ಬೆಂಗ್ಳೂರು ಪೊಲೀಸರಿಗೆ ಎನ್‌ಫೀಲ್ಡ್ ಓಕೆ, ಬಟ್ ಸೌಂಡ್ ನಾಟ್ ಓಕೆ ಏಕೆ?

By Nagaraja

ನೀವು ಬೆಂಗಳೂರು ನಗರದೆಲ್ಲೆಡೆ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಅತ್ತ ಇತ್ತ ತಿರುಗಾಡುತ್ತಿದ್ದೀರಾ? ಹಾಗಾದರೆ ಇಲ್ಲಿ ಹೇಳುವ ವಿಚಾರವನ್ನು ಸ್ವಲ್ಪ ತಾಳ್ಮೆಯಿಂದ ಕೇಳಿರಿ. ಯಾಕೆಂದರೆ ನಿಮ್ಮ ಈ ವರ್ತನೆ ನಮ್ಮ ಕಾನೂನು ಪಾಲಕರ ಸಹನೆಗೇಡುವಂತೆ ಮಾಡಿದೆ.

ಹಿಂದೆ ಐಕಾನಿಕ್ ಬೈಕ್ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಎನ್ ಫೀಲ್ಡ್ ಮೋಟಾರ್ ಸೈಕಲನ್ನು ಈಗ ಬಹುತೇಕ ಯುವ ಜನರು ಖರೀದಿ ಮಾಡುತ್ತಾರೆ. ಇದರ ಸ್ಟೈಲಿಂಗ್, ವಿಶ್ವದರ್ಜೆಯ ಗುಣಮಟ್ಟತೆ ಹಾಗೂ ನಿರ್ವಹಣೆಯೇ ಯಶಸ್ಸಿನ ಹಿಂದಿರುವ ಪ್ರಮುಖ ಕಾರಣವಾಗಿದೆ.

ರಾಯಲ್ ಎನ್‌ಫೀಲ್ಡ್

ಆದರೆ ಬೈಕ್ ಕ್ರೇಜ್ ಗೆ ಮಾರು ಹೋಗಿರುವ ಇಂದಿನ ಯುವ ಜನಾಂಗ ತಮ್ಮ ಪಯಣವನ್ನು ರಾಜಾರೋಷವಾಗಿಸಲು ವಿಶಿಷ್ಟ ಎಕ್ಸಾಸ್ಟ್ ಕೊಳವೆಗಳನ್ನು ಜೋಡಣೆ ಮಾಡುತ್ತಾರೆ. ಇದುವೇ ಬೆಂಗಳೂರು ಟ್ರಾಫಿಕ್ ಪೊಲೀಸರ ಕೆಂಗೆಣ್ಣಿಗೆ ಗುರಿಯಾಗಲು ಕಾರಣವಾಗಿದೆ.

ನಗರೆದೆಲ್ಲೆಡೆ ಶಬ್ದ ಮಾಲಿನ್ಯವುಂಟಾಗಿದ್ದು, ಇದರಿಂದಾಗಿ ಎಕ್ಸ್ ಕ್ಸಾಸ್ಟ್ ಕೊಳವೆಗಳನ್ನು ಮಾರ್ಪಾಡುಗೊಳಿಸದಂತೆ ಎಚ್ಚರಿಕೆ ನೀಡಿದೆ. ಇನ್ನು ಇದನ್ನು ಮೀರಿ ತಿರುಗಾಡುವವರ ಬೈಕ್ ಅನ್ನು ಮುಟ್ಟಗೋಲುಗೊಳಿಸಲಾಗುವುದು ಎಂದು ಆಜ್ಞಾಪಿಸಿದೆ.

ಮೋಟಾರ್ ಸೈಕಲ್ ಗರಿಷ್ಠ ಡೆಸಿಬಲ್ 84 ಆಗಿದ್ದು, ಆದರೆ ನಗರದಲ್ಲಿ ಇದನ್ನು ಮೀರಿ ಗಡ ಗಡ ಶಬ್ದದೊಂದಿಗೆ ಸಾಗುವ ಬೈಕ್ ಗಳ ಸಂಖ್ಯೆಯು ಹೆಚ್ಚಾಗುತ್ತಿದ್ದು, ಬೆಂಗಳೂರು ಟ್ರಾಫಿಕ್ ಪೊಲೀಸ್ ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ ನಗರದೆಲ್ಲೆಡೆ ಕಾರ್ಯಾಚರಣೆಯನ್ನು ಬಿಗುಗೊಳಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸ್, 12ರಷ್ಟು ಎನ್ ಫೀಲ್ಡ್ ಬೈಕ್ ಗಳನ್ನು ಮುಟ್ಟಗೋಲುಗೊಳಿಸಿದೆ. ಇಂತಹ ಅಕ್ರಮ ಎಕ್ಸಾಸ್ಟ್ ಲಗ್ಗತ್ತಿಸಿ ಕೊಡುವ ವರ್ಕ್ ಶಾಪ್ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದಲ್ಲದೆ 1,000 ರು.ಗಳ ದಂಡವನ್ನು ವಿಧಿಸುವುದಾಗಿ ತಿಳಿಸಿದೆ.

ಒಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಈ ಕ್ರಮ ನ್ಯಾಯಸಮ್ಮತವೇ? ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ.

Most Read Articles

Kannada
English summary
Now Bangalore Traffic Police is warning Royal Enfield owners not to change their exhaust systems. If they find your bike producing more decibels than expected, they could seize the vehicle.
Story first published: Saturday, July 4, 2015, 11:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X