ಪ್ರಸಕ್ತ ಸಾಲಿನಲ್ಲೇ ಹೊಸ ಹೋಂಡಾ ಸಿಬಿಆರ್150ಆರ್ ಎಂಟ್ರಿ

By Nagaraja

ವಿಶ್ವಾಸಾರ್ಹ ಮೋಟಾರುಸೈಕಲ್‌ ನಿರ್ಮಾಣಕ್ಕಾಗಿ ಹೆಸರು ಮಾಡಿರುವ ಜಪಾನ್‌ನ ದೈತ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಪ್ರಸಕ್ತ ಸಾಲಿನಲ್ಲೇ ದೇಶಕ್ಕೆ 2015 ಸಿಬಿಆರ್150ಆರ್ ಮಾದರಿಯನ್ನು ಪರಿಚಯಿಸಲಿದೆ.

ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಳ್ಳಲಿರುವ ಹೊಸ ಸಿಬಿಆರ್150ಆರ್ ಫೇಸ್‌ಲಿಫ್ಟ್ ಮಾದರಿಯು ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗಲಿದೆ ಎಂಬುದು ತಿಳಿದು ಬಂದಿದೆ. ಈ ಮೂಲಕ ಸಂಸ್ಥೆಯು ಈಗಿರುವ ಶ್ರೇಣಿಯ ಬೈಕ್‌ಗಳಿಗೆ ಹೊಸ ಹುರುಪು ನೀಡಲಿದೆ.

2015 Honda CBR150R

ಪ್ರಮುಖವಾಗಿ ಜಪಾನ್‌ನದ್ದೇ ಆಗಿರುವ ಯಮಹಾ ವೈಝಡ್ಎಫ್-ಆರ್15 ಮಾದರಿಗೆ ಪ್ರತಿಸ್ಪರ್ಧಿಯಾಗಿ ಹೋಂಡಾ ಸಿಬಿಆರ್150ಆರ್ ಗುರುತಿಸಿಕೊಂಡಿತ್ತು. ಇದರಂತೆ ಹೊಸ ಸಿಬಿಆರ್‌ನಲ್ಲಿ ಡಿಸೈನ್ ನಿಖರತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿದೆ.

ಹಾಗಿದ್ದರೂ ತಾಂತ್ರಿಕವಾಗಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು 150ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ. ಇದು 17.5 ಅಶ್ವಶಕ್ತಿ (12 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

2015 Honda CBR150R

ಇನ್ನು ಗಂಟೆಗೆ ಗರಿಷ್ಠ 131 ಕೀ.ಮೀ. ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೋಂಡಾ ಸಿಬಿಆರ್150ಆರ್ ಬೈಕ್‌ಗಿದೆ. ಅಂತೆಯೇ ಮುಂಭಾಗದಲ್ಲಿ ಡ್ಯುಯಲ್ ಫ್ರಂಟ್ ಹೆಡ್ ಲೈಟ್ ಪ್ರಮುಖ ಆಕರ್ಷಣೆಯಾಗಿರಲಿದೆ.

ಎಲ್ಲ ಹೊಸತನದ ಎಕ್ಸಾಸ್ಟ್ ಹಾಗೂ ಬಾಡಿ ಪ್ಯಾನೆಲ್‌ಗಳು ಹೊಸ ಲುಕ್ ನೀಡಲಿದೆ. ಹಾಗಿದ್ದರೂ ಬಿಡುಗಡೆ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಾಗಿದೆ. ಈಗಿರುವ ಮಾದರಿಯ ಮುಂಬೈ ಎಕ್ಸ್ ಶೋ ರೂಂ ಬೆಲೆ 1.21 ಲಕ್ಷ ರು.ಗಳಷ್ಟಿದ್ದು, ಹೊಸ ಬೈಕ್ ಹೆಚ್ಚು ಕಡಿಮೆ ಇದೇ ಬೆಲೆ ಕಾಪಾಡಿಕೊಳ್ಳುವ ನಿರೀಕ್ಷೆಯಿದೆ.

Most Read Articles

Kannada
English summary
The Japanese designers will be providing their 2015 CBR150R with minor design changes. Current generation 150cc motorcycle sports styling similar to VFR family. The 2015 model, however, will sport styling similar to that of the CBR family.
Story first published: Thursday, January 29, 2015, 9:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X