ಗುಜರಾತ್ ಪೊಲೀಸ್‌ಗೆ ಬಂತು ಆನೆ ಬಲ

By Nagaraja

ಪ್ರತಿಯೊಂದು ವಿಷಯ ಬಂದಾಗಲೂ ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ರಾಜ್ಯವನ್ನು ಮಾದರಿಯಾಗಿ ತೋರಿಸಲಾಗುತ್ತದೆ. ಇದರಂತೆ ಗುಜರಾತ್ ನಲ್ಲಿ ಬೆಳೆಯುವ ಸಾಮಾನ್ಯ ಮಾವಿನ ಮರದಲ್ಲೂ ಬೃಹತ್ತಕಾರದ ಮಾವಿನ ಹಣ್ಣು ಬೆಳೆಯಲಾಗುತ್ತದೆ ಎಂಬ ಬಗ್ಗೆ ಅನೇಕ ತಮಾಷೆಗಳು ಪ್ರಚಲಿತದಲ್ಲಿದೆ.

ಇವೆಲ್ಲ ಏನೇ ಆಗಿರಲಿ. ಸದ್ಯ ನೈಜ ಪರಿಸ್ಥಿತಿಯಲ್ಲೂ ಗುಜರಾತ್ ಪೊಲೀಸ್ ಗೆ ಆನೆ ಬಲ ಬಂದಂತಾಗಿದೆ. ಅದು ಹೇಗೆ ಅಂತೀರಾ? ಹೌದು, ಶಕ್ತಿಶಾಲಿ ಹಾರ್ಲೆ ಡೇವಿಡ್ಸನ್ ಮೋಟಾರುಸೈಕಲ್ ಗಳು ಗುಜರಾತ್ ಪೊಲೀಸ್ ಇಲಾಖೆಯನ್ನು ಬಂದು ಸೇರಿದೆ.

ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಖರೀದಿಸಿದ ಗುಜರಾತ್ ಪೊಲೀಸ್

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಹಾರ್ಲೆ ಡೇವಿಡ್ಸನ್ ಅಮೆರಿಕ ಮೂಲದ ಸಂಸ್ಥೆಯಾಗಿದ್ದು, ದೇಶದಲ್ಲಿ ತನ್ನದೇ ಆದ ನಿರ್ಮಾಣ ಘಟಕವನ್ನು ಹೊಂದಿದೆ. ಅಲ್ಲದೆ ಅತ್ಯಂತ ಶಕ್ತಿಶಾಲಿ, ಗುಣಮಟ್ಟ ಹಾಗೂ ನಿರ್ವಹಣಾ ಬೈಕ್ ಗಳನ್ನು ಉತ್ಪಾದಿಸುವುದರಲ್ಲಿ ನಿಸ್ಸೀಮವಾಗಿದೆ.

ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಖರೀದಿಸಿದ ಗುಜರಾತ್ ಪೊಲೀಸ್

ಈಗ ಹಾರ್ಲೆ ಡೇವಿಡ್ಸನ್‌ನ ಅತ್ಯಂತ ಜನಪ್ರಿಯ ಸ್ಟ್ರೀಟ್ 750 ಮೋಟಾರ್ ಸೈಕಲ್ ಗಳನ್ನು ಗುಜರಾತ್ ಪೊಲೀಸ್ ವಿಭಾಗಕ್ಕೆ ಹಂಚಲಾಗಿದೆ. ಇದನ್ನು ಪೊಲೀಸ್ ವಿಭಾಗವು ತನ್ನ ಅಗತ್ಯಕ್ಕೆ ಅನುಸಾರವಾಗಿ ವಿಶೇಷವಾಗಿ ಮಾರ್ಪಾಡುಗೊಳಿಸಿದೆ.

ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಖರೀದಿಸಿದ ಗುಜರಾತ್ ಪೊಲೀಸ್

ಇಂತಹ ಒಂಬತ್ತು ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್ ಗಳನ್ನು ಗುಜರಾತ್ ಪೊಲೀಸ್ ಖರೀದಿಸಿದೆ. ಇತರ ರಾಜ್ಯದ ಪೊಲೀಸ್ ರಕ್ಷಣಾ ವಿಭಾಗವನ್ನು ಗಮನಿಸಿದಾಗ ದುಬಾರಿ ಬೈಕ್ ಗಳನ್ನು ಗುಜರಾತ್ ಪೊಲೀಸ್ ಖರೀದಿಸಿರುವುದು ಕಂಡುಬಂದಿದೆ.

ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಖರೀದಿಸಿದ ಗುಜರಾತ್ ಪೊಲೀಸ್

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕ್ ವಿ ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, ನಗರ ಹಾಗೂ ಹೆದ್ದಾರಿ ಪಯಣಕ್ಕೆ ಯೋಗ್ಯವೆನಿಸುತ್ತದೆ. ಇದರಲ್ಲಿ ಆರು ಸ್ಪೀಡ್ ಗೇರ್ ಬಾಕ್ಸ್ ಕೂಡಾ ಇರುತ್ತದೆ.

ಹಾರ್ಲೆ ಡೇವಿಡ್ಸನ್ ಮೋಟಾರ್ ಸೈಕಲ್ ಖರೀದಿಸಿದ ಗುಜರಾತ್ ಪೊಲೀಸ್

ಈಗ ಖರೀದಿಸಿರುವ ಹಾರ್ಲೆ ಬೈಕ್ ಗಳನ್ನು ಪ್ರಾಥಮಿಕವಾಗಿ ತ್ವರಿತ ಕಾರ್ಯಾಚರಣೆಗಾಗಿ ಬಳಕೆ ಮಾಡಲಾಗುವುದು. ಉದಾಹರಣೆಗೆ ಹಿರಿಯ ಸಚಿವರಿಗೆ ಬೆಂಗಾವಲಾಗಿ ಅಥವಾ ನೈಸರ್ಗಿಕ ವಿಪತ್ತುಸಂಭವಿಸಿದಾಗ ತ್ವರಿತ ಕಾರ್ಯಾಚರಣೆ ನಡೆಸಲಾಗುವುದು ಎಂದು ಗುಜರಾತ್ ಪೊಲೀಸ್ ವಿಭಾಗ ತಿಳಿಸಿದೆ.

Most Read Articles

Kannada
English summary
Nine Bridges Harley-Davidson today delivers six Harley-Davidson Street™ 750 motorcycles customized specially for the Gujrat Police Department.
Story first published: Wednesday, May 27, 2015, 15:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X