ವರ್ಷಾಂತ್ಯದೊಳಗೆ ಬಜಾಜ್ ಅವೆಂಜರ್ 200 ಬಿಡುಗಡೆ

By Nagaraja

ಬಜಾಜ್ ಅವೆಂಜರ್ ಹಳೆಯ ಮಾದರಿ ನಿರೀಕ್ಷಿತ ಮಟ್ಟದಲ್ಲಿ ಯಶ ಸಾಧಿಸದೇ ಇರಬಹುದು. ಆದರೆ ಇಲ್ಲಿಗೆ ತಮ್ಮ ಪ್ರಯತ್ನವನ್ನು ಕೊನೆಗೊಳಿಸಲು ಬಯಸದ ದೇಶದ ಮೂರನೇ ಅತಿ ದೊಡ್ಡ ದ್ವಿಚಕ್ರ ವಾಹನ ಬ್ರಾಂಡ್ ಆಗಿರುವ ಬಜಾಜ್ ಪ್ರಸಕ್ತ ಸಾಲಿನಲ್ಲೇ ಹೊಸ ಶೈಲಿಯ ಅವೆಂಜರ್ ಕ್ರೂಸರ್ ಬೈಕ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ವಾಹನ ವಲಯದಿಂದ ಬಂದಿರುವ ತಾಜಾ ಮಾಹಿತಿಗಳ ಪ್ರಕಾರ 2015 ವರ್ಷಾಂತ್ಯದೊಳಗೆ ಎಲ್ಲ ಹೊಸತದನ ಬಜಾಜ್ ಅವೆಂಜರ್ 200 ಬಿಡುಗಡೆಯಾಗಲಿದೆ. ಈ ಮೂಲಕ ತನ್ನ ಸಾನಿಧ್ಯವನ್ನು ಮತ್ತಷ್ಟು ಗಟ್ಟಿಪಡಿಸಲಿದೆ.

ಬಜಾಜ್ ಅವೆಂಜರ್

ಹೊಸ ವಿನ್ಯಾಸ ತಂತ್ರಗಾರಿಕೆಯನ್ನು ಅವೆಂಜರ್ ನಲ್ಲಿ ಬಳಕೆ ಮಾಡಲಾಗಿದೆ. ಅಲ್ಲದೆ ಹಿಂದಿನ ಮಾದರಿಯಲ್ಲಿದ್ದ 220 ಸಿಸಿಯ ಬದಲು ಕಡಿಮೆ ಎಂಜಿನ್ ಸಾಮರ್ಥ್ಯದ 200 ಸಿಸಿ ಎಂಜಿನ್ ಬಳಕೆಯಾಗಲಿದೆ.

ಎಂಜಿನ್ ಮಾಹಿತಿ ಇಲ್ಲಿದೆ

  • 200 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್
  • 23.5 ಅಶ್ವಶಕ್ತಿ
  • 19 ಎನ್ ಎಂ ತಿರುಗುಬಲ
  • 6 ಸ್ಪೀಡ್ ಗೇರ್ ಬಾಕ್ಸ್

ವಿಶೇಷವೆಂದರೆ ಈಗಷ್ಟೇ ಬಿಡುಗಡೆಯಾಗಿರುವ ಪಲ್ಸರ್ ಎನ್‌ಎಸ್200 ಮಾದರಿಯಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಇದಾಗಿದೆ. ಅಲ್ಲದೆ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲಾಗುವುದು. ಒಟ್ಟಿನಲ್ಲಿ ಹಿಂದಿನ ಮಾದರಿಯಲ್ಲಿನ ಎಲ್ಲ ಕುಂದು ಕೊರತೆಗಳನ್ನು ನೀಗಿಸುವ ಪ್ರಯತ್ನದಲ್ಲಿರುವ ಬಜಾಜ್, ದೇಶದ ಬೈಕ್ ಪ್ರೇಮಿಗಳಿಗೆ ಒಂದು ಉತ್ತಮ ಉತ್ಪನ್ನವನ್ನು ನೀಡುವ ಭರವಸೆಯಲ್ಲಿದೆ.

Most Read Articles

Kannada
English summary
Bajaj Avenger 200 To Be Launched In India During 2015-end
Story first published: Saturday, July 25, 2015, 13:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X