ಜಗತ್ತಿನ ನಂ.1 ಮೈಲೇಜ್ ಬೈಕ್ ಸ್ಪ್ಲೆಂಡರ್ ಮೈಲೇಜ್ ಎಷ್ಟು ಗೊತ್ತೇ?

By Nagaraja

ಜನ ಸಾಮಾನ್ಯರ ಬಂಡಿ ಎಂದೇ ಖ್ಯಾತಿ ಗಿಟ್ಟಿಸಿಕೊಂಡಿರುವ ಹೀರೊ ಸ್ಪ್ಲೆಂಡರ್ ಈಗ ಮಗದೊಂದು ಗೌರವಕ್ಕೆ ಪಾತ್ರವಾಗಿದೆ. ಹೌದು, 'ವಿಶ್ವದಲ್ಲೇ ಅತ್ಯಂತ ಇಂಧನ ಕ್ಷಮತೆಯ ಬೈಕ್' ಎಂಬ ಬಿರುದಿಗೆ ಸ್ಪ್ಲೆಂಡರ್ ಐಸ್ಮಾರ್ಟ್ ಪಾತ್ರವಾಗಿದೆ.

ಅಷ್ಟಕ್ಕೂ ದೇಶದ ನಂ.1 ದ್ವಿಚಕ್ರ ವಾಹನ ಸಂಸ್ಥೆ ಹೀರೊ ಮೊಟೊಕಾರ್ಪ್ ನಿಂದ ನಿರ್ಮಾಣವಾಗುತ್ತಿರುವ ಸ್ಪ್ಲೆಂಡರ್ ನೀಡುತ್ತಿರುವ ಮೈಲೇಜ್ ಆದರೂ ಅಷ್ಟು? ಇನ್ನಿತರ ಆಕರ್ಷಕ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

07. 102.5 kmpl

07. 102.5 kmpl

ಹೀರೊ ಸ್ಪ್ಲೆಂಡರ್ ಐ ಸ್ಮಾರ್ಟ್ ಬೈಕ್ ಪ್ರತಿ ಲೀಟರ್ ಗೆ 102.5 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಈ ಮೂಲಕ ಬಜಾಜ್ ಪ್ಲಾಟಿನಾ ಇಎಸ್ ಮಾದರಿಯನ್ನು ಹಿಂದಿಕ್ಕಿರುವ ಸ್ಪ್ಲೆಂಡರ್ ವಿಶ್ವದಲ್ಲೇ ಅತ್ಯಂತ ಇಂಧನ ಕ್ಷಮತೆಯ ಬೈಕ್ ಎನಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಬಜಾಜ್ ಪ್ಲಾಟಿನಾ ಇಎಸ್ ಪ್ರತಿ ಲೀಟರ್ ಗೆ 96.9 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

06. ಐಸ್ಮಾರ್ಟ್ ತಂತ್ರಗಾರಿಕೆ

06. ಐಸ್ಮಾರ್ಟ್ ತಂತ್ರಗಾರಿಕೆ

ನೂತನ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ ನಲ್ಲಿ ಆಳವಡಿಸಲಿರುವ ಐ3ಎಸ್ ತಂತ್ರಗಾರಿಕೆಯೇ ನೂತನ ಬೈಕ್ ನ ಯಶಸ್ಸಿನಲ್ಲಿ ಕಾರಣವಾಗಿದೆ. ಕಾರುಗಳಲ್ಲಿ ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನವು ಸಾಮಾನ್ಯವಾಗಿದೆ. ಇದೇ ಮೊದಲ ಬಾರಿಗೆ ಇಂತಹದೊಂದು ತಂತ್ರಜ್ಞಾನ ಬೈಕ್‌ಗೂ ಆಳವಡಿಕೆಯಾಗುತ್ತಿದೆ.

05. ಏನಿದು ಐಡಲ್ ಸ್ಟಾರ್ಟ್-ಸ್ಟಾಪ್ (ಐ3ಎಸ್) ?

05. ಏನಿದು ಐಡಲ್ ಸ್ಟಾರ್ಟ್-ಸ್ಟಾಪ್ (ಐ3ಎಸ್) ?

ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ಇಂಧನ ಉಳಿತಾಯ ನಿಟ್ಟಿನಲ್ಲಿ ಐಡಲ್ ಸ್ಟಾರ್ಟ್-ಸ್ಟಾಪ್ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗುತ್ತದೆ. ಇದು ಸ್ವಯಂಚಾಲಿತವಾಗಿ ಕೆಲಸ ಮಾಡಲಿದ್ದು, ಬಳಿಕ ಕ್ಲಚ್ ಅದುಮಿದರೆ ವಾಹನದ ಎಂಜಿನ್ ನಿಧಾನವಾಗಿ ಚಲಿಸಲು ಬಿಡಲಿದೆ. ಹೀರೊ ಸಂಸ್ಥೆಯ ಪ್ರಕಾರ, ಸ್ಪ್ಲೆಂಡರ್ ಐಸ್ಮಾರ್ಟ್‌ನಲ್ಲಿ ಆಳವಡಿಸಲಾಗಿರುವ ತಂತ್ರಜ್ಞಾನವು ಸದ್ಯದಲ್ಲೇ ಇತರ ಮಾದರಿಗಳಿಗೂ ಪರಿಚಯವಾಗಲಿದೆ.

04. ಎಂಜಿನ್

04. ಎಂಜಿನ್

ಅಂದ ಹಾಗೆ ನೂತನ ಸ್ಪ್ಲೆಂಡರ್ ಐಸ್ಮಾರ್ಟ್, 97.2 ಸಿಸಿ ಏರ್ ಕೂಲ್ಡ್ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 7.8 ಪಿಎಸ್ ಪವರ್ ಉತ್ಪಾದಿಸುವ (8.04 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

03. ದರ ಮಾಹಿತಿ (ಎಕ್ಸ್ ಶೋ ರೂಂ)

03. ದರ ಮಾಹಿತಿ (ಎಕ್ಸ್ ಶೋ ರೂಂ)

ಬೆಂಗಳೂರು - 48,014 ರು.

ದೆಹಲಿ - 47,250 ರು.

ಮುಂಬೈ - 49,967 ರು.

ಚೆನ್ನೈ - 48,192 ರು.

ಕೋಲ್ಕತ್ತಾ - 48,549 ರು.

02. ಬಣ್ಣಗಳು

02. ಬಣ್ಣಗಳು

ಟೆಕ್ನೊ ಗ್ರಾಫಿಕ್ಸ್

ಸ್ಪೋರ್ಟ್ಸ್ ರೆಡ್,

ಲೀಫ್ ಗ್ರೀನ್,

ಎಕ್ಸೆಲೆಂಟ್ ಬ್ಲ್ಯೂ ಮತ್ತು

ಹೆವಿ ಗ್ರೇ

01. ಮೈಲೇಜ್ ಮಾನ್ಯತೆ

01. ಮೈಲೇಜ್ ಮಾನ್ಯತೆ

ಇದೀಗ ಕೇಂದ್ರ ಸರಕಾರದ ಅಂತರಾಷ್ಟ್ರೀಯ ಆಟೋಮೋಟಿವ್ ತಂತ್ರಜ್ಞಾನ ಕೇಂದ್ರವು (iCAT) ಬಿಡುಗಡೆಗೊಳಿಸಿರುವ ಇಂಧನ ಕ್ಷಮತೆಯಲ್ಲಿ ಗರಿಷ್ಠ ಮೈಲೇಜ್ ನೀಡುವ ಬೈಕ್ ಎಂಬ ಬಿರುದಿಗೆ ಪಾತ್ರವಾಗಿದೆ.

Most Read Articles

Kannada
English summary
Hero MotoCorp Splendor iSmart has been declared as the most fuel efficient motorcycle in the world. The commuter motorbike recorded 102.5 kpl, which is phenomenal in this age.
Story first published: Wednesday, April 8, 2015, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X