ದ.ಭಾರತದಲ್ಲಿ ಹೋಂಡಾದ ಮೊದಲ 'ಟ್ರಾಫಿಕ್ ಪಾರ್ಕ್' ಆರಂಭ

By Nagaraja

ಜಪಾನ್ ಮೂಲದ ಮುಚೂಂಣಿಯ ಸಂಸ್ಥೆಯಾಗಿರುವ ಹೋಂಡಾ ದಕ್ಷಿಣ ಭಾರತದಲ್ಲಿ ತನ್ನ ಮೊದಲ ಟ್ರಾಫಿಕ್ ಪಾರ್ಕ್ ಅನ್ನು ಹೈದರಾಬಾದ್ ನಲ್ಲಿ ತೆರೆದುಕೊಂಡಿದೆ. ಈ ಮೂಲಕ ದೇಶದ್ಯಾಂತ ಹೋಂಡಾ ಟ್ರಾಫಿಕ್ ಪಾರ್ಕ್ ಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಹೈದರಾಬಾದ್ ಟ್ರಾಫಿಕ್ ಪೊಲೀಸ್ ಜೊತೆ ಸೇರಿಕೊಂಡಿರುವ ಹೋಂಡಾ ಸಂಸ್ಥೆಯೀಗ ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಿದೆ. ಹೋಂಡಾ ಟ್ರಾಫಿಕ್ ಪಾರ್ಕ್ ತರಬೇತಿಯು ಸೋಮವಾರದಿಂದ ಶನಿವಾರದ ವರೆಗೆ ನಡೆಯಲಿದೆ.

traffic park

ಇದರ ಗರಿಷ್ಠ ಪ್ರಯೋಜನವನ್ನು ಮಕ್ಕಳು, ಮಹಿಳೆಯರು ಹಾಗೂ ಹೊಸ ಚಾಲಕರು ಪಡೆಯಬಹುದಾಗಿದೆ. ಪ್ರಮುಖವಾಗಿಯೂ ದ್ವಿಚಕ್ರ ವಾಹನ ಸವಾರಿಗಳನ್ನು ಗಮನ ಹರಿಸಲಾಗಿದೆ ಎಂದು ಹೋಂಡಾ ಮೋಟಾರ್ಸ್ ಸ್ಕೂಟರ್ಸ್ ಇಂಡಿಯಾ ಸೇಲ್ಸ್ ಆಂಡ್ ಮಾರ್ಕೆಟಿಂಗ್ ದಕ್ಷಿಣದ ಉಪ ನಿರ್ದೇಶಕರಾಗಿರುವ ತಮೋಕಿ ನಗಯಮಾ ಹೇಳಿದ್ದಾರೆ.

ಅಸ್ಥಿತ್ವದಲ್ಲಿರುವ ಏಳು ಟ್ರಾಫಿಕ್ ಪಾರ್ಕ್ ಗಳ ಮುಖಾಂತರ ಸಂಸ್ಥೆಯು ಈಗಾಗಲೇ 1.42 ಲಕ್ಷದಷ್ಟು ಮಂದಿಗಳಿಗೆ ರಸ್ತೆ ಸುರಕ್ಷತೆಯ ಪಾಠವನ್ನು ಹೇಳಿಕೊಟ್ಟಿದೆ. ಇದರ ಮುಂದುವರಿದ ಭಾಗವೆಂಬಂತೆ ದಕ್ಷಿಣ ಭಾರತದಲ್ಲಿ ಮೊದಲ ಟ್ರಾಫಿಕ್ ಪೊಲೀಸ್ ತಲೆಯೆತ್ತಿದೆ.

18 ವರ್ಷ ಮೇಲಿನ ಆಸಕ್ತ ಮಹಿಳೆಯರಿಗೂ ಹೇಗೆ ದ್ವಿಚಕ್ರ ವಾಹನ ಚಲಾಯಿಸಬೇಕು ಎಂಬುದರ ಬಗ್ಗೆಯೂ ತರಬೇತಿ ಕೂಡಲಾಗುವುದು. ಇದಕ್ಕಾಗಿ ಮಹಿಳಾ ತರಬೇತುದಾರರು ಇರಲಿದ್ದಾರೆ ಎಂದು ಸಂಸ್ಥೆಯು ತಿಳಿಸಿದೆ. ಸದ್ಯದಲ್ಲೇ ಈ ಸೇವೆ ನಮ್ಮ ಬೆಂಗಳೂರಿಗೂ ವಿಸ್ತರಣೆಯಾಗಲಿ ಎಂಬುದು ನಮ್ಮ ಆಶಯ.

Most Read Articles

Kannada
English summary
Honda India has inaugurated its very first Traffic Park in South India. It is also the 8th Traffic Park across India. The Japanese manufacturer has tied up with Hyderabad Traffic Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X