ಹೋಂಡಾ ಲೀಡ್ 125 ಭಾರತಕ್ಕೆ; ಈ 7 ಅಂಶಗಳು ನಿಮಗೆ ಗೊತ್ತೇ?

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ಸ್ ಆಂಡ್ ಸ್ಕೂಟರ್ಸ್ ಇಂಡಿಯಾ (ಎಚ್ ಎಂಐಎಲ್) ಸಂಸ್ಥೆಯು ಈಗಾಗಲೇ ದೇಶದ ದ್ವಿಚಕ್ರ ವಾಹನ ವಿಭಾಗದಲ್ಲಿ ಭದ್ರ ನೆಲೆ ಸ್ಥಾಪಿಸಿದೆ. ಪ್ರಸ್ತುತ ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಮಗದೊಂದು 125 ಸಿಸಿ ಸ್ಕೂಟರನ್ನು ಭಾರತಕ್ಕೆ ಪರಿಚಯಿಸುವ ಯೋಜನೆ ಹೊಂದಿದೆ.

ದೇಶದ ನಂ.1 ಸ್ಕೂಟರ್ ಆಕ್ಟಿವಾ ಯಶಸ್ಸಿನಿಂದ ಪುಳಕಿತಗೊಂಡಿರುವ ಹೋಂಡಾ ಈಗ ಪ್ರೀಮಿಯಂ ಸ್ಕೂಟರ್ ಪರಿಚಯಿಸುವ ಯೋಜನೆ ಹೊಂದಿದೆ. ಈ ಮೂಲಕ ಇಟಲಿಯ ಐಕಾನಿಕ್ ವೆಸ್ಪಾ ಸ್ಕೂಟರ್ ಗಳಿಗೆ ಸೆಡ್ಡು ನೀಡುವ ಯೋಜನೆ ಹೊಂದಿದೆ. ಅಷ್ಟಕ್ಕೂ ಹೋಂಡಾ ನೂತನ ಸ್ಕೂಟರ್ ನ ಈ ಏಳು ಅಂಶಗಳು ನಿಮಗೆ ತಿಳಿದಿದೆಯೇ?

07. ಎಂಜಿನ್

07. ಎಂಜಿನ್

ನೂತನ ಹೋಂಡಾ ಲೀಡ್ ಸ್ಕೂಟರ್ 125 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು 11.33 ಅಶ್ವಶಕ್ತಿ (11.6 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ ಸ್ಪೆಪ್ ಲೆಸ್ ಆಟೋಮ್ಯಾಟಿಕ್ ಕಂಟ್ರೋಲ್ ಗೇರ್ ಬಾಕ್ಸ್ ಪಡೆಯಲಿದೆ.

06. ಪ್ರೀಮಿಯಂ ಸ್ಕೂಟರ್

06. ಪ್ರೀಮಿಯಂ ಸ್ಕೂಟರ್

ಪ್ರೀಮಿಯಂ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ಲೀಡ್ ಸ್ಕೂಟರ್ ಮುಂಭಾಗದಲ್ಲಿ 'ವಿ' ಆಕಾರದ ಕ್ರೋಮ್ ಗ್ರಿಲ್ ಜೊತೆ ಸಂಯೋಜಿತ ಇಂಡಿಕೇಟರ್, ಎಲ್ ಇಡಿ ಹಾಗೂ ಸೀಟು ಕೆಳಗಡೆ ಗರಿಷ್ಠ ಸ್ಥಳಾವಕಾಶವನ್ನು ಹೊಂದಿರಲಿದೆ.

05. ಪ್ರಸಕ್ತ ಸಾಲಿನಲ್ಲೇ ಬಿಡುಗಡೆ

05. ಪ್ರಸಕ್ತ ಸಾಲಿನಲ್ಲೇ ಬಿಡುಗಡೆ

ಈಗಾಗಲೇ ಟೆಸ್ಟಿಂಗ್ ಗಾಗಿ ಭಾರತವನ್ನು ತಲುಪಿರುವ ಹೋಂಡಾ ಲೀಡ್ 125 ಸಿಸಿ ಸ್ಕೂಟರ್ ಯಾವುದೇ ಕ್ಷಣವಾದರೂ ಬಿಡುಗಡೆ ಭಾಗ್ಯ ಕಾಣಲಿದೆ.

04. ಸ್ಮಾರ್ಟ್ ಪವರ್ ಟೆಕ್ನಾಲಜಿ

04. ಸ್ಮಾರ್ಟ್ ಪವರ್ ಟೆಕ್ನಾಲಜಿ

ಹೋಂಡಾದ ನೂತನ ಸ್ಮಾರ್ಟ್ ಪವರ್ ತಂತ್ರಗಾರಿಕೆಯನ್ನು ಹೊಸ ಲೀಡ್ ಸ್ಕೂಟರ್ ನಲ್ಲಿ ಆಳವಡಿಸಲಾಗುವುದು. ಜಪಾನ್ ಹಾಗೂ ವಿಯೆಟ್ನಾದಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿರುವ ನೂತನ ಲೀಡ್ 125 ಸಿಸಿ ಸ್ಕೂಟರ್, ಲಿಕ್ವಿಡ್ ಕೂಲಿಂಗ್, ಶಬ್ದ ರಹಿತ ಎಲೆಕ್ಟ್ರಿಕ್ ಸ್ಟ್ಯಾರ್ಟರ್, ಪ್ರೊಗ್ರಾಮ್ಡ್ ಫ್ಯೂಯಲ್ ಇಂಜೆಕ್ಷನ್ (ಪಿಜಿಎಂ-ಎಫ್ ಐ) ಮತ್ತು ಸ್ಟ್ಯಾರ್ಟ್ ಸ್ಟಾಪ್ ತಂತ್ರಗಾರಿಕೆಗಳನ್ನು ಪಡೆಯಲಿದೆ. ಈ ಪೈಕಿ ಶಬ್ದ ರಹಿತ ಎಲೆಕ್ಟ್ರಿಕ್ ಸ್ಟ್ಯಾರ್ಟರ್ ಮೂಲಕ ವೈಬ್ರೇಷನ್ ಕಡಿಮೆಯಾಗಲಿದೆ. ಇನ್ನೊಂದೆಡೆ ಸ್ಟ್ಯಾರ್ಟ್ ಸ್ಟಾಪ್ ತಂತ್ರಜ್ಞಾನ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ನಲ್ಲಿರುವುದಕ್ಕೆ ಸಮಾನವಾದ ರೀತಿಯಲ್ಲಿ ಕೆಲಸ ಮಾಡಲಿದೆ.

 03. ಇಂಧನ ಕ್ಷಮತೆ, ನಿರ್ವಹಣೆ

03. ಇಂಧನ ಕ್ಷಮತೆ, ನಿರ್ವಹಣೆ

ವರದಿಗಳ ಪ್ರಕಾರ ನೂತನ ತಂತ್ರಜ್ಞಾನದೊಂದಿಗೆ ಹೊಸ ಲೀಡ್ ಸ್ಕೂಟರ್ 110ಸಿಸಿ ಹೋಂಡಾ ಸ್ಕೂಟರ್ ಗಿಂತಲೂ ಶೇಕಡಾ 30ರಷ್ಟು ಹೆಚ್ಚು ನಿರ್ವಹಣೆ ಹಾಗೂ ಇಂಧನ ಕ್ಷಮತೆಯನ್ನು ನೀಡಲಿದೆ.

02. ಬೆಲೆ

02. ಬೆಲೆ

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಹೋಂಡಾ ಲೀಡ್ 125 ಸಿಸಿ ಸ್ಕೂಟರ್ 70,000 ರು.ಗಳಿಂದ 75,000 ರು.ಗಳ (ಎಕ್ಸ್ ಶೋ ರೂಂ) ವರೆಗೆ ದುಬಾರಿಯೆನಿಸಲಿದೆ.

01. ಲೀಡರ್ ಆಗಬಹುದೇ?

01. ಲೀಡರ್ ಆಗಬಹುದೇ?

ಅಷ್ಟಕ್ಕೂ ಭಾರತದಲ್ಲಿ ಸುಭದ್ರ ವಿತರಕ ಜಾಲವನ್ನು ಹಾಗೂ ತನ್ನ ಉತ್ಪನ್ನಗಳಿಗಾಗಿ ಅತ್ಯುತ್ತಮ ಹೆಸರು ಮಾಡಿರುವ ಹೋಂಡಾ ಲೀಡ್ 125 ಸಿಸಿ ಸ್ಕೂಟರ್ ಭಾರತದಲ್ಲಿ ಯಶ ಕಂಡಿತೇ? ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿರಿ.

Most Read Articles

Kannada
English summary
Japanese two-wheeler giant has witnessed tremendous success in India with its scooters. Now Honda Motorcycles and Scooters India could launch an all new more premium scooter.
Story first published: Thursday, April 2, 2015, 9:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X