಗಿ ಬ್ರೇಕ್ ಅದುಮಿದಾಗ ಚಕ್ರದ ಚಲನೆ ನಿಲುಗಡೆಯಾಗುತ್ತದೆ. ಚಕ್ರವನ್ನು ಬಿಗಿಯಾಗಿ ಹಿಡಿಯುವುದರಿಂದ ಹೀಗಾಗುತ್ತದೆ. ಇದರ ಪರಿಣಾಮ ಸ್ಟೀರಿಂಗ್ ಹಾಗೂ ಹ್ಯಾಂಡಲ್ ಲಾಕ್ ಆಗಿ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇದ್ದು ಚಾಲಕರಿಗೆ ಅಪಘಾತವನ್ನು ತಪ್ಪಿಸುವ ಅವಕಾಶವಿರುವುದಿಲ್ಲ.

ಇಂತಹ ಅವಘಡ ಸಾಧ್ಯತೆಗಳನ್ನು ತಪ್ಪಿಸುವ ಹಾಗೂ ಬ್ರೇಕಿಂಗ್ ಅಂತರವನ್ನು ಸಾಕಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಆಟೋ ಎಂಜಿನಿಯರ್‌ಗಳು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಎಂಬ ಬ್ರೇಕಿಂಗ್ ತಂತ್ರಜ್ಞಾನವನ್ನು ಕಂಡುಹುಡುಕಿದ್ದಾರೆ. ಇದರಂತೆ ಬ್ರೇಕ್ ಅದುಮಿದ ಸಂದರ್ಭದಲ್ಲಿ ಚಕ್ರ ಹಠಾತಿ ಆಗಿ ಬಂದ್ ಆಗುವುದಿಲ್ಲ. ಬದಲಾಗಿ ವೇಗವನ್ನು ಕಡಿತಗೊಳಿಸಿ, ತಿರುಗಿಸುತ್ತಲೇ ಇರುತ್ತದೆ. ಇದರಿಂದ ಅಪಘಾತ ಸಂದರ್ಭದಲ್ಲಿ ಸವಾರರಿಗೆ ಗಾಡಿಯ ದಿಕ್ಕನ್ನು ಬದಲಾಯಿಸುವ ಅವಕಾಶವಿರುತ್ತದೆ.

ಮೋಟಾರುಸೈಕಲ್‌ನಲ್ಲಿ ಎಬಿಎಸ್ ಹೇಗೆ ಕೆಲಸ ಮಾಡುತ್ತದೆ - ವೀಡಿಯೋ ವೀಕ್ಷಿಸಿ

<iframe width="600" height="450" src="//www.youtube.com/embed/IUjTVzHIrXE?rel=0&showinfo=0&autoplay=0" frameborder="0" allowfullscreen></iframe>

Most Read Articles

Kannada
English summary
Soon ABS (anti-lock braking system) will become mandatory in India for all the motorcycles with 125cc displacement or bigger. This measure is a response to the increasing number of road-caused deaths among motorbike users and passengers.&#13;
Story first published: Wednesday, January 28, 2015, 11:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X