ಹೊಸ ಸ್ವರೂಪ ಪಡೆಯುತ್ತಿದೆ ನಿಮ್ಮ ನೆಚ್ಚಿನ ಅವೆಂಜರ್

By Nagaraja

ಭಾರತೀಯ ವಾಹನ ಮಾರುಕಟ್ಟೆಗೆ ಕ್ರಾಂತಿಕಾರಿ ಬದಲಾವಣೆಯ ರೂಪದಲ್ಲಿ ಬಜಾಜ್ ಅವೆಂಜರ್ ಪ್ರವೇಶವಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಎಲ್ಲ ವಿಭಾಗದ ಗ್ರಾಹಕರನ್ನು ಆಕರ್ಷಿಸುವಲ್ಲಿ ವಿಫಲವಾಗಿತ್ತು. ಆದರೂ ಈಗಲೂ ಕೈಗೆಟಕುವ ಕ್ರೂಸರ್ ಬೈಕ್‌ಗಳತ್ತ ಕಣ್ಣಾಯಿಸಿದಾಗ ಬಜಾಜ್ ಅವೆಂಜರ್ ಎದ್ದು ಕಾಣಿಸುತ್ತದೆ. ಇದುವೇ ಅವೆಂಜರ್ ಜನಪ್ರಿಯತೆಗೂ ಸಾಕ್ಷಿಯಾಗಿತ್ತು.

ಈಗ ಬಂದಿರುವ ಮಾಹಿತಿಯ ಏನೆಂದರೆ ನಿಮ್ಮ ನೆಚ್ಚಿನ ಅವೆಂಜರ್ ಹೊಸ ಸ್ವರೂಪ ಪಡೆಯುತ್ತಿದೆ. ಹೌದು, ಎಲ್ಲ ಹೊಸತನದಿಂದ ಕೂಡಿರುವ ಬಜಾಜ್ ಅವೆಂಜರ್ ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗಲಿದೆ.

bajaj avenger

ಬಜಾಜ್‌ನ ಏಕ ಮಾತ್ರ ಕ್ರೂಸರ್ ಬೈಕ್ ಆಗಿರುವ ಹೊಸ ಅವೆಂಜರ್‌ನಲ್ಲಿ ಆಧುನಿಕತೆಗೆ ತಕ್ಕಂತೆ ಹೆಚ್ಚಿನ ಬದಲಾವಣೆ ಕಂಡುಬರುವ ನಿರೀಕ್ಷೆಯಿದೆ. ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಹೈ ಎಂಡ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ.

ಅಷ್ಟೇ ಯಾಕೆ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳ ಸಂಖ್ಯೆಯು ಜಾಸ್ತಿಯಾಗುತ್ತಲೇ ಇದೆ. ಇವೆಲ್ಲವನ್ನು ಗಮನ ಹರಿಸಿದಾಗ ಅವೆಂಜರ್‌ಗೆ ಬದಲಾವಣೆ ಅತ್ಯಗತ್ಯವಾಗಿದೆ.

ನಿಮ್ಮ ಮಾಹಿತಿಗಾಗಿ ಈಗ ಮಾರುಕಟ್ಟೆಯಲ್ಲಿರುವ ಅವೆಂಜರ್ 220 ಸಿಸಿ ಎಂಜಿನ್ ಪಡೆದುಕೊಂಡಿದೆ. ಈಗ ತನ್ನ ಯೋಜನೆ ಮರು ಚಿಂತನೆ ಮಾಡಲಿರುವ ಬಜಾಜ್ ಮತ್ತೆ ತನ್ನ ಜನಪ್ರಿಯ 200 ಎನ್‌ಎಸ್ ಮಾದರಿಯಲ್ಲಿರುವ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ.

ಬಜಾಜ್ ಪಲ್ಸರ್ 200 ಎನ್‌ಎಂ ಮಾದರಿಯು 199 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 23 ಅಶ್ವಶಕ್ತಿ (18 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ ಆರು ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಇನ್ನು ಅಂದಾಜು ಎಕ್ಸ್ ಶೋ ರೂಂ ಬೆಲೆ 85,000 ರು.ಗಳಿರುವ ಸಾಧ್ಯತೆಯಿದೆ. ಇದು ಭಾರತದಲ್ಲಿ ಬಜಾಜ್ ಬಿಡುಗಡೆ ಮಾಡಲಿರುವ ಆರು ಹೊಸ ಉತ್ಪನ್ನಗಳ ಭಾಗವಾಗಿರಲಿದೆ.

Most Read Articles

Kannada
English summary
For 2015, Bajaj has decided to give its Avenger a much needed update. It is expected to share several parts with existing models from the manufacturer. 
Story first published: Saturday, March 7, 2015, 9:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X