ಎಲ್ಲವೂ ಅಂತಿಮ; ಮಾ.26ರಂದು ಹೊಸ ಪಲ್ಸರ್ ಬಿಡುಗಡೆ

By Nagaraja

ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಬಹುನಿರೀಕ್ಷಿತ ಬಜಾಜ್ ಪಲ್ಸರ್ ಆರ್ ಎಸ್ 200 ಬೈಕ್ ಇದೇ ಬರುವ 2015 ಮಾರ್ಚ್ 26ರಂದು ಬಿಡುಗಡೆಯಾಗಲಿದೆ. ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ ನ ಅತಿ ವೇಗದ ಬೈಕ್ ಇದಾಗಿರಲಿದೆ.

ಕೆಲವು ದಿನಗಳ ಹಿಂದೆಯಷ್ಟೇ ಹೊಸ ಪಲ್ಸರ್ ಆರ್ ಎಸ್ 200 ಸಂಬಂಧಪಟ್ಟಂತೆ ಆಕರ್ಷಕ ಟೀಸರ್ ಚಿತ್ರ ಹಾಗೂ ವೀಡಿಯೋ ಬಿಡುಗಡೆಗೊಳಿಸಿತ್ತು. ಈಗಾಗಲೇ ಹಲವು ಬಾರಿ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕಿರುವ ಪಲ್ಸರ್ ಆರ್ ಎಸ್ 200, ಆಧುನಿಕ ತಕ್ಕ ವಿನ್ಯಾಸವನ್ನು ಪಡೆದುಕೊಂಡಿದೆ.

bajaj pulsar rs 200

ಪಲ್ಸರ್ ಎನ್ ಎಸ್ 200 ಮಾದರಿಗೆ ಹೋಲಿಸಿದಾಗ ನೂತನ ಆರ್ ಎಸ್ 200 ಮಾದರಿಯು ಸಂಪೂರ್ಣ ಫೇರ್ಡ್ ವಿನ್ಯಾಸಕ್ಕೆ ಮೊರೆ ಹೋಗಿದೆ. ಹಾಗೆಯೇ ನಿಖರ ನಿರ್ವಹಣೆಗಾಗಿ ಎಂಜಿನ್ ಟ್ಯೂನ್ ಮಾಡುವ ಸಾಧ್ಯತೆಯಿದೆ.

ಮುಖ್ಯಾಂಶಗಳು

  • ಎಂಜಿನ್ ಸಾಮರ್ಥ್ಯ: 199.5 ಸಿಸಿ
  • ಅಶ್ವಶಕ್ತಿ: 24.04
  • ತಿರುಗುಬಲ: 18.6
  • ಗೇರ್ ಬಾಕ್ಸ್: 6 ಸ್ಪೀಡ್
  • ಸುರಕ್ಷತೆ: ಸ್ಟ್ಯಾಂಡರ್ಡ್ ಎಬಿಎಸ್
  • ಪ್ರತಿಸ್ಪರ್ಧಿ: ಕೆಟಿಎಂ ಆರ್ ಸಿ 200

bajaj pulsar rs 200
ಇನ್ನುಳಿದಂತೆ ಎಲ್ ಇಡಿ ಟೈಲ್ ಲ್ಯಾಂಪ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಡ್ಯುಯಲ್ ಪ್ರೊಜೆಕ್ಟರ್ ಹೆಡ್ ಲೈಟ್ಸ್ ಮುಂತಾದ ವೈಶಿಷ್ಟ್ಯಗಳು ಸ್ಟ್ಯಾಂಡರ್ಡ್ ಆಗಿ ದೊರಕುವ ಸಾಧ್ಯತೆಯಿದೆ. ಹಾಗಿದ್ದರೂ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯವಾಗಿದೆ.
Most Read Articles

Kannada
English summary
The fastest Pulsar till date by Bajaj will be launched on 26th of March, 2015 in India. Indian two-wheeler giant will be christening their first fully-faired motorcycle as the Pulsar RS 200.
Story first published: Friday, March 20, 2015, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X