ಬಜಾಜ್ ಚೇತಕ್; ನಿಮಗೆ ಗೊತ್ತಿರದ 10 ಸತ್ಯಗಳು!

By Nagaraja

ಮೂರು ದಶಕಗಿಂತಲೂ ಹೆಚ್ಚು ಕಾಲ ಭಾರತೀಯ ರಸ್ತೆಯನ್ನು ಆಳಿರುವ ಸ್ಕೂಟರುಗಳ ರಾಜಾಧಿರಾಜ ಮಹಾರಾಜ 'ಬಜಾಜ್ ಚೇತಕ್' ಮರು ಪ್ರವೇಶವಾಗುತ್ತಿದೆ ಎಂಬ ಸುದ್ದಿ ಹರಡಿರುವಂತೆಯೇ ವಾಹನ ಪ್ರೇಮಿಗಳು ರೋಮಾಂಚನಗೊಂಡಿದ್ದಾರೆ.

'ಹಮಾರಾ ಬಜಾಜ್' ಎಂಬ ಜಾಹೀರಾತು ಮೂಲಕ ದೇಶದ ಮೂಲೆ ಮೂಲೆಯನ್ನು ತಲುಪಿದ್ದ ಬಜಾಜ್ ಚೇತಕ್ ಬಗ್ಗೆ ನಿಮಗೆ ಗೊತ್ತಿರದ 10 ಸಂಗತಿಗಳನ್ನು ನಾವಿಲ್ಲಿ ಬಯಲು ಮಾಡಲಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್‌ನತ್ತ ಮುಂದುವರಿಯಿರಿ....

ಬಜಾಜ್ ಚೇತಕ್; ನಿಮಗೆ ಗೊತ್ತಿರದ 10 ಸತ್ಯಗಳು!

ಬಜಾಜ್ ಚೇತಕ್ ನಿರ್ಮಾಣವಾದ ವರ್ಷ ಯಾವುದು? ಚೇತಕ್ ಹೆಸರಿನ ಹಿಂದಿರುವ ರಹಸ್ಯವೇನು ? ಚೇತಕ್ ಮಾದರಿಗೆ ಸ್ಪೂರ್ತಿ ಯಾರು ? ಮುಂಬರುವ ಚೇತಕ್ ಮಾದರಿ ಯಾವುದು ? ಹಮಾರಾ ಬಜಾಜ್ ವಿಶಿಷ್ಟತೆಗಳೇನು? ಎಂಬಿತ್ಯಾದಿ ರೋಚಕ ವಿಚಾರಗಳ ಬಗ್ಗೆ ತಿಳಿಯಲು ಮುಂದುವರಿಯಿರಿ...

1. ಚೇತಕ್ ಹೆಸರು ಹೇಗೆ ಬಂತು?

1. ಚೇತಕ್ ಹೆಸರು ಹೇಗೆ ಬಂತು?

ಬಜಾಜ್‌ನ ಜನಪ್ರಿಯ ಚೇತಕ್ ಹೆಸರಿನ ಹಿಂದೆ ಒಂದು ರೋಚಕ ಕಥೆಯಿದೆ. ಇದಕ್ಕೆ ಭಾರತೀಯ ಧೀರ ಯೋಧ ರಾಣಾ ಪ್ರತಾಪ್ ಸಿಂಗ್ ಅವರ ಕುದುರೆ 'ಚೇತಕ್' ಹಸರಿಡಲಾಗಿದೆ. ಇತಿಹಾಸ ಪುಸ್ತಕ ತೆರೆದು ನೋಡಿದಾಗ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ರಾಜಸ್ತಾನದ ಸಿಸೊಡಿಯಾ ರಾಜಪೂತ ರಾಜರಾಗಿರುವ ರಾಣಾ ಪ್ರತಾಪ್ ಸಿಂಗ್ ಅಂದಿನ ಬಲಿಷ್ಠ ಅಕ್ಖರ ಅವರ ಮುಗಲ್ ಸೈನ್ಯದ ವಿರುದ್ಧ ಹೋರಾಡಿದ್ದರು. 1576ನೇ ಇಸವಿಯಲ್ಲಿ ಹಲ್ದಿಘಾಟ್ ಯುದ್ಧದಲ್ಲಿ ಪ್ರತಾಪ್ ಅವರ ನಂಬಿಕೆಗ್ರಸ್ತ ಕುದರೆಯಾಗಿ ಯುದ್ಧ ಭೂಮಿಗಿಳಿದ್ದ ಚೇತಕ್ ಕುದರೆ, ಪ್ರಾಣಿ ನಿಷ್ಠೆಯನ್ನು ತೋರಿತ್ತಲ್ಲದೆ ಗಂಭೀರವಾಗಿ ಗಾಯಗೊಂಡಿರುವ ಹೊರತಾಗಿಯೂ ಎರಡು ಮೈಲ್ ದೂರದ ತನಕ ತನ್ನ ಮಾಲಿಕನನ್ನು ಬೆನ್ನ ಮೇಲೆರಿಸಿ ಹೋರಾಟ ಮುಂದುವರಿಸಿತ್ತಲ್ಲದೆ ಸರಸರನೆ ಹರಿಯುವ ಕಾಲುವೆಯನ್ನು ದಾಟುವ ಮೂಲಕ ಯಜಮಾನನ ರಕ್ಷಣೆಗೆ ಕಾರಣವಾಗಿತ್ತು.

2. ವೆಸ್ಪಾ ಡಿಸೈನ್

2. ವೆಸ್ಪಾ ಡಿಸೈನ್

ಇಟಲಿಯ ಐಕಾನಿಕ್ ವೆಸ್ಪಾದ ಜನಪ್ರಿಯ ಸ್ಪ್ರಿಂಟ್ (Vespa Sprint)ಮಾದರಿಯಿಂದ ಪ್ರೇರಣೆ ಪಡೆದುಕೊಂಡು ಬಜಾಜ್ ಚೇತಕ್ ವಿನ್ಯಾಸ ರಚಿಸಲಾಗಿದೆ. ಅಲ್ಲದೆ ಇದು ಬಜಾಜ್ ಸೂಪರ್ ಮಾದರಿಗೆ ಬದಲಿ ಆಯ್ಕೆಯಾಗಿತ್ತು.

3. 1972ರಿಂದ 2009ರ ವರೆಗೆ

3. 1972ರಿಂದ 2009ರ ವರೆಗೆ

ದಶಕಗಳಷ್ಟು ಕಾಲ ಭಾರತ ರಸ್ತೆಯನ್ನು ಆಳಿದ ಬಜಾಜ್ ಚೇತಕ್ ನಿರ್ಮಾಣವು 1972ರಲ್ಲಿ ಆರಂಭವಾಗಿ 2009ರಲ್ಲಿ ಕೊನೆಗೊಂಡಿತ್ತು.

4. ಹಮಾರಾ ಬಜಾಜ್

4. ಹಮಾರಾ ಬಜಾಜ್

ಅಂದಿನ ಕಾಲದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಹಮಾರಾ ಬಜಾಜ್ ಅಥವಾ ನಮ್ಮ ಬಜಾಜ್ ಜಾಹೀರಾತು ಬಜಾಜ್ ಚೇತಕ್ ಸ್ಕೂಟರನ್ನು ಅತ್ಯುನ್ನತ್ತ ಮಟ್ಟಕ್ಕೇರಿಸುವಲ್ಲಿ ನೆರವಾಗಿತ್ತು. (ಕೊನೆಯ ಸ್ಲೈಡ್‌ನಲ್ಲಿ ಕೊಟ್ಟಿರುವ ಹಮಾರಾ ಬಜಾಜ್ ವೀಡಿಯೋ ವೀಕ್ಷಿಸಲು ಮರೆಯದಿರಿ).

5. 2 ಸ್ಟ್ರೋಕ್, 4 ಸ್ಟ್ರೋಕ್ ಎಂಜಿನ್

5. 2 ಸ್ಟ್ರೋಕ್, 4 ಸ್ಟ್ರೋಕ್ ಎಂಜಿನ್

2002ನೇ ಇಸವಿಯ ವರೆಗೆ ಬಜಾಜ್ ಚೇತಕ್ ಟು ಸ್ಟ್ರೋಕ್ ಎಂಜಿನ್‌ನಲ್ಲಿ ನಿರ್ಮಿಸಲಾಗಿತ್ತು. ಬಳಿಕ ಭಾರತೀಯ ಸರಕಾರ ಮಾಲಿನ್ಯ ನಿಯಂತ್ರಣದ ಕಟ್ಟುನಿಟ್ಟಿನ ನಿಯಮದ ಭಾಗವಾಗಿ 2002ರ ಬಳಿಕ ಫೋರ್ ಸ್ಟ್ರೋಕ್ 145 ಸಿಸಿ ಎಂಜಿನ್ ಪರಿಚಯಿಸಲಾಗಿತ್ತು.

6. ಗೇರ್ ಬಾಕ್ಸ್, ಅಶ್ವಶಕ್ತಿ, ಸಸ್ಪೆನ್ಷನ್

6. ಗೇರ್ ಬಾಕ್ಸ್, ಅಶ್ವಶಕ್ತಿ, ಸಸ್ಪೆನ್ಷನ್

ಬಜಾಚ್ ಚೇತಕ್ 4 ಸ್ಪೀಡ್ ಗೇರ್ ಬಾಕ್ಸ್ ಹೊಂದಿತ್ತಲ್ಲದೆ ಇದರ ಎಂಜಿನ್ 7.5 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿತ್ತು. ಅಂತೆಯೇ ಸ್ವಿಂಗ್ ಆರ್ಮ್ ಸಸ್ಪೆನ್ಷನ್ ಇದರಲ್ಲಿದೆ.

7. ಗರಿಷ್ಠ ವೇಗ

7. ಗರಿಷ್ಠ ವೇಗ

ಬಜಾಜ್ ಚೇತಕ್ ಗಂಟೆಗೆ ಗರಿಷ್ಠ 80 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿತ್ತು.

8. ಇಂಧನ ಟ್ಯಾಂಕ್, ಭಾರ

8. ಇಂಧನ ಟ್ಯಾಂಕ್, ಭಾರ

ಬಜಾಜ್ ಚೇತಕ್ ಆರು ಲೀಟರುಗಳ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದ್ದು, 103 ಕೆ.ಜಿ ತೂಕವಿದೆ.

9. ಬಜಾಜ್ ಚೇತಕ್ ಮರುಜನ್ಮ

9. ಬಜಾಜ್ ಚೇತಕ್ ಮರುಜನ್ಮ

ಈಗ ಬಹಳ ವರ್ಷಗಳ ಬಳಿಕ ಬಜಾಜ್ ಚೇತಕ್ ಮರುಜನ್ಮ ಪಡೆದುಕೊಳ್ಳಲು ಸಿದ್ಧವಾಗುತ್ತಿದ್ದು, ನೂತನ ಸ್ಕೂಟರ್ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ 125 ಸಿಸಿ ಎಂಜಿನ್ ಪೆಡದುಕೊಳ್ಳುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ ಮುಂಬರುವ ವರ್ಷಗಳಲ್ಲಿ ಚೇತಕ್ ಸರಣಿಯ ಬೈಕ್‌ಗಳನ್ನು ಬಿಡುಗಡೆ ಮಾಡುವ ಯೋಜನೆಯು ಸಂಸ್ಥೆಗಿದೆ.

10. 2016 ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಸಾಧ್ಯತೆ

10. 2016 ಆಟೋ ಎಕ್ಸ್ ಪೋದಲ್ಲಿ ಬಿಡುಗಡೆ ಸಾಧ್ಯತೆ

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಮುಂದಿನ ವರ್ಷಾರಂಭದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಎಲ್ಲ ಹೊಸತನದಿಂದ ಕೂಡಿರುವ ಬಜಾಜ್ ಚೇತಕ್ ಬಿಡುಗಡೆಯಾಗುವ ಸಾಧ್ಯತೆಯಿದೆ.

ಹಮಾರಾ ಬಜಾಜ್ ವೀಡಿಯೋ ವೀಕ್ಷಿಸಿ

ಬಜಾಜ್ ಚೇತಕ್; ನಿಮಗೆ ಗೊತ್ತಿರದ 10 ಸತ್ಯಗಳು!

ಈಗ ಐಕಾನಿಕ್ ಬಜಾಜ್ ಚೇತಕ್ ಸ್ಕೂಟರ್ ಗೆ ಸಂಬಂಧಿಸಿದಂತೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿರಿ.

Most Read Articles

Kannada
English summary
Bajaj Chetak comeback: Top 10 things to know
Story first published: Friday, March 20, 2015, 9:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X