ಬಜಾಜ್ ಪಲ್ಸರ್ ಎಎಸ್150 ಮತ್ತು ಎಎಸ್200 ಭರ್ಜರಿ ಬಿಡುಗಡೆ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ, ಭಾರತೀಯ ಮಾರುಕಟ್ಟೆಗೆ ನೂತನ ಪಲ್ಸರ್ ಎಎಸ್150 ಹಾಗೂ ಎಎಎಸ್200 ಬೈಕ್ ಗಳನ್ನು ಬಿಡುಗಡೆ ಮಾಡಿದೆ. ಅಡ್ವೆಂಚರ್ (ಸಾಹನ) ಶ್ರೇಣಿಯಲ್ಲಿ ಗುರುತಿಸಿಕೊಳ್ಳಲಿರುವ ನೂತನ ಬೈಕ್ ಗಳು ಅನುಕ್ರಮವಾಗಿ 79,000 ಹಾಗೂ 91,550 ರು.ಗಳಷ್ಟು ದುಬಾರಿಯಾಗಲಿದೆ (ದೆಹಲಿ ಎಕ್ಸ್ ಶೋ ರೂಂ ಬೆಲೆ).

ಈ ಪೈಕಿ ಕಡಿಮೆ ದರಗಳಲ್ಲಿ ಅಡ್ವೆಂಚರ್ ಬೈಕ್ ಖರೀದಿ ಮಾಡುವವರಿಗೆ ಎಎಸ್150 ಉತ್ತಮ ಆಯ್ಕೆಯಾಗಿರಲಿದೆ. ಇದರೊಂದಿಗೆ ದೇಶದ ನಂ.1 ಕ್ರೀಡಾ ಬೈಕ್ ಆಗಿರುವ ಬಜಾಜ್ ತನ್ನ ಸಾನಿಧ್ಯವನ್ನು ಇನ್ನಷ್ಟು ಗಟ್ಟಿ ಮಾಡುವ ಇರಾದೆ ಹೊಂದಿದೆ.

ಬಜಾಜ್ ಪಲ್ಸರ್ ಎಎಸ್200

ಬಜಾಜ್ ಪಲ್ಸರ್ ಎಎಸ್200

ಬಜಾಜ್ ಸಂಸ್ಥೆಯ ಜಾಗತಿಕ ಉತ್ಪನ್ನವಾಗಿರುವ ಪಲ್ಸರ್ ಎಎಸ್200 ವಿದೇಶಗಳಲ್ಲೂ ಬಿಡುಗಡೆಯಾಗಲಿದೆ. ಇದು ಎನ್ ಎಸ್200 ಮಾದರಿಯಿಂದ ಸ್ಪೂರ್ತಿ ಪಡೆದ ಹಿಂಭಾಗ, ಸ್ವಿಂಗ್ ಆರ್ಮ್, ಸೀಟು ಸ್ಥಾನ ಹಾಗೂ ದೊಡ್ಡದಾದ ವಿಂಡ್ ಶೀಲ್ಡ್ ಪಡೆಯಲಿದೆ.

ಬಜಾಜ್ ಪಲ್ಸರ್ ಎಎಸ್200

ಬಜಾಜ್ ಪಲ್ಸರ್ ಎಎಸ್200

ಅಂತೆಯೇ ಮುಂಭಾಗದಲ್ಲಿ ದೊಡ್ಡ ಹೆಡ್ ಲ್ಯಾಂಪ್, ಪ್ರೊಜೆಕ್ಟರ್ ಜೊತೆಗೆ ಸೆಮಿ ಫೇರಿಂಗ್ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಇದರಲ್ಲಿ ಆಳವಡಿಸಲಾಗಿರುವ 199.5 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ 24 ಅಶ್ವಶಕ್ತಿ (18.6 ತಿರುಗುಬಲ) ಉತ್ಪಾದಿಸಲಿದೆ. ಇದು ಇತ್ತೀಚೆಗಷ್ಟೇ ಬಿಡುಗಡೆಯಾದ ಆರ್ ಎಸ್200 ಮಾದರಿಗೆ ಸಮಾನವಾಗಿದೆ.

ಬಜಾಜ್ ಪಲ್ಸರ್ ಎಎಸ್200

ಬಜಾಜ್ ಪಲ್ಸರ್ ಎಎಸ್200

ಬಣ್ಣಗಳು: ನೀಲಿ, ಕೆಂಪು, ಕಪ್ಪು

ಬೆಲೆ: 91,550 ರು. (ಎಕ್ಸ್ ಶೋ ರೂಂ ದೆಹಲಿ)

ಬಜಾಜ್ ಪಲ್ಸರ್ ಎಎಎಸ್150

ಬಜಾಜ್ ಪಲ್ಸರ್ ಎಎಎಸ್150

ಸಾಮಾನ್ಯ 150 ಸಿಸಿ ಬೈಕ್ ಗಿಂತಲೂ ವಿಭಿನ್ನವಾಗಿ ಸಂಪೂರ್ಣ ಹೊಸತನವನ್ನು ನೀಡಲಿರುವ ಪಲ್ಸರ್ ಎಎಸ್150 ಬೈಕ್ 149.5 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ 16.8 ಅಶ್ವಶಕ್ತಿ (13 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರಲ್ಲಿ 5 ಸ್ಪೀಡ್ ಗೇರ್ ಬಾಕ್ಸ್ ಸಹ ಇರಲಿದೆ.

 ಬಜಾಜ್ ಪಲ್ಸರ್ ಎಎಸ್150

ಬಜಾಜ್ ಪಲ್ಸರ್ ಎಎಸ್150

ಎಎಸ್200 ಮಾದರಿಯಿಂದ ಸ್ಪೂರ್ತಿ ಪಡೆದ ಹೆಡ್ ಲ್ಯಾಂಪ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮುಂತಾದವುಗಳು ಪಲ್ಸರ್ ಎಎಸ್150 ಮಾದರಿಯ ವಿಶೇಷತೆಯಾಗಿರಲಿದೆ. ಇದು ಅಡ್ವೆಂಚರ್ ಬೈಕ್ ಆರಂಭಕರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಬಜಾಜ್ ಪಲ್ಸರ್ ಎಎಸ್150

ಬಜಾಜ್ ಪಲ್ಸರ್ ಎಎಸ್150

ಬಣ್ಣಗಳು: ನೀಲಿ, ಕೆಂಪು, ಕಪ್ಪು

ಬೆಲೆ: 79,000 ರು. (ಎಕ್ಸ್ ಶೋ ರೂಂ ದೆಹಲಿ)


Most Read Articles

Kannada
English summary
Bajaj Pulsar AS200, AS150 Launched: Price, Specs, Feature & More
Story first published: Tuesday, April 14, 2015, 14:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X