ಅತಿ ಶೀಘ್ರದಲ್ಲೇ ಕವಾಸಕಿ ನಿಂಜಾ ಎಚ್2 ಭಾರತಕ್ಕೆ

By Nagaraja

ಜಪಾನ್ ಮೂಲದ ದೈತ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಕವಾಸಕಿ ಇತ್ತೀಚೆಗಷ್ಟೇ ತನ್ನ ಹೈಪರ್ ಬೈಕ್ ಗಳಾದ ನಿಂಜಾ ಎಚ್2 ಹಾಗೂ ಎಚ್2ಆರ್ ಮಾದರಿಗಳನ್ನು ಬಿಡುಗಡೆಗೊಳಿಸಿತ್ತು. ಪ್ರಸ್ತುತ ಸಂಸ್ಥೆಯೀಗ ಈ ಬಹುನಿರೀಕ್ಷಿತ ಮಾದರಿಗಳನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

ವರದಿಗಳ ಪ್ರಕಾರ 2015 ಎಪ್ರಿಲ್ ಮೊದಲ ವಾರದಲ್ಲಿ ಕವಾಸಕಿ ನೂತನ ಬೈಕ್ ಗಳು ಭಾರತ ಪ್ರವೇಶವಾಗಲಿದೆ. ಪ್ರಸ್ತುತ ಬೈಕ್ ಗೆ ದೇಶದಲ್ಲಿ ಈಗಾಗಲೇ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

kawasaki ninja h2

ಇದರಂತೆ ಬುಕ್ಕಿಂಗ್ ಸ್ವೀಕರಿಸುತ್ತಿರುವ ಜಪಾನ್ ಸಂಸ್ಥೆಯು ಯಾವಾಗ ಬೈಕ್ ಹಸ್ತಾಂತರ ಮಾಡಲಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಯನ್ನು ನೀಡುತ್ತಿಲ್ಲ. ಅಷ್ಟಕ್ಕೂ ನಿಂಜಾ ಎಚ್2 ಹೈಪರ್ ಮೋಟಾರ್ ಸೈಕಲ್ ನ ಬೆಲೆ ಎಷ್ಟು ಗೊತ್ತೇ?

ಇದು ಪುಣೆ ಆನ್ ರೋಡ್ ಬೆಲೆ 32,80 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಅಲ್ಲದೆ ಭಾರತ ವಾಹನ ಮಾರುಕಟ್ಟೆಯನ್ನು ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ತಲುಪಲಿದೆ.

ಎಂಜಿನ್ ತಾಂತ್ರಿಕತೆ:
998 ಸಿಸಿ,
ಇನ್ ಲೈನ್ ಫೋರ್ ಸಿಲಿಂಡರ್ ಮತ್ತು ಕವಾಸಕಿ ಸೂಪರ್ ಚಾರ್ಜರ್,
ಲಿಕ್ವಿಡ್ ಕೂಲಿಂಗ್,
6 ಸ್ಪೀಡ್ ಗೇರ್ ಬಾಕ್ಸ್,
200 ಅಶ್ವಶಕ್ತಿ,
156 ತಿರುಗುಬಲ

Most Read Articles

Kannada
English summary
Japanese two-wheeler manufacturer, Kawasaki recently launched its hyperbike the Ninja H2 and H2R. Now they will be officially launching the Ninja H2 in India during the 1st week of April, 2015.
Story first published: Saturday, March 28, 2015, 16:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X