ಹೀರೊ-ಹೋಂಡಾ ಮೈಲೇಜ್ ವಾರ್; ಸ್ಪ್ಲೆಂಡರ್ ಮೈಲೇಜ್ ಸುಳ್ಳು?

By Nagaraja

ಹಿಂದೊಮ್ಮೆ ಕಾಲದಲ್ಲಿ ಲವ-ಕುಶರಂತಿದ್ದ ದೇಶದ ಎರಡು ಅತಿ ದೊಡ್ಡ ಸಂಸ್ಥೆಗಳ ನಡುವೆ ಮೈಲೇಜ್ ಯುದ್ಧ ಏರ್ಪಟ್ಟಿದೆ. ಹೌದು, ಕೆಲವು ವರ್ಷಗಳ ಹಿಂದೆಯಷ್ಟೇ ತಮ್ಮ ಬಹುಕಾಲದ ಬಾಂಧವ್ಯಕ್ಕೆ ಅಂತ್ಯ ಹಾಡಿದ್ದ ದೇಶದ ಅಗ್ರಗಣ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಾದ ಹೀರೊ ಮೊಟೊಕಾರ್ಪ್ ಹಾಗೂ ಹೋಂಡಾ ಟು ವೀಲರ್ಸ್ ಇಂಡಿಯಾ ಸಂಸ್ಥೆಗಳು ತಮ್ಮದೇ ಆದ ಸ್ವತಂತ್ರ ಮಾರಾಟಕ್ಕೆ ಧುಮಕಿತ್ತು.

ಈಗ ಕುದುರೆ ರೇಸ್ ನಲ್ಲಿ ಅಗ್ರ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನದ ನಡುವೆ ಎರಡೂ ಸಂಸ್ಥೆಗಳ ನಡುವೆ ವೈಮನಸ್ಸು ಏರ್ಪಟ್ಟಿದೆ. ಅಲ್ಲದೆ ಎರಡೂ ಸಂಸ್ಥೆಗಳು ವಾದ ವಿವಾದದ ಹೇಳಿಕೆಯನ್ನು ನೀಡುತ್ತಿದೆ. ಅಷ್ಟಕ್ಕೂ ಏನಿದು ಮೈಲೇಜ್ ವಾರ್ ? ವಿವರಗಳಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಹೀರೊ-ಹೋಂಡಾ ಮೈಲೇಜ್ ವಾರ್; ಸ್ಪ್ಲೆಂಡರ್ ಮೈಲೇಜ್ ಸುಳ್ಳು?

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದ ದ್ವಿಚಕ್ರ ವಾಹನ ಮಾರಾಟದ ಭವಿಷ್ಯವನ್ನೇ ಬದಲಾಯಿಸಿದ್ದ ಸ್ಪ್ಲೆಂಡರ್, ತನ್ನ ಮೈಲೇಜ್ ಶಕ್ತಿಯಿಂದಲೇ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಹೀರೊ-ಹೋಂಡಾ ಮೈಲೇಜ್ ವಾರ್; ಸ್ಪ್ಲೆಂಡರ್ ಮೈಲೇಜ್ ಸುಳ್ಳು?

1994ನೇ ಇಸವಿಯಲ್ಲಿ ಮೊದಲ ಬಾರಿಗೆ ಪರಿಚಯವಾಗಿದ್ದ ಹೀರೊದ ಈ ಮೈಲೇಜ್ ಬೈಕ್ ಯಶಸ್ಸಿನಲ್ಲಿ ಹೋಂಡಾದ ಮೂಲ ಎಂಜಿನ್ ನ ಪಾತ್ರ ಬಹು ದೊಡ್ಡದಾಗಿತ್ತು. ಈಗ ಇಂತಹದೊಂದು ಆರೋಪದೊಂದಿಗೆ ಸಂಸ್ಥೆ ಮುಂದೆ ಬಂದಿದೆ.

ಹೀರೊ-ಹೋಂಡಾ ಮೈಲೇಜ್ ವಾರ್; ಸ್ಪ್ಲೆಂಡರ್ ಮೈಲೇಜ್ ಸುಳ್ಳು?

ಇತ್ತೀಚೆಗಷ್ಟೇ ದೇಶದ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಎಂಬ ಗೌರವಕ್ಕೆ ಪಾತ್ರವಾಗಿದ್ದ ಸ್ಪ್ಮೆಂಡರ್ ಐ ಸ್ಮಾರ್ಟ್ ಪ್ರತಿ ಲೀಟರ್ ಗೆ 102.5 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಹೀರೊ ಘೋಷಿಸಿತ್ತು.

ಹೀರೊ-ಹೋಂಡಾ ಮೈಲೇಜ್ ವಾರ್; ಸ್ಪ್ಲೆಂಡರ್ ಮೈಲೇಜ್ ಸುಳ್ಳು?

ಇದುವೇ ವಿವಾದಕ್ಕೆ ಕಾರಣವಾಗಿದ್ದು, ಇದರ ವಿರುದ್ಧ ಹೋಂಡಾ ರಂಗಕ್ಕಿಳಿದಿದೆ. ಅಲ್ಲದೆ ಹೀರೊ ಸಂಸ್ಥೆಯು ಅಪಪ್ರಚಾರವನ್ನು ನಿಲ್ಲಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಹೀರೊ-ಹೋಂಡಾ ಮೈಲೇಜ್ ವಾರ್; ಸ್ಪ್ಲೆಂಡರ್ ಮೈಲೇಜ್ ಸುಳ್ಳು?

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಹೋಂಡಾ ಭಾರತದ ಅಧ್ಯಯನ ಹಾಗೂ ಅಭಿವೃದ್ಧಿ ಕೇಂದ್ರ (ಎಚ್ ಆರ್ ಐಡಿ) ನಿರ್ದೇಶಕ ಹಾಗೂ ಸಿಇಒ ಆಗಿರುವ ಕೀಜಿ ಕಸ ಅವರು, "ಇಂತಹ ಹೇಳಿಕೆಗಳು ವಾಸ್ತವದಿಂದ ತುಂಬಾ ದೂರವಾಗಿದ್ದು, ಸತ್ಯಾಂಶ ಏನೆಂದರೆ ಪ್ರಸ್ತುತ ಬೇಸಿಕ್ ಎಂಜಿನ್ ಅನ್ನು ಹೋಂಡಾ ಸಂಸ್ಥೆಯೇ ಅಭಿವೃದ್ಧಿಪಡಿಸಿದ್ದು, ನಿರ್ವಹಣೆ ಹಾಗೂ ಸಾಮರ್ಥ್ಯದ ಬಗ್ಗೆ ವಾಸ್ತವಿಕ ಮೌಲ್ಯಮಾಪನವನ್ನು ನಾವು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ" ಎಂದಿದ್ದಾರೆ.

ಹೀರೊ-ಹೋಂಡಾ ಮೈಲೇಜ್ ವಾರ್; ಸ್ಪ್ಲೆಂಡರ್ ಮೈಲೇಜ್ ಸುಳ್ಳು?

ಅದೇ ವೇಳೆ ಒಂದು ಹಂತದ ವರೆಗೆ ಐಡಲ್ ಸ್ಟಾರ್ಟ್ ಸ್ಟಾಪ್ ವ್ಯವಸ್ಥೆಯು ಹೀರೊ ಸ್ಪ್ಲೆಂಡರ್ ಮೈಲೇಜ್ ನಲ್ಲಿ ಸುಧಾರಣೆ ತರಲು ಸಾಧ್ಯ ಎಂಬುದನ್ನು ಒಪ್ಪಿಕೊಂಡಿರುವ ಹೋಂಡಾ, ಹಾಗಿದ್ದರೂ 102.5 ಮೈಲೇಜ್ ನೀಡುವುದು ಕಷ್ಟಸಾಧ್ಯ ಎಂದಿದೆ.

ಹೀರೊ-ಹೋಂಡಾ ಮೈಲೇಜ್ ವಾರ್; ಸ್ಪ್ಲೆಂಡರ್ ಮೈಲೇಜ್ ಸುಳ್ಳು?

ಇನ್ನೊಂದೆಡೆ ಕೇಂದ್ರ ಸರಕಾರದ ಇಂಟರ್ ನ್ಯಾಷನಲ್ ಸೆಂಟರ್ ಆಫ್ ಆಟೋಮೋಟಿವ್ ಟೆಕ್ನಾಲಜಿ (ಐಸಿಎಟಿ) ನೀಡಿರುವ ಇಂಧನ ದಕ್ಷತೆ (ಎಫ್ ಇ) ಪ್ರಮಾಣ ಪತ್ರವನ್ನು ಸಮರ್ಥಿಸಿಕೊಂಡಿರುವ ಹೀರೊ, ಎಂಜಿನ್ ಸ್ಟಾರ್ಟ್ ಸ್ಟಾಪ್ ಐ3ಎಸ್ ಜೊತೆಗೆ ಇನ್ನಿತರ ತಂತ್ರಗಾರಿಕೆಗಳು ಮೈಲೇಜ್ ಸುಧಾರಣೆಗೆ ನೆರವಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಹೀರೊ-ಹೋಂಡಾ ಮೈಲೇಜ್ ವಾರ್; ಸ್ಪ್ಲೆಂಡರ್ ಮೈಲೇಜ್ ಸುಳ್ಳು?

ಎಷ್ಟೇ ಆದರೂ ಭಾರತೀಯ ವಾಹನ ಅಧ್ಯಯನ ಸಂಸ್ಥೆ (ಎಆರ್ ಎಐ) ನೀಡುವ ಅಧಿಕೃತ ಇಂಧನ ದಕ್ಷತೆ ಮಾನ್ಯತೆಗೂ ನೈಜ ರಸ್ತೆ ಪರಿಸ್ಥಿತಿಗೆ ತುಂಬಾನೇ ವ್ಯತ್ಯಾಸವಿರುತ್ತದೆ. ಇದು ಚಾಲಕನೊಬ್ಬನ ಚಾಲನಾ ಸ್ವಭಾವ, ರಸ್ತೆ, ಟ್ರಾಫಿಕ್ ಪರಿಸ್ಥಿತಿ, ಇಂಧನ ಗುಣಮಟ್ಟತೆ, ನಿರ್ವಹಣೆ, ಭಾರ ಜೊತೆಗೆ ಇನ್ನಿತರ ಹಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

ಹೀರೊ-ಹೋಂಡಾ ಮೈಲೇಜ್ ವಾರ್; ಸ್ಪ್ಲೆಂಡರ್ ಮೈಲೇಜ್ ಸುಳ್ಳು?

ಅಂದ ಹಾಗೆ ಎಂಜಿನ್ ಸ್ಟಾರ್ಟ್ ಸ್ಟಾಪ್ ಐ3ಎಸ್ ತಂತ್ರಗಾರಿಕೆಯ ಸ್ಪ್ಲೆಂಡರ್ ಐಸ್ಮಾರ್ಟ್ ಬೈಕ್ ಕಳೆದ ವರ್ಷ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. ಇದರ 97.2 ಸಿಸಿ ಏರ್ ಕೂಲ್ಡ್, 4 ಸ್ಟ್ರೋಕ್ ಎಂಜಿನ್ ಸಿಲಿಂಡರ್ ಒಎಚ್ ಸಿ ಎಂಜಿನ್ 7.8 ಅಶ್ವಶಕ್ತಿ (8.04 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಏನಿದು ಐಡಲ್ ಸ್ಟಾರ್ಟ್-ಸ್ಟಾಪ್ (ಐ3ಎಸ್) ?

ಏನಿದು ಐಡಲ್ ಸ್ಟಾರ್ಟ್-ಸ್ಟಾಪ್ (ಐ3ಎಸ್) ?

ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ಇಂಧನ ಉಳಿತಾಯ ನಿಟ್ಟಿನಲ್ಲಿ ಐಡಲ್ ಸ್ಟಾರ್ಟ್-ಸ್ಟಾಪ್ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗುತ್ತದೆ. ಕಾರುಗಳಲ್ಲಿ ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನವು ಸಾಮಾನ್ಯವಾಗಿದೆ. ಇದು ಸ್ವಯಂಚಾಲಿತವಾಗಿ ಕೆಲಸ ಮಾಡಲಿದ್ದು, ಕ್ಲಚ್ ಅದುಮಿದರೆ ವಾಹನದ ಎಂಜಿನ್ ನಿಧಾನವಾಗಿ ಚಲಿಸಲು ಬಿಡಲಿದೆ.

Most Read Articles

Kannada
English summary
Honda, the Japanese two-wheeler maker has questioned Hero MotoCorp's claim of the Splendor iSmart motorcycle's fuel efficiency of 102.5 kpl. Honda has claimed that such information is misleading and is far from reality.
Story first published: Tuesday, May 5, 2015, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X