ಭಾರತಕ್ಕೆ ಎಂಟ್ರಿ ಕೊಟ್ಟ ಕವಾಸಕಿ ಕೆಎಲ್‌ಎಕ್ಸ್ 110 ಬೈಕ್

By Nagaraja

ಜಪಾನ್ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಕವಾಸಕಿ, ಮಗದೊಂದು ಆಕರ್ಷಕ ಮಾದರಿಯೊಂದಿಗೆ ಭಾರತಕ್ಕೆ ಕಾಲಿರಿಸಿದೆ. ಅದುವೇ,

ಕವಾಸಕಿ ಕೆಎಲ್‌ಎಕ್ಸ್ 110

ಕವಾಸಕಿ ಕೆಎಲ್‌ಎಕ್ಸ್ 110 ಯುವ ಉತ್ಸಾಹಿ ಗ್ರಾಹಕರಲ್ಲಿ ಹೆಚ್ಚು ಕ್ರೀಡಾತ್ಮಕ ಚಾಲನಾ ಅನುಭವ ನೀಡಲಿದೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಿದ್ದರೆ ಬೆಲೆ ಎಷ್ಟು ಗೊತ್ತೇನು? ವಿವರಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಬೆಲೆ ಮಾಹಿತಿ

ಬೆಲೆ ಮಾಹಿತಿ

ಕವಾಸಕಿ ಕೆಎಲ್‌ಎಕ್ಸ್ 110 ಪುಣೆ ಎಕ್ಸ್ ಶೋ ರೂಂ ಬೆಲೆ 2.8 ಲಕ್ಷ ರು.ಗಳಾಗಿದೆ.

ರಸ್ತೆಯಲ್ಲಿ ಓಡಿಸಲು ಸಾಧ್ಯವೇ?

ರಸ್ತೆಯಲ್ಲಿ ಓಡಿಸಲು ಸಾಧ್ಯವೇ?

ಹಾಗಿದ್ದರೂ ನೂತನ ಕವಾಸಕಿ ಕೆಎಲ್‌ಎಕ್ಸ್ 100 ರಸ್ತೆ ಕಾನೂನು ಮಾನ್ಯತೆ ಪಡೆದ ಬೈಕ್ ಅಲ್ಲ. ಹಾಗಾಗಿ ರಸ್ತೆಯಲ್ಲಿ ಓಡಿಸಲು ಕಾನೂನಿನ ತೊಡಕು ಎದುರಾಗಲಿದೆ. ಹಾಗಿದ್ದರೂ ವಿಶೇಷ ಸಜ್ಜೀಕರಿಸಲಾದ ಟ್ರ್ಯಾಕ್ ಹಾಗೂ ಆಫ್ ರೋಡ್ ಗಳಲ್ಲಿ ಚಾಲನೆ ಮಾಡಬಹುದಾಗಿದೆ.

ಎಂಜಿನ್

ಎಂಜಿನ್

ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಕಡಿಮೆ ಸಾಮರ್ಥ್ಯದ 112 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಕಾರ್ಬ್ಯುರೇಟಡ್ ಎಂಜಿನ್ ಬಳಕೆಯಾಗಿದ್ದು, 8 ಎನ್‌ಎಂ ತಿರುಗುಬಲದಲ್ಲಿ 7.24 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಹಾಗೆಯೇ 4 ಸ್ಪೀಡ್ ಗೇರ್ ಬಾಕ್ಸ್ ಜೊತೆಗೆ ದಣಿವು ರಹಿತು ಚಾಲನೆಯಾಗಿ ಆಟೋ ಕ್ಲಚ್ ವ್ಯವಸ್ಥೆಯಿದೆ.

ಬ್ರೇಕ್

ಬ್ರೇಕ್

ನೂತನ ಕವಾಸಕಿ ಕೆಎಲ್‌ಎಕ್ಸ್ 110 ಮುಂದುಗಡೆ 90 ಎಂಎಂ ಫ್ರಂಟ್ ಡ್ರಮ್ ಮತ್ತು ಹಿಂದುಗಡೆ 110 ಎಂಎಂ ಡ್ರಮ್ ಬ್ರೇಕ್ ಪಡೆದುಕೊಂಡಿದೆ.

ಸಸ್ಪೆನ್ಷನ್

ಸಸ್ಪೆನ್ಷನ್

ಅದೇ ರೀತಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಅನುಕ್ರಮವಾಗಿ ಟೆಲಿಸ್ಕಾಪಿಕ್ ಫಾರ್ಕ್ ಮತ್ತು ಮೊನೊ ಶಾಕ್ ಸಸ್ಪೆನ್ಷನ್ ವ್ಯವಸ್ಥೆಗಳಿದೆ.

ತೂಕ

ತೂಕ

ಕೇವಲ 76 ಕೆ.ಜಿ ಮಾತ್ರ ತೂಕ ಹೊಂದಿರುವ ಕವಾಸಕಿ ಕೆಎಲ್‌ಎಕ್ಸ್ 110 ಹಗುರ ಭಾರದ ಬೈಕಾಗಿದ್ದು. ನಿರ್ವಹಣೆ ತುಂಬಾನೇ ಸುಲಭವಾಗಿದೆ.

ಸೀಟು ಎತ್ತರ, ಚಕ್ರಾಂತರ

ಸೀಟು ಎತ್ತರ, ಚಕ್ರಾಂತರ

ಇನ್ನುಳಿದಂತೆ 680ಎಂಎಂ ಸೀಟು ಎತ್ತರ ಹಾಗೂ 215 ಎಂಎಂ ಗ್ರೌಂಡ್ ಕ್ಲಿಯರನ್ಸ್ ಪಡೆದುಕೊಂಡಿದೆ.

ಇಂಧನ ಟ್ಯಾಂಕ್

ಇಂಧನ ಟ್ಯಾಂಕ್

ಅಂತಿಮವಾಗಿ ಚಿಕ್ಕದಾದ 3.78 ಲೀಟರುಗಳ ಇಂಧನ ಟ್ಯಾಂಕ್ ಇದು ಪಡೆದುಕೊಂಡಿದೆ.

ಸಿಬಿಯು

ಸಿಬಿಯು

ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ದೇಶವನ್ನು ತಲುಪಲಿರುವ ಕವಾಸಕಿ ಕೆಎಲ್‌ಎಕ್ಸ್ 110 ಆಫ್ ರೋಡ್ ಬೈಕ್ ಪ್ರಿಯರಿಗೆ ಅದ್ಭುತ ಚಾಲನಾ ಅನುಭವ ನೀಡಲಿದೆ ಎಂಬುದರಲ್ಲಿ ಸಂದೇಹವಿಲ್ಲ.

Most Read Articles

Kannada
English summary
Kawasaki KLX 110 Launches In India For Rs. 2.8 Lakh
Story first published: Monday, November 23, 2015, 12:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X