ಜ.29ರಂದು ಇಂಡಿಯಾ ಬೈಕ್ ವೀಕ್ ಮಂಗಳೂರಿಗೆ ಎಂಟ್ರಿ

By Nagaraja

ಬೈಕ್ ಪ್ರಿಯರು ಸದಾ ಎದುರು ನೋಡುವ ಮೋಟಾರ್ ಬೈಕ್ ಉತ್ಸವವಾಗಿರುವ ಭಾರತೀಯ ಬೈಕ್ ಸಪ್ತಾಹ (ಇಂಡಿಯಾ ಬೈಕ್ ವೀಕ್) ಚಂಡೀಗಡದಲ್ಲಿ ಆರಂಭವಾಗಿದೆ. ಇದರ ಭಾಗವಾಗಿ ಮಂಗಳೂರಿನಲ್ಲಿ ಜನವರಿ 29ರಂದು ಮೈನವಿರೇಳಿಸುವ ಕಾರ್ಯಕ್ರಮ ನಡೆಯಲಿದೆ.

ಯೂರೋಪ್‍ನ ಬೈಕ್ ಸ್ಟಂಟ್ ಚಾಂಪಿಯನ್ ಹಾಗೂ ರೆಡ್ ಬುಲ್ ಅಥ್ಲೀಟ್ ಅರಸ್ ಗಿಬಿಝಾ ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರುತ್ತಾರೆ. ಇಂಡಿಯಾ ಬೈಕ್ ವೀಕ್ ಆನ್ ಟೂರ್ ಹೆಸರಿನ ಈ ಕಾರ್ಯಕ್ರಮ ಮಂಗಳೂರಿನ ಸಿಟಿ ಸೆಂಟರ್ ಮಾಲ್‍ನಲ್ಲಿ 29ರಂದು 5 ಗಂಟೆ ಕಾಲ ನಡೆಯಲಿದೆ. ಗಿಜಿಝಾ ಅವರು ಇದರಲ್ಲಿ ಪಾಲ್ಗೊಳ್ಳುವ ಮೂಲಕ ಕರಾವಳಿ ಭಾಗದ ಸಾವಿರಾರು ಬೈಕ್ ಪ್ರಿಯರ ಕುತೂಹಲ ತಣಿಸಲಿದ್ದಾರೆ.

Aras Gibieza

ಟೂರ್‌ನ ಮೊದಲ ಹಂತವಾಗಿ ಚಂಡೀಗಡದಲ್ಲಿ ಆರಂಭಗೊಂಡ ಈ ಪ್ರದರ್ಶನವು ತದನಂತರದಲ್ಲಿ ಜೈಪುರ, ಅಹಮದಾಬಾದ್, ಸೂರತ್‍ನಲ್ಲಿ ಈ ಬೈಕ್ ಸ್ಟಂಟ್ ಪ್ರದರ್ಶನ ನಡೆಸಿದೆ. ಈಗ ಇದರ ಎರಡನೇ ಹಂತವಾಗಿ ಜನವರಿ 25ರಂದು ಪುಣೆಯಲ್ಲಿ ಪ್ರದರ್ಶನ ನೀಡಿ 29ರಂದು ಮಂಗಳೂರು ನಗರಕ್ಕೆ ಕಾಲಿಡಲಿದೆ. ಬೈಕ್ ಪ್ರಿಯರಿಗೆ ಹೊಸ ಹುರುಪು, ರೋಮಾಂಚನ ಉಂಟುಮಾಡಿ ಬೈಕ್ ಮೇಲಿನ ಮೋಹವನ್ನು ಇನ್ನಷ್ಟು ಹೆಚ್ಚಿಸುವುದೇ ಐಬಿಡಬ್ಲ್ಯು ಆರ್ ಟೂರ್‍‌ನ ಮುಖ್ಯ ಉದ್ದೇಶ.

ಎಂಟು ನಗರಗಳಲ್ಲಿ 40 ಸಾವಿರಕ್ಕೂ ಅಧಿಕ ಬೈಕ್ ಪ್ರಿಯರನ್ನು ತಲುಪುವ ಗುರಿ ಸಂಘಟಕರದ್ದು. ಬೈಕ್ ಪ್ರಿಯರನ್ನು ಇನ್ನಷ್ಟು ಸೆಳೆಯುವುದಕ್ಕಾಗಿಯೇ ಬರುತ್ತಿದ್ದಾರೆ ಯೂರೋಪ್‍ನ ಬೈಕ್ ಸ್ಟಂಟ್ ಚಾಂಪಿಯನ್ ಗಿಬಿಝಾ.

ಗಿಬಿಝಾ ಯಾರು ?
ಲಿಥುವಾನಿಯಾದ 25ರ ಹರೆಯದ ಗಿಬಿಝಾ ಅವರು ಇತ್ತೀಚಿನ ಯೂರೋ ಕಪ್ ಸ್ಟಂಟ್ ರೈಡಿಂಗ್‍ನ ಚಾಂಪಿಯನ್. ಚಿಕ್ಕ ವಯಸ್ಸಿನಿಂದಲೇ ಬೈಕ್ ಬಗ್ಗೆ ಮೋಹ ಬೆಳೆಸಿಕೊಂಡ ಗಿಜಿಝಾ ಅವರು ತಮ್ಮ 10ನೇ ವಯಸ್ಸಿನಲ್ಲೇ ವೀಲಿಂಗ್ ನಡೆಸಲು ಆರಂಭಿಸಿದ್ದರು. ಅಂದೇ ತಾವೊಬ್ಬ ಜಗತ್ತಿನ ಅತ್ಯುತ್ತಮ ಬೈಕ್ ಸ್ಟಂಟ್‍ಮ್ಯಾನ್ ಆಗಬೇಕೆಂಬ ಛಲ ತೊಟ್ಟು, ಅದನ್ನು ಸಾಧಿಸಲು ಕಠಿಣ ಅಭ್ಯಾಸ ನಡೆಸಿದರು. ಫಲವಾಗಿ ಅವರು ಇಂದು ಜಗತ್ತಿನ ಒಬ್ಬ ಶ್ರೇಷ್ಠ ಬೈಕ್ ಸ್ಟಂಟ್‍ಮ್ಯಾನ್ ಆಗಿ ಗಮನ ಸೆಳೆದಿದ್ದಾರೆ.

ಇಂಡಿಯಾ ಬೈಕ್ ವೀಕ್ 2015ರ ಭಾಗವಾಗಿ ಐಬಿಡಬ್ಲ್ಯು ಆನ್ ಟೂರ್ ನಡೆಯುತ್ತಿದ್ದು, ಫೆಬ್ರವರಿ 1ರಂದು ಕೊಯಮತ್ತೂರು ಹಾಗೂ ಫೆಬ್ರುವರಿ 4ರಂದು ಕೊಚ್ಚಿಯಲ್ಲಿ ಈ ರೋಮಾಂಚಕ ಬೈಕ್ ಸ್ಟಂಟ್ ಪ್ರದರ್ಶನ ನಡೆಯಲಿದೆ. ಕೊಚ್ಚಿಯಲ್ಲಿ ನಡೆಯುವ ಕಾರ್ಯಕ್ರಮದ ಮೂಲಕ 2ನೇ ಹಂತದ ಕಾರ್ಯಕ್ರಮ ಕೊನೆಗೊಳ್ಳಲಿದೆ. ಅಂತೆಯೇ ಗೋವಾದ ವೆಗಟೋರ್‌ನಲ್ಲಿ ಫೆಬ್ರವರಿ 20-21ರಂದು ಭವ್ಯ ಸಮಾರೋಪ ಸಮಾರಂಭ ನಡೆಯಲಿದೆ.

Most Read Articles

Kannada
English summary
India Bike Week tour will enter mangalore on Jan 29, 2015. Red Bull Stunt Champion Aras Gibieza to feature at India Bike Week On Tour. 
Story first published: Wednesday, January 28, 2015, 16:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X